ಭಾರತದ ವನಿತಾ ಕಂಪೌಂಡ್ ಆರ್ಚರಿ ತಂಡವೀಗ ನಂ.1
Team Udayavani, Jul 28, 2018, 6:00 AM IST
ಕೋಲ್ಕತಾ: ಜಕಾರ್ತಾ ಏಶ್ಯನ್ ಗೇಮ್ಸ್‌ಗೆ ಅಣಿಯಾಗಿರುವ ಭಾರತದ ವನಿತಾ ಕಂಪೌಂಡ್ ಬಿಲ್ಗಾರಿಕಾ ತಂಡವೀಗ ಹೊಸ ಇತಿಹಾಸ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ವಿಶ್ವದ ನಂಬರ್ ವನ್ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. 5ನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಗುರುವಾರ ರಾತ್ರಿ ಬಿಡುಗಡೆಗೊಂಡ ನೂತನ ಆರ್ಚರಿ ರ್‍ಯಾಂಕಿಂಗ್‌ನಲ್ಲಿ ಭಾರತದ ವನಿತಾ ಕಂಪೌಂಡ್ ಆರ್ಚರಿ ತಂಡ ಒಟ್ಟು 342.6 ಅಂಕಗಳೊಂದಿಗೆ 5ನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ನೆಗೆದಿದೆ. ದ್ವಿತೀಯ ಸ್ಥಾನದಲ್ಲಿರುವ ಚೈನೀಸ್ ತೈಪೆಗಿಂತ 6 ಅಂಕಗಳ ಮುನ್ನಡೆ ಕಾಯ್ದುಕೊಂಡಿದೆ.
ವಿ. ಜ್ಯೋತಿ ಸುರೇಖಾ, ತಿೃಷಾ ದೇಬ್, ಪಿ. ಲಿಲಿ ಚಾನು, ಮುಸ್ಕಾನ್ ಕಿರಾರ್, ದಿವ್ಯಾ ದಯಾಳ್ ಹಾಗೂ ಮಧುಮಿತಾ ಅವರನ್ನೊಳಗೊಂಡ ಭಾರತ ಕಳೆದ 4 ವಿಶ್ವಕಪ್ ಹಂತದ ಸ್ಪರ್ಧೆಗಳಲ್ಲಿ 2 ಪದಕ ಗೆದ್ದ ಸಾಧನೆ ಮಾಡಿತ್ತು. ಅಂಟಾಲ್ಯಾ ಮತ್ತು ಬರ್ಲಿನ್ ಸ್ಪರ್ಧೆಗಳೆರಡರಲ್ಲೂ ಬೆಳ್ಳಿ ಪದಕ ಜಯಿಸಿತ್ತು. ಜ್ಯೋತಿ ಸುರೇಖಾ ಮತ್ತು ಮುಸ್ಕಾನ್ ಕಿರಾರ್ ಈ ಎರಡೂ ಪದಕ ವಿಜೇತ ಭಾರತೀಯ ತಂಡದ ಸದಸ್ಯರಾಗಿದ್ದರು. ಅಂಟಾಲ್ಯಾದಲ್ಲಿ ದಿವ್ಯಾ ದಯಾಳ್ ಹಾಗೂ ಬರ್ಲಿನ್‌ನಲ್ಲಿ ತಿೃಷಾ ದೇಬ್ ಭಾರತ ತಂಡದ ತೃತೀಯ ಸದಸ್ಯರಾಗಿದ್ದರು. ಅಮೆರಿಕದ ಸಾಲ್ಟ್ಲೇಕ್ ಸಿಟಿಯಲ್ಲಿ ನಡೆದ 3ನೇ ಹಂತದ ಸ್ಪರ್ಧೆಗೆ ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ (ಎಎಐ) ಅರ್ಜಿ ಸಲ್ಲಿಸಿಲ್ಲ.
ಕೋಚ್ ತೇಜ ಸಂತಸ
“ಕೊನೆಗೂ ನಾವಿದನ್ನು ಸಾಧಿಸಿದೆವು. ದೇವರ ದಯೆಯಿಂದ ನಮ್ಮ ತಂಡವೀಗ ವಿಶ್ವದ ಅಗ್ರಸ್ಥಾನಕ್ಕೆ ನೆಗೆದಿದೆ. ಎಲ್ಲ ಸಾಧಕಿಯರಿಗೂ ಅಭಿನಂದನೆಗಳು. ಬೇಸರವೆಂದರೆ, ಕಂಪೌಂಡ್ ಆರ್ಚರಿ ಸ್ಪರ್ಧೆಯನ್ನು ಒಲಿಂಪಿಕ್ಸ್‌ನಲ್ಲಿ ಅಳವಡಿಸದಿರುವುದು…’ ಎಂಬುದಾಗಿ ಭಾರತ ತಂಡದ ಕೋಚ್ ಜೀವನ್‌ಜೋತ್ ಸಿಂಗ್ ತೇಜ ಪ್ರತಿಕ್ರಿಯಿಸಿದ್ದಾರೆ.
ಸುರೇಖಾ-ಅಭಿಷೇಕ್ ನಂ.5
ಕಂಪೌಂಡ್ ಮಿಶ್ರ ತಂಡ ರ್‍ಯಾಂಕಿಂಗ್‌ನಲ್ಲಿ ಜ್ಯೋತಿ ಸುರೇಖಾ-ಅಭಿಷೇಕ್ ವರ್ಮ 5ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಈ ಜೋಡಿ ಸೆ. 29-30ರಂದು ಟರ್ಕಿಯಲ್ಲಿ ನಡೆಯುವ ಕಂಪೌಂಡ್ ಮಿಕ್ಸೆಡ್ ಟೀಮ್ ಸ್ಪರ್ಧೆಗೆ ಅರ್ಹತೆ ಪಡೆದಿದೆ. ಇದೇ ವೇಳೆ ರಿಕರ್ವ್ ಮಿಶ್ರ ತಂಡ 7ನೇ ರ್‍ಯಾಂಕಿಂಗ್ ಕಾಯ್ದುಕೊಂಡಿದೆ. ವನಿತಾ ರಿಕರ್ವ್ ತಂಡ 8ನೇ ಸ್ಥಾನದಲ್ಲೇ ಮುಂದುವರಿದರೆ, ಪುರುಷರ ರಿಕರ್ವ್ ತಂಡ 12ನೇ ಸ್ಥಾನಕ್ಕೆ ಜಾರಿದೆ. ಕಳೆದ ವರ್ಷ ಮೆಕ್ಸಿಕೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವನಿತಾ ರಿಕರ್ವ್ ತಂಡ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 2014ರ ಏಶ್ಯಾಡ್‌ನ ಕಂಪೌಂಡ್ ಟೀಮ್ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡ ಚಿನ್ನ ಹಾಗೂ ವನಿತಾ ತಂಡ ಕಂಚಿನ ಪದಕ ಜಯಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jalandhara Kannada Movie: ಜಲಂಧರ ಮೇಲೆ ಪ್ರಮೋದ್ ಕಣ್ಣು
Rishab Shetty: ʼಜೈ ಹನುಮಾನ್ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್ ಶೆಟ್ಟಿ?
Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ
India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?
Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.