ಸರ್ವ ಭಕ್ಷಕ ಹಿಮಾಲಯ ಮರ ಹಕ್ಕಿ
Team Udayavani, Jul 28, 2018, 12:07 PM IST
ನೀಲಗಿರಿ ಪರ್ವತ ಭಾಗ, ಅಸ್ಸಾಂ, ಬೆಂಗಾಲ, ಪಶ್ಚಿಮ ಘಟ್ಟದ ಭಾಗಗಳಿಂದ ಆರಂಭಿಸಿ, ವಿಶಾಖ ಪಟ್ಟಣದವರೆಗೂ ಈ ಹಕ್ಕಿಯ ಇರುನೆಲೆಗಳು ಇವೆ. Gray Treepi – Himalayan treepie, (Dendrocitta formosae) R-Myna + ಇದರ ಕೂಗಿನ ದನಿಯಲ್ಲಿ ಸ್ವಲ್ಪ ಭಿನ್ನತೆ ಇದೆ. ಇದು ಸಹ ಇತರ ಮರಹಕ್ಕಿಗಳಂತೆ ಮರದ ತುದಿ ಇಲ್ಲವೇ ಬಿದಿರು ಮೆಳೆಗಳ ಹತ್ತಿರ ಕುಳಿತು ತನ್ನ ಬೆನ್ನು, ಬಾಲ ಬಗ್ಗಿಸಿ ಗೂನು ಬೆನ್ನು ಮಾಡಿಕೊಂಡಿ ಸಿಳ್ಳೆ ಹೊಡೆಯುತ್ತದೆ.
ಕಂದು ಬೂದು ಮರಹಕ್ಕಿ ಎಂಬ ಹೆಸರು ಇದಕ್ಕಿದೆ. ಇದು ಕಾಗೆಯ ಕುಟುಂಬಕ್ಕೆ ಸೇರಿದ, ಉದ್ದ ಬಾಲದ ಹಕ್ಕಿ.
ಬೂದು ಬಣ್ಣದ ಹಕ್ಕಿ ಎಂದು ಬಣ್ಣ ವ್ಯತ್ಯಾಸ ಮತ್ತು ಗರಿಗಳ ವಿನ್ಯಾಸದಿಂದ ಬೇರೆ ಬೇರೆ ಜಾತಿಯ ಹಕ್ಕಿಯಿಂದ ಬೇರ್ಪಡಿಸಿ ಗುರುತಿಸಬಹುದು. ಇತರ ಹಕ್ಕಿಗಳ ಗೂಡಿಗೆ ಸೇರಿ, ಅಲ್ಲಿರುವ ಹಕ್ಕಿಯ ಮೊಟ್ಟೆಯನ್ನು ಕದ್ದು ತಿನ್ನುವುದರಿಂದ ಇದಕ್ಕೆ ಕದುಗ ಹಕ್ಕಿ ಎಂದೂ ಹಳ್ಳಿಗರು ಕರೆಯುತ್ತಾರೆ. ಕಾಗೆಯ ಕುಟುಂಬಕ್ಕೆ ಸೇರಿದ್ದರೂ ಈ ಹಕ್ಕಿಯ ಚುಂಚು ಕಾಗೆ ಚುಂಚಿನಂತೆ ಇಲ್ಲ. ಬೂದು ಗಪ್ಪು ಬಣ್ಣ ಇದ್ದು ತುದಿ ಚೂಪಾಗಿ ಕೆಳಮುಖ ಬಾಗಿರುವ ದೃಢವಾದ ಚುಂಚಿದೆ. ಇದು ಮಾಂಸ ಹಾಗೂ ದೊಡ್ಡ ಹಣ್ಣುಗಳನ್ನೂ ತಿನ್ನಲೂ ಸಹಾಕವಾಗಿದೆ.
ಪಪ್ಪಾಯಿ, ಹಲಸು, ಪೈನಾಪಲ್ ಮುಂತಾದ ಹಣ್ಣುಗಳನ್ನು ಕತ್ತರಿಸಿ ತಿನ್ನಲು ಇದರ ಚುಂಚಿನಿಂದ ಅನುಕೂಲವಾಗಿದೆ. ಇದರ ಮೈಬಣ್ಣ ಕಂದು ಮಿಶ್ರಿತ ಬೂದು. ಮುಖ, ಮುಂದೆಲೆ, ಕುತ್ತಿಗೆಯ ಮುಂಭಾಗ ಕಪ್ಪಾಗಿದೆ. ರೆಕ್ಕೆಯ ಮೇಲ್ಭಾಗ ಬೂದು ಬಣ್ಣದಿಂದ ಕೂಡಿದೆ. ಕಪ್ಪು ಬಣ್ಣದ ರೆಕ್ಕೆಯಲ್ಲಿ ಬಿಳಿ ಬಣ್ಣದ ಮಚ್ಚೆ ಎದ್ದು ಕಾಣುತ್ತದೆ. ಹೊಟ್ಟೆ , ಬಾಲದ ಮೇಲ್ಭಾಗವು ಕೆಂಪು ಮಿಶ್ರಿತ ಬೂದು ಬಣ್ಣದಿಂದ ಕೂಡಿದೆ. ರೆಂಪ ಅಂದರೆ ಬಾಲದ ಬುಡದಲ್ಲಿ ಬಾಲ ಕೇಸರಿ ಬಣ್ಣ ಇರುವುದರಿಂದ ಇದು ಹಿಮಾಲಯ ಮರದ ಹಕ್ಕಿ ಅಂತ ಗುರುತಿಸಬಹುದು.
ಬೂದು ಬಣ್ಣದ ಮರಹಕ್ಕಿ ಸುಮಾರು 42-43 ಸೆಂ.ಮೀ. ದೊಡ್ಡದಾಗಿರುತ್ತದೆ. 80 ರಿಂ 121 ಗ್ರಾಂ. ತೂಕ. ಇಡೀ ಹಕ್ಕಿಯನ್ನು ನೋಡಿದಾಗ ಬಾಲದ ಉದ್ದವೇ ಎದ್ದು ಕಾಣುತ್ತದೆ. ಇದರ ಮೈಬಣ್ಣ ಸ್ಕೂಟಿ ಗ್ರೇ. ಸಮಶೀತೊಷ್ಣ ಮತ್ತು ಶೀತೋಷ್ಣವಲಯದ, ದೊಡ್ಡ ಮರಗಳಿರುವಲ್ಲಿ, ಕೆಲವೊಮ್ಮೆ ಚಿಕ್ಕ ಕುರುಚಲು ಕಾಡಿರುವ ಗುಡ್ಡ ಪ್ರದೇಶದಲ್ಲೂ ಕಾಣುತ್ತವೆ. ಈ ಹಕ್ಕಿ ಕೆಲವೊಮ್ಮ ಡ್ರೋಂಗೋ ಮತ್ತು ಕಾಗೆಗಳ ಜೊತೆ ಇದು ಕಾದಾಡುವುದೂ ಉಂಟು. ಇದಕ್ಕೆ ಕಾರಣ ತಿಳಿದಿಲ್ಲ. ಡ್ರಾಂಗೋಗಳು ತನ್ನ ಮೊಟ್ಟೆ ಗೂಡಿಗೆ ಹಾನಿಮಾಡುವುದೆಂಬ ಭಾವನೆ ಇರಬಹುದು.
ನೀಲಗಿರಿ ಪರ್ವತ ಭಾಗ, ಅಸ್ಸಾಂ, ಬೆಂಗಾಲ, ಪಶ್ಚಿಮ ಘಟ್ಟದ ಭಾಗಗಳಿಂದ ಆರಂಭಿಸಿ, ವಿಶಾಖ ಪಟ್ಟಣದವರೆಗೂ ಈ ಹಕ್ಕಿಯ ಇರುನೆಲೆಗಳು ಇವೆ. ಇದರ ಕೂಗಿನ ದನಿಯಲ್ಲಿ ಸ್ವಲ್ಪ ಭಿನ್ನತೆ ಇದೆ. ಇದು ಸಹ ಇತರ ಮರಹಕ್ಕಿಗಳಂತೆ ಮರದ ತುದಿ ಇಲ್ಲವೇ ಬಿದಿರು ಮೆಳೆಗಳ ಹತ್ತಿರ ಕುಳಿತು ತನ್ನ ಬೆನ್ನು, ಬಾಲ ಬಗ್ಗಿಸಿ ಗೂನು ಬೆನ್ನು ಮಾಡಿಕೊಂಡು ಸಿಳ್ಳೆ ಹೊಡೆಯುತ್ತದೆ. ಬಾಟಲಿಯಲ್ಲಿ ಗಾಳಿಊದಿದಾಗ ಬರುವಂತಹ ಸಿಳ್ಳೆ ದನಿಯನ್ನೇ ಹೋಲುತ್ತದೆ. ಮಿಲನದ ಸಂದರ್ಭದಲ್ಲಿ ಗಂಡು- ಹೆಣ್ಣನ್ನು ವಿಭಿನ್ನ ದನಿಯಲ್ಲಿ ಕರೆಯುತ್ತದೆ. ಅದರ ಸಮೀಪಬಂದು ತನ್ನ ಪ್ರಣಯ ಪ್ರಕಟಣೆ ಮಾಡಿ, ಹೆಣ್ಣು ಹಕ್ಕಿಯನ್ನು ಓಲೈಸುತ್ತದೆ.
ಉತ್ತ ಹೊಲಗಳಲ್ಲಿರುವ ಮೃದ್ವಂಗಿಗಳು ಹುಳ, ಎರೆ ಹುಳು, ಮಣ್ಣು ಹುಳಗಳನ್ನು ಈ ಹೆಕ್ಕಿ ತಿನ್ನುತ್ತದೆ. ಆಲ, ಬಸರಿ, ಹಳಗೇರು ಹಣ್ಣು ಬಿಟ್ಟಾಗ ಹಾರ್ನ್ ಬಿಲ್ ಹಕ್ಕಿಗಳ ಜೊತೆ ಸೇರಿ ಸೇವಿಸುವುದುಂಟು. ಚಿಕ್ಕಹುಳುಗಳು, ಹಕ್ಕಿ ಮೊಟ್ಟೆ, ದಿರ್ಬಲ ಹಕ್ಕಿ ಮರಿ, ಹರಣೆ, ಓತಿಕ್ಯಾತ, ಚಿಕ್ಕ ಹಸಿರು ಹಾವುಗಳನ್ನು ಹಿಡಿದು ಭೋಜನ ಮಾಡುತ್ತದೆ. ಕೆಲವೊಮ್ಮೆ ಕಾಳು, ಬೀಜಗಳನ್ನೂ ತಿನ್ನುವುದಿದೆ. ಹಾಗಾಗಿ ಇದನ್ನು ಸರ್ವ ಭಕ್ಷಕ ಎಂದೂ ಕರೆಯುತ್ತಾರೆ. 4-5 ಗುಂಪಿನಲ್ಲಿ ಇಲ್ಲವೇ ದೊಡ್ಡ ಬೆಟ್ಟದ ಭಾಗದಲ್ಲಿ 20 ಕ್ಕಿಂತ ಹೆಚ್ಚು ಹಕ್ಕಿಗಳಿರುವ ಗುಂಪು ಸಹ ಸಿಕ್ಕಿದೆ. ಕೆಲವೊಮ್ಮೆ ಬಿತ್ತನೆಗೆ ತಯಾರು ಮಾಡಿರುವ ಉತ್ತ ಹೊಲಗಳ ಸಮೀಪವೂ ಗಸ್ತು ತಿರುಗುತ್ತಿರುತ್ತದೆ. ಕಾಗೆಯಂತೆ ಮರದ ತುಂಡು ಮತ್ತು ಬಿದಿರೆಲೆ, ನಾರಿನಿಂದ ಗೂಡು ಕಟ್ಟಿರುತ್ತದೆ. ಇದರ ಮೊಟ್ಟಯು ತಿಳಿ ನೀಲಿಬಣ್ಣದಿಂದ ಕೂಡಿರುತ್ತದೆ. ಗಂಡು-ಹೆಣ್ಣು ಎರಡೂ ಸೇರಿ-ಗೂಡು ಕಟ್ಟುವುದು ರೂಢಿ.
ಪಿ.ವಿ.ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.