ರಶ್ಯ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಸುತ್ತು ತಲುಪಿದ ಸೌರಭ್
Team Udayavani, Jul 29, 2018, 10:36 AM IST
ಮಾಸ್ಕೊ: ವ್ಲಾದಿ ವೋಸ್ಟೋಕ್ನಲ್ಲಿ ನಡೆಯು ತ್ತಿರುವ “ರಶ್ಯನ್ ಓಪನ್ ಟೂರ್ ಸೂಪರ್ 100′ ಬ್ಯಾಡ್ಮಿಂಟನ್ ಪಂದ್ಯಾವಳಿಯ “ಆಲ್ ಇಂಡಿಯನ್ ಸೆಮಿಫೈನಲ್’ ಕಾಳಗದಲ್ಲಿ ಸೌರಭ್ ವರ್ಮ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ. ಅವರು ಭಾರತದ ಮತ್ತೋರ್ವ ಸ್ಪರ್ಧಿ ಮಿಥುನ್ ಮಂಜುನಾಥ್ ವಿರುದ್ಧ 21-9, 21-15 ಅಂತರದ ಸುಲಭ ಜಯ ಸಾಧಿಸಿದರು. ಕೇವಲ 31 ನಿಮಿಷಗಳಲ್ಲಿ ಇವರ ಪಂದ್ಯ ಮುಗಿದು ಹೋಯಿತು.
ಇದು ಪ್ರಸಕ್ತ ಋತುವಿನಲ್ಲಿ ಸೌರಭ್ ವರ್ಮ ಕಾಣುತ್ತಿರುವ ಮೊದಲ ಫೈನಲ್. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಅವರು ಜಪಾನಿನ ಕೋಕಿ ವಟಾನಬೆ ವಿರುದ್ಧ ಸೆಣಸಲಿದ್ದಾರೆ. ಸೌರಭ್ 2016ರಲ್ಲಿ ಚೈನೀಸ್ ತೈಪೆ ಮಾಸ್ಟರ್ ಚಾಂಪಿಯನ್ ಆಗಿದ್ದರು. ಅದೇ ವರ್ಷ ಬಿಟ್ಬರ್ಗರ್ ಓಪನ್ನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.
ಮಿಶ್ರ ಡಬಲ್ಸ್ನಲ್ಲೂ ಫೈನಲ್
ಭಾರತದ ಯುವ ಜೋಡಿ ಕುಹೂ ಗರ್ಗ್-ರೋಹನ್ ಕಪೂರ್ ಮಿಶ್ರ ಡಬಲ್ಸ್ನಲ್ಲಿ ಫೈನಲ್ ತಲುಪಿದ್ದಾರೆ. ದ್ವಿತೀಯ ಶ್ರೇಯಾಂಕದ ಈ ಜೋಡಿ ಮಲೇಶ್ಯದ ಚೆನ್ ಟಾಂಗ್ ಜೀ-ಯೆನ್ ವೀ ಪೆಕ್ ವಿರುದ್ಧ ಭಾರೀ ಹೋರಾಟ ನಡೆಸಿ 21-19, 11-21, 22-20 ಅಂತರದಿಂದ ಜಯ ಕಾಣುವಲ್ಲಿ ಯಶಸ್ವಿಯಾದರು. ವಿಜೇತ ಭಾರತೀಯರು ವ್ಲಾದಿಮಿರ್ ಇವನೋವ್ (ರಶ್ಯ)-ಮಿನ್ ಕ್ಯುಂಗ್ ಕಿಮ್ (ಕೊರಿಯ) ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಅರುಣ್ ಜಾರ್ಜ್-ಸನ್ಯಮ್ ಶುಕ್ಲ ಸೆಮಿಫೈನಲ್ನಲ್ಲಿ ರಶ್ಯದ ಕಾನ್ಸ್ಟಂಟೀನ್ ಅಬ್ರಮೋವ್-ಅಲೆಕ್ಸಾಂಡರ್ ಝಿನ್ಶೆಂಕೊ ವಿರುದ್ಧ ಪರಾಭವಗೊಂಡಿ ದ್ದಾರೆ (15-21, 19-21).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್ಎಸ್ಎಲ್ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.