ವಿದ್ಯಾರ್ಥಿಗಳು ವಿಷಯದ ಆಳ ಅರಿಯಲಿ
Team Udayavani, Jul 29, 2018, 12:24 PM IST
ಹುಣಸೂರು: ಜಾಗತೀಕರಣದ ವೇಗದ ಯುಗದಲ್ಲಿ ವಾಣಿಜ್ಯ ಶಾಸ್ತ್ರವು ಅತ್ಯಂತ ವೇಗವಾಗಿ ಮತ್ತು ನಿರಂತರ ಬದಲಾವಣೆ ಹೊಂದುತ್ತಿದ್ದು, ವಿದ್ಯಾರ್ಥಿಗಳು ವಿಷಯಗಳ ಆಳವನ್ನು ಅರಿಯದೇ ಅಂಕಗಳಿಗಾಗಿ ಮಾತ್ರ ವ್ಯಾಸಂಗ ಮಾಡುವ ಮನೋಭಾವನೆಯಿಂದ ಹೊರಬಂದು ಎಲ್ಲವನ್ನು ಅರಿತುಕೊಳ್ಳುವ ವಿದ್ಯಾರ್ಥಿಗಳಾಗಬೇಕು ಎಂದು ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ದೀಪುಕುಮಾರ್ ಸೂಚಿಸಿದರು.
ನಗರದ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಪೋರಂನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿ ಮಾತನಾಡಿದರು.
ವಿಶ್ವದಲ್ಲಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಸಿದ್ಧಾಂತಗಳು ಜಾರಿಗೊಂಡ ನಂತರ ಮಾರುಕಟ್ಟೆಯ ಚಿತ್ರಣವೇ ಬದಲಾಯಿತು. ಇದಕ್ಕೆ ಭಾರತವೂ ಹೊರತಾಗಿರಲಿಲ್ಲ. ಈಗ ದೇಶದಲ್ಲಿ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಜಾರಿಗೊಂಡ ನಂತರವಂತೂ ವಾಣಿಜ್ಯ ವಿಭಾಗ ದಿನಕ್ಕೊಂದು ರೂಪ ಪಡೆಯುತ್ತಿದೆ. ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದ ವಿಷಯವಾರು ಪ್ರಾಮುಖ್ಯತೆಯನ್ನು ಆಳವಾಗಿ ಅಧ್ಯಯನ ಮಾಡುವುದು ಅನಿವಾರ್ಯವಾಗಿದೆ.
ಕೇವಲ ಅಂಕಗಳೇ ನಿಮ್ಮ ಐಕ್ಯೂವನ್ನು ನಿರ್ಧರಿಸುವುದಿಲ್ಲ. ಡೆಬಿಟ್ ಮತ್ತು ಕ್ರೆಡಿಟ್ ಎಂಟ್ರಿಯನ್ನು ಕಲಿಯುವುದೇ ದೊಡ್ಡ ವಿಷಯವಲ್ಲ. ತರಗತಿಯಲ್ಲಿ ನಡೆಯುವ ಪಾಠ ಕೇಳಿದ್ದು ಅರ್ಥವಾಗದಿದ್ದಲ್ಲಿ ಪ್ರಶ್ನಿಸುವ ಮನೋಭಾವನೆ ರೂಢಿಸಿಕೊಳ್ಳಿರಿ ಎಂದರು.
ಐಕ್ಯೂಎಸಿ ಸಂಚಾಲಕ ಪುಟ್ಟಶೆಟ್ಟಿ ಮಾತನಾಡಿ, ಅರ್ಥಶಾಸ್ತ್ರದೊಂದಿಗೆ ವಾಣಿಜ್ಯಶಾಸ್ತ್ರವೂ ಮಹತ್ತರ ಬದಲಾವಣೆಯತ್ತ ಮುಖ ಮಾಡಿದೆ. ಸಿಎ ವ್ಯಾಸಂಗ ಮಾಡಬೇಕೆನ್ನುವವರು ಅಷ್ಟೇ ಅವಿರತ ಶ್ರಮದೊಂದಿಗೆ ಅಧ್ಯಯನ ನಡೆಸಿದರೆ ಮಾತ್ರ ಸಾಧ್ಯವೆಂದರು. ಪ್ರಾಂಶುಪಾಲ ಜ್ಞಾನಪ್ರಕಾಶ್ ಮಾತನಾಡಿದರು. ಅಧ್ಯಾಪಕರುಗಳಾದ ಪ್ರತಿಭಾ, ಕಲಾಶ್ರೀ, ಶ್ರೀನಿವಾಸ್, ರಮಣಿನಾಯರ್ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.