ಸಾಹಿತ್ಯಕ್ಕೆ ಜಾತಿ,ಜನಾಂಗಳೆಂಬ ಭೇದ-ಭಾವಗಳಿಲ್ಲ: ಡಾ| ಪ್ರಭಾಕರ ಶಿಶಿಲ


Team Udayavani, Jul 28, 2018, 6:20 AM IST

26ss2udghatane.jpg

ಶನಿವಾರಸಂತೆ: ಕನ್ನಡ ಸಾಹಿತ್ಯದಲ್ಲಿ ಜಾತಿ ಜನಾಂಗ ಉಲ್ಲೇಖ ಸಲ್ಲದು ಸಾಹಿತ್ಯಕ್ಕೆ ಜಾತಿ, ಜನಾಂಗಳೆಂಬ ಬೇದಭಾವಗಳಿಲ್ಲ, ಸಾಹಿತ್ಯ ಎಂಬುವುದು ಜಾತಿ ಧರ್ಮಕ್ಕಿಂತ ಮಿಗಿಲಾದದ್ದು ಇಂಥಹ ಸಾಹಿತ್ಯ, ಕಾವ್ಯ, ಶರಣ ಸಾಹಿತ್ಯಗಳ ಮೂಲಕ ಮಾನವ ಧರ್ಮವೆ ಮೂಲ ಧರ್ಮ ಎಂದು ಸಾರುತ್ತದೆ  ಎಂದು ಹಿರಿಯ ಸಾಹಿತಿ ಡಾ. ಪ್ರಭಾಕರ್‌ ಶಿಶಿರ ಅಭಿಪ್ರಾಯ ಪಟ್ಟರು. ಅವರು ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಜಂಗುಮರ ಶರಣೆ ಲಿಂಗೆ„ಕೆ ಶಾಂತಮ್ಮ ಪ್ರಧಾನ ವೇದಿಕೆಯಲ್ಲಿ ನಡೆದ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು ಕೊಡಗು ಜಿಲ್ಲೆ ತನದೆ ಆದ ಇತಿಹಾಸವನ್ನು ಹೊಂದಿರುವ ಹಾಗೂ ವಿಶಿಷ್ಠ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು ದೇಶ ಸೇವೆಯಲ್ಲೂ ಹೆಸರುಗಳಿಸಿದೆ ಎಂದರು.

12ನೇ ಶತಮಾನದ ಬಸವಣ್ಣರು ಹಾಗೂ ನವಯುಗದ ಕುವೆಂಪು ಎಂದೂ ಸಹ ಜಾತಿ ಜನಾಂಗಗಳಿಗೆ ಮಹತ್ವವನ್ನು ಕೊಟ್ಟಿರಲ್ಲಿಲ್ಲ, ಬಸವಣ್ಣ ಮತ್ತು ಕುವೆಂಪು ಸಾರಿರುವ ಸಂದೇಶಗಳನ್ನು ಪಾಲನೆ ಮಾಡಿದರೆ ಇಂದು ಸಮಾಜದಲ್ಲಿ ನಡೆಯುತ್ತಿರುವ ಜಾತಿ ಧರ್ಮಗಳೆಂಬ ಕಲಹ,  ಜಾತಿ ಜನಾಂಗದ  ಹೆಸರಿನಲ್ಲಿ ರಾಜಕಿಯವಾಗುತ್ತಿರಲ್ಲಿಲ್ಲ ಎಂದು ವಿಷಾಧಿಸಿದರು. ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ-ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿ ಧರ್ಮ ಜಾತಿ ಜನಾಂಗಕ್ಕಿ ದೊಡ್ಡದ್ದು, ಈ ಉದ್ದೇಶದಿಂದ ಕನ್ನಡ ಸಾಹಿತ್ಯ ಜಾತ್ರೆಯನ್ನು ನಡೆಸಲಾಗುತ್ತದೆ ಎಂದರು. 
 
ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಅವರು  ಮಾತನಾಡಿ ಕನ್ನಡ ಭಾಷೆಯನ್ನು ವಿದ್ಯಾರ್ಥಿ ಹಂತದಲ್ಲೆ ಪರಿಚಯಿಸಬೇಕಾಗಿದೆ ಎಂದರು.

ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್‌.ವಿರೂಪಾಕ್ಷಯ್ಯ ಅವರು ಮಳಿಗೆಗಳನ್ನು ಉದ್ಘಾಟಿಸಿದರು. ಜಿ.ಪಂ.ಸದಸ್ಯೆ ಕುಮುದಾ ಧರ್ಮಪ್ಪ, ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ್‌ ಮಲ್ಲೋರಹಟ್ಟಿ ಸಮಾಜ ಕಲ್ಯಾಣ ಜಿಲ್ಲಾ ಅಧಿಕಾರಿ ಮಾಯಾದೇವಿ ಗಲಗಲಿ ಮೊದಲಾದವರು ಮಾತನಾಡಿದರು.
 
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್‌.ಲೋಕೇಶ್‌ಸಾಗರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ.ಸದಸ್ಯೆ ಸರೋಜಮ್ಮ, ಕಲ್ಮಠದ ಮಹಾಂತಸ್ವಾಮೀಜಿ, ತಾ.ಪಂ.ಸದಸ್ಯೆ ಲೀಲಾವತಿ, ಗ್ರಾ.ಪಂ.ಅಧ್ಯಕ್ಷೆ ವೀಣಾ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಕೆ.ಚಂದ್ರಶೇಖರ್‌, ಗ್ರಾಮದ ಹಿರಿಯ ಸಿದ್ದಮಲ್ಲಯ್ಯ, ಕಸಾಪ ಕೋಶಾಧಿಕಾರಿ ಎಸ್‌.ಎ.ಮುರುಳೀಧರ್‌, ಉಪನ್ಯಾಸಕ ಕೆ.ಪಿ.ಜಯಕುಮಾರ್‌, ಕಸಾಪದ ಎಲ್‌.ಎಂ.ಪ್ರೇಮಾ ಪ್ರಮುಖ ರಾದ ನಾಗರಾಜಶೆಟ್ಟಿ, ದೀಪಕ್‌, ರವಿ ಸುಬ್ಬಯ್ಯ, ಪ್ರವೀಣ್‌ಉತ್ತಪ್ಪ, ಕವನ್‌ ಕಾರ್ಯಪ್ಪ, ಮಾಧ್ಯಮಕಾಯದರ್ಶಿ ಎನ್‌. ಎ.ಅಶ್ವಥ್‌, ಕಸಾಪದ ಜವರಪ್ಪ, ವಸತಿ ಪ್ರಾಂಶುಪಾಲೆ ಕೆ.ಎನ್‌.ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಪಿಡಿಒ ಚಂದ್ರೇಗೌಡ ವೇದಿಕೆಯಲ್ಲಿದ್ದರು.

ಉದ್ಘಾಟನೆ
ವಸತಿ ಶಾಲೆಯ ಆವರಣದಲ್ಲಿ ತಹಶೀಲ್ದಾರ್‌ ಮಹೇಶ್‌ ಧjಜಾ ರೋಹಣ ಮೂಲಕ  ಚಾಲನೆ ನೀಡಿದರು.ಕ್ಯಾಪ್ಟನ್‌ ಚಿಣ್ಣಪ್ಪ ದ್ವಾರ,ಕೈಸರವಳ್ಳಿ ಬಸಪ್ಪದ್ವಾರ,ಎಂ.ಡಿ.ಸುಬ್ಬಯ್ಯ ದ್ವಾರ,ಮುಕ್ಕಾಟಿ ಗಣಪತಿ ದ್ವಾರ,ಎಚ್‌.ಎಂ,.ಶಾಂತ ವೀರಪ್ಪ ದ್ವಾರಗಳನ್ನು ಸ್ಥಳೀಯ ಜನ ಪ್ರತಿನಿಧಿಗಳು ಉದ್ಘಾಟಿಸಿದರು. ಕ್ಯಾಪ್ಟನ್‌ ಸಿ.ಕೆ.ಶಿವರಾಮ್‌ ಸಭಾಂಗಣ ಹಾಗೂ ಜಂಗಮರ ಶರಣೆ ಲಿಂಗೈಕ್ಯ ಶಾಂತಮ್ಮ ಪ್ರಧಾನ ವೇದಿಕೆಯನ್ನು ಕೂಡ ಉದ್ಘಾಟಿಸಲಾಯಿತು.

ಮಳೆಯ ನಡುವೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ 
ಸಮ್ಮೇಳನಾಧ್ಯಕ್ಷೆ ಜಲ ಕಾಳಪ್ಪ ಅವರ ಮರೆವಣಿಗೆಯನ್ನು ತೆರದ ವಾಹನದಲ್ಲಿ ಆಲೂರುಸಿದ್ದಾಪುುರ ಪೆಟ್ರೋಲ್‌ಬಂಕ್‌ ಮಾರ್ಗವಾಗಿ ಮುಖ್ಯರಸ್ತೆಯ ಮೂಲಕ ವಸತಿ ಶಾಲೆಯಲ್ಲಿ ನಿರ್ಮಿಸಿದ್ದ ಜಂಗಮರ ಶರಣೆ ಲಿಂಗೈಕ್ಯಶಾಂತಮ್ಮ ಪ್ರಧಾನ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯು ಮಂಗಳವಾದ್ಯ,ಪೂರ್ಣಕುಂಭ, ಡೊಳ್ಳುಕುಣಿತ, ಕಂಸಾಳೆ, ಸ್ತ್ರೀಶಕ್ತಿ, ಧರ್ಮಸ್ಥಳ ಸಂಘ,ಹಾಗೂ ಕನ್ನಡಪರ ಸಂಘಟನೆಗಳು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರ ಸಂಘ, ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾಡ ದೇವತೆ ಭುವನೇಶ್ವರಿಯ ಕನ್ನಡ ತೇರಿನೊಂದಿಗೆ ಮಳೆಯ ನುಡುವೆ ಅದ್ದೂರಿಯಾಗಿ  ಸಾಗಿತು.

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

2

Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್‌ ಮೂಲಕ ನಕ್ಸಲ್‌ ಸೋಮನ್‌ ವಿಚಾರಣೆ

court

Kasaragod: 300 ಪವನ್‌ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.