ಮತ್ತೂಬ್ಬಳು ಶ್ರುತಿ


Team Udayavani, Jul 29, 2018, 6:00 AM IST

1.jpg

ಕನ್ನಡ ಚಿತ್ರರಂಗದಲ್ಲಿ ಶ್ರುತಿ, ಶ್ರುತಿ ಹರಿಹರನ್‌, ಶ್ರುತಿ ರಾಜ್‌… ಹೀಗೆ ಶ್ರುತಿ ಹೆಸರಿನ ಕೆಲವು ನಾಯಕಿಯರಿದ್ದು, ಈಗ ಆ ಸಾಲಿಗೆ ಹೊಸದಾಗಿ ಶ್ರುತಿ ಗೊರಾಡಿಯ ಎಂಬ ಹೊಸ ನಾಯಕಿ ಸೇರ್ಪಡೆಯಾಗಿದ್ದಾರೆ. ಶ್ರುತಿ ಗೊರಾಡಿಯಾ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಸಂಕಷ್ಟಕರ ಗಣಪತಿ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಶ್ರುತಿ ಅವರ ಅಭಿನಯ ಮತ್ತು ಚೆಲುವಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.

ಮೂಲತಃ ಗುಜರಾತಿಯ ವರಾದ ಶ್ರುತಿ ಗೊರಾಡಿಯ ನೆಲೆಸಿರುವುದು ಬೆಂಗಳೂರಿನಲ್ಲಿ. ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಅವರು, ಇದೇ ಮೊದಲ ಬಾರಿಗೆ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲೇ ನಾಯಕಿಯ ಪಾತ್ರ ಸಿಕ್ಕಿದ್ದಕ್ಕೆ ಖುಷಿಪಡುವ ಶ್ರುತಿ, ಆ ಚಿತ್ರಕ್ಕೆ ಸಿಗುತ್ತಿರುವ ಪ್ರಚಾರದ ಬಗ್ಗೆಯೂ ಸಾಕಷ್ಟು ಖುಷಿಪಡುತ್ತಾರೆ. 

“”ಈ ಚಿತ್ರದಲ್ಲಿ ನನ್ನದು ಭಾರತದ ಮಾದರಿ ಹುಡುಗಿಯ ಪಾತ್ರ. ಪತ್ರಿಕೆಯೊಂದರಲ್ಲಿ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿರುತ್ತೇನೆ. ಒಂದು ಹಂತದಲ್ಲಿ ನಾಯಕನ ಪರಿಚಯ ವಾಗುತ್ತದೆ. ನಾಯಕನಿಗೆ ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ವಿಚಿತ್ರ ಕಾಯಿಲೆ ಇರುತ್ತದೆ. ಹಾಗಂದರೆ, ಅವನ ಎಡಗೈ ಹಿಡಿತ ತಪ್ಪಿರುತ್ತದೆ. ಅವನಿಗೆ ಗೊತ್ತಿಲ್ಲದೆಯೇ ಅವನ ಎಡಗೈ ಸಾಕಷ್ಟು ಸಮಸ್ಯೆ ಕೊಡುತ್ತಿರುತ್ತದೆ. ಇಂತಹ ಸಂದರ್ಭ ದಲ್ಲಿ ನಾನು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತೇನೆ ಮತ್ತು ಅವನಿಗೆ ಹೇಗೆ ಸಹಾಯವಾಗಿ ನಿಲ್ಲುತ್ತೇನೆ ಎಂಬುದು ಚಿತ್ರದ ಕಥೆ. ನನ್ನದು ಒಂದು ಸ್ವತಂತ್ರ ಹುಡುಗಿಯ ಪಾತ್ರವಷ್ಟೇ ಅಲ್ಲ, ಬಹಳ ಪ್ರಾಕ್ಟಿಕಲ್‌ ಆಗಿ ಯೋಚಿಸುವ ಪಾತ್ರ” ಎಂದು ವ್ಯಾಖ್ಯಾನಿಸುತ್ತಾರೆ ಶ್ರುತಿ.

ಮೊದಲ ಚಿತ್ರ ಅಷ್ಟೊಂದು ಸುಲಭವಾಗಿರುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲವಂತೆ.  “”ನಿಜ ಹೇಳಬೇಕೆಂದರೆ, ನಾನು ಬಹಳ ಲಕ್ಕಿ ಎಂದರೆ ತಪ್ಪಿಲ್ಲ. ಮೊದಲ ಚಿತ್ರದಲ್ಲೇ ಒಂದು ವಿಭಿನ್ನವಾದ ಪಾತ್ರ ಸಿಕ್ಕಿದೆ. ಅಷ್ಟೇ ಅಲ್ಲ, ಅಚ್ಯುತ್‌ ಕುಮಾರ್‌, ಮನ್‌ದೀಪ್‌ ರಾಯ್‌, ಮಂಜುನಾಥ ಹೆಗಡೆ ಮುಂತಾದ ಹಿರಿಯರ ಜೊತೆಗೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿತು. ಇನ್ನು ಇಡೀ ಚಿತ್ರದ ಪ್ರಯಾಣ ಸಹ ಬಹಳ ಸೂ¾ತ್‌ ಆಗಿತ್ತು. ನನ್ನ ಮೊದಲ ಚಿತ್ರ ಇಷ್ಟು ಸುಲಭವಾಗಿ ಮುಗಿಯಬಹುದು ಎಂದು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ. ಒಟ್ಟಾರೆ ಒಂದು ಅದ್ಭುತ ಅನುಭವ” ಎನ್ನುತ್ತಾರೆ ಶ್ರುತಿ.

ಇನ್ನು ಮೊದಲ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುನ್ನವೇ, ಶ್ರುತಿಗೆ ಇನ್ನೊಂದು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಆದರೆ, ಅದ್ಯಾವ ಚಿತ್ರ ಎಂಬ ವಿಷಯವನ್ನು ಶ್ರುತಿ ಬಹಿರಂಗಪಡಿಸುತ್ತಿಲ್ಲ. “”ನನ್ನ ಮೊದಲ ಚಿತ್ರ ಸಂಕಷ್ಟಕರ ಗಣಪತಿ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ಇನ್ನೊಂದು ಸಿನೆಮಾ ಸಿಕ್ಕಿತು. ಆ ನಿಟ್ಟಿನಲ್ಲಿ ನಾನು ಲಕ್ಕಿ. ಆದರೆ, ಆದ್ಯಾವ ಸಿನೆಮಾ ಎಂದು ಬಹಿರಂಗಪಡಿಸುವ ಹಾಗಿಲ್ಲ. ಏಕೆಂದರೆ, ಆ ತಂಡದವರೇ ಸದ್ಯದಲ್ಲೇ ಮಾಧ್ಯಮದವರ ಮುಂದೆ ಬಂದು ಚಿತ್ರದ ಬಗ್ಗೆ ಮಾತನಾಡುತ್ತಾರೆ” ಎನ್ನುತ್ತಾರೆ ಶ್ರುತಿ.

ಅಲ್ಲಿಗೆ ಶ್ರುತಿ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳಗೆ ಬಂದಿದ್ದಾರೆ. ಈ ಹಿಂದೆ ಶ್ರುತಿ ಹೆಸರಿನ ನಾಯಕಿಯರೆಲ್ಲ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸು ಕಂಡಿದ್ದಾರೆ. ಶ್ರುತಿ ಗೊರಾಡಿಯಾ ಸಹ ಯಶಸ್ವಿ ಮತ್ತು ಜನಪ್ರಿಯ ರಾಗುತ್ತಾರಾ? ಕಾದು ನೋಡಬೇಕು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.