ಹುರಿಯತ್ ನಾಯಕರನ್ನು ಮಾತುಕತೆಗೆ ಸೇರಿಸಲು ಮೆಹಬೂಬ ಆಗ್ರಹ
Team Udayavani, Jul 28, 2018, 4:04 PM IST
ಜಮ್ಮು : ಅಧಿಕಾರ ದಾಹದಲ್ಲಿ ತನ್ನ ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷ (ಪಿಡಿಪಿ) ಒಡೆಯುವುದರ ವಿರುದ್ಧ ಕೇಂದ್ರಕ್ಕೆ ಈ ಹಿಂದೆ ಎಚ್ಚರಿಕೆ ನೀಡಿದ್ದ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಇದೀಗ ಕಾಶ್ಮೀರ ವಿಷಯದಲ್ಲಿ ಹುರಿಯತ್ ನಾಯಕರನ್ನು ಮಾತುಕತೆಗೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
‘ರಮ್ಜಾನ್ ಸಮಯದಲ್ಲಿ ನಾನು ಕದನ ವಿರಾಮಕ್ಕೆ ಮುತುವರ್ಜಿ ವಹಿಸಿದ್ದೆ; ಹುರಿಯತ್ ಬಗ್ಗೆ ಕೇಂದ್ರ ಸರಕಾರ ಧನಾತ್ಮಕ ನಿಲುವು ತೋರಬೇಕೆಂದು ನಾನೀಗ ಕೋರುತ್ತೇನೆ; ಕಾಶ್ಮೀರ ವಿಷಯದಲ್ಲಿ ಹುರಿಯತ್ ನಾಯಕರನ್ನು ನಾನು ಮಾತುಕತೆಯ ವೇದಿಕೆಗೆ ಕರೆತರುತ್ತೇನೆ’ ಎಂದು ಮೆಹಬೂಬ ಮುಫ್ತಿ ಅವರು ರಾಲಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು.
‘ಪಿಡಿಪಿಯನ್ನು ಒಡೆಯವ ಕೇಂದ್ರ ಯತ್ನ ಅತ್ಯಂತ ವಿನಾಶಕಾರಿಯಾದೀತು’ ಎಂದು ಮೆಹಬೂಬ ಅವರು ಕೇಂದ್ರಕ್ಕೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಪಿಡಿಪಿ ನಾಯಕಿ ಬಿಜೆಪಿಯನ್ನು ನೇರವಾಗಿ ಹೆಸರಿಸಿ ದೂರಿಲ್ಲವಾದರೂ ಆಕೆಯ ಗುರಿ ಬಿಜೆಪಿ ಆಗಿತ್ತೆನ್ನುವುದು ಸ್ಪಷ್ಟವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.