ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ ಎಸಗಿದವರ ಬಂಧನ
Team Udayavani, Jul 29, 2018, 12:02 PM IST
ಬೆಂಗಳೂರು: ಅಪ್ರಾಪ್ತೆಯನ್ನು ಅಪಹರಿಸಿ ಮಂಡ್ಯಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ಹೆಬ್ಟಾಳ ಪೊಲೀಸರು ಬಂಧಿಸಿದ್ದಾರೆ.
ಹೆಬ್ಟಾಳದ ಸಂತೋಷ್ (25), ಸುಭಾಶ್ (26), ಜೋಸೆಫ್ (24) ಬಂಧಿತ ಆರೋಪಿಗಳು. ಜುಲೈ 23ರಂದು ಸಂಜೆ ಕೊಡಿಗೇಹಳ್ಳಿ ಪಾರ್ಕ್‌ನಲ್ಲಿ ಕುಳಿತಿದ್ದ ಸಂತ್ರಸ್ತೆಯನ್ನು ಅಪಹರಿಸಿದ ದುಷ್ಕರ್ಮಿಗಳು, ಮಂಡ್ಯದ ತೋಟದ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಪೋಷಕರು ಈ ಮೊದಲು ಕೊಡಿಗೇಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದೇ ವೇಳೆ ಸಂತ್ರಸ್ತೆಗೆ ಆರೋಪಿ ಜೋಸೆಫ್ ಪರಿಚಯವಾಗಿದ್ದ. ಇತ್ತೀಚೆಗೆ ಈಕೆಯ ಪೋಷಕರು ಕೊಡಿಗೇಹಳ್ಳಿಯಿಂದ ಹೆಬ್ಟಾಳಕ್ಕೆ ಮನೆ ಸ್ಥಳಾಂತರಿಸಿದ್ದರು.
ಜು.23ರಂದು ಸಂಜೆ 5 ಗಂಟೆ ಸುಮಾರಿಗೆ ಸ್ನೇಹಿತರನ್ನು ಭೇಟಿಯಾಗಲು ಸಂತ್ರಸ್ತೆ ಕೊಡಿಗೇಹಳ್ಳಿಯ ಪಾರ್ಕ್‌ಗೆ ಹೋಗಿದ್ದಾಗ ಜೋಸೆಫ್ ಸಿಕ್ಕಿದ್ದಾನೆ. ಕೆಲ ಹೊತ್ತಿನ ಬಳಿಕ ಇತರ ಆರೋಪಿಗಳು ಅಲ್ಲಿಗೆ ಬಂದಿದ್ದಾರೆ.
“ಈಗಾಗಲೇ ತಡವಾಗಿದೆ. ಇಂದು ರಾತ್ರಿ ಕೊಡಿಗೇಹಳ್ಳಿಯಲ್ಲೇ ಉಳಿದುಕೋ’ ಎಂದು ಸಂತ್ರಸ್ತೆಗೆ ಜೋಸೆಫ್ ಒತ್ತಾಯಿಸಿದ್ದಾನೆ. ಸಂತ್ರಸ್ತೆ ನಿರಾಕರಿಸಿದಾಗ ಆರೋಪಿಗಳು ಆಕೆಯ ಬಾಯಿಗೆ ಬಟ್ಟೆ ಇರಿಸಿ ಕಾರಿನೊಳಗೆ ಕೂರಿಸಿಕೊಂಡು ಅಪಹರಿಸಿದ್ದಾರೆ.
ಬಳಿಕ ಅದೇ ರಾತ್ರಿ ಆರೋಪಿ ಸಂತೋಷನ ಕಾರಿನಲ್ಲಿ ಕೊಡಿಗೇಹಳ್ಳಿಯಿಂದ ಹೊರಟ ಆರೋಪಿಗಳು, ಮರುದಿನ (ಜು.24) ಬೆಳಗ್ಗೆ 5 ಗಂಟೆ ಸುಮಾರಿಗೆ ಮಂಡ್ಯದ ಸ್ನೇಹಿತನ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಸಂತ್ರಸ್ತೆ ಹಾಗೂ ಈಕೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಬಳಿಕ ಅಲ್ಲೇ ಇದ್ದ ಬಾಳೆತೋಟಕ್ಕೆ ಎಳೆದೊಯ್ದು ರಾತ್ರಿಯಿಡಿ ದೌರ್ಜನ್ಯವೆಸಗಿದ್ದಾರೆ. ಜು.25ರಂದು ಬೆಳಗ್ಗೆ ಸಂತ್ರಸ್ತೆಯನ್ನು ಆರೋಪಿಗಳು ಕೋಡಿಗೆಹಳ್ಳಿಯ ಪಾರ್ಕ್ ಬಳಿಯೇ ಬಿಟ್ಟು ಹೋಗಿದ್ದಾರೆ. ಪೋಷಕರ ಜತೆ ಠಾಣೆಗೆ ಬಂದ ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಜೋಸೆಫ್ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಸಂತೋಷ್ ಕ್ಯಾಬ್ ಚಾಲಕನಾಗಿದ್ದಾನೆ. ಸುಭಾಷ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇನ್ನು ಸಂತ್ರಸ್ತೆ ಕಾಣೆಯಾಗಿರುವ ಬಗ್ಗೆ ಜು.24ರಂದು ಬೆಳಗ್ಗೆಯೇ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದರು. ಸಂತ್ರಸ್ತೆ ಅಪ್ರಾಪ್ತೆ ಆಗಿರುವುದರಿಂದ ಮಕ್ಕಳ ಆಯೋಗ ಹಾಗೂ ಕೋರ್ಟ್ ಎದುರು ಹೇಳಿಕೆ ದಾಖಲಿಸಲಾಗುವುದು.
-ಡಾ.ಚೇತನ್ ಸಿಂಗ್ ರಾಥೋಡ್, ಡಿಸಿಪಿ ಉತ್ತರ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.