ನಾನು ರಿಯಲ್‌ ಟೈಗರ್‌: ವಿಶ್ವನಾಥ್‌ ಗುಡುಗು


Team Udayavani, Jul 29, 2018, 12:24 PM IST

m5-nanu-real.jpg

ಹುಣಸೂರು: ಕಳೆದ ಹತ್ತು ವರ್ಷಗಳಲ್ಲಿ ನಡೆದಿರುವ ಕಾಮಗಾರಿ ಕಳೆಪೆಯಿಂದ ಕೂಡಿದೆಯೆಂದಿದ್ದೆ. ಅದಕ್ಕೆ ಮಾಜಿ ಶಾಸಕ ಮಂಜುನಾಥ್‌ ಕಾರಣ ಎಂದಿರಲಿಲ್ಲ. ಆದರೆ ಕುಂಬಳಕಾಯಿ ಕಳ್ಳ ಎಂದರೆ ಇವರ್ಯಾಕೆ ಹೆಗಲು ಮುಟ್ಟಿನೋಡಿಕೊಳ್ಳಬೇಕು. ನನ್ನ ಹಿರಿತನವನ್ನೂ ಗಮನಿಸದೇ ಟೀಕಿಸಿದ್ದಾರೆ.

ಇದು ಸಭ್ಯ ರಾಜಕಾರಣಿಯ ಲಕ್ಷಣವಲ್ಲ, ನನ್ನ ವಿರುದ್ಧ ಆಡಿರುವ ಮಾತನ್ನು ಹಿಂಪಡೆಯಬೇಕೆಂದು ಶಾಸಕ ಎಚ್‌.ವಿಶ್ವನಾಥ್‌ ತಾಕೀತು ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ್‌ ಎರಡು ಬಾರಿ ಶಾಸಕರಾದರೂ ಅವರಿಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿದಿಲ್ಲ.

ನನ್ನ ವಿರುದ್ಧ ವೈಯಕ್ತಿಕವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವುದ ಖಂಡನೀಯ, ನನ್ನ 45 ವರ್ಷಗಳ ಸುದೀರ್ಘ‌ ರಾಜಕೀಯ ಜೀವನದಲ್ಲಿ ಎಂತಹ ರಾಜಕಾರಣಿಯೆಂದು ಇಡೀ ರಾಜ್ಯಕ್ಕೆ ತಿಳಿದಿದೆ. ಸಿದ್ದರಾಮಯ್ಯರಿಂದ ಮಂಜುನಾಥ್‌ ತಮ್ಮ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ರೂ.ಗಳನ್ನು ತಂದಿದ್ದಾರೆ.

ಆದರೆ ನಡೆದಿರುವ ಅಭಿವೃದ್ಧಿ ಕಾರ್ಯಗಳು ಕಳಪೆ ಗುಣಮಟ್ಟದ್ದಾಗಿದೆಯೆಂದು ಹೇಳಿದ್ದೆ. ಇದಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಅವರು ತಮ್ಮನ್ನು ಬ್ಲಾಕ್‌ ಮೇಲರ್‌, ಬೂಟಾಟಿಕೆ, ಹಿಟ್‌ ಅಂಡ್‌ ರನ್‌ ಸಂಸ್ಕೃತಿಯವನೆಂದು ಟೀಕಿಸಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ, ಅಭಿವೃದ್ಧಿಗೆ ಕೈಜೋಡಿಸುವುದಾದಲ್ಲಿ ಸ್ವಾಗತಿಸುವೆನೆಂದರು. 

ಸುಳ್ಳಿನ ಕುಟುಂಬವಿದು: ತಾವು ಸಂಸದರಾಗಿದ್ದ ಅವಯಲ್ಲಿ ಚಿಲ್ಕುಂದ ಏತ ನೀರಾವರಿ ಯೋಜನೆಗೆ ಕೇಂದ್ರದಿಂದ 7.5 ಕೋಟಿ ರೂ.ಗಳ ಅನುದಾನ ಕೊಡಿಸಿದ್ದೆ, 7 ವರ್ಷಗಳಾದರೂ ಯಾವ ಕೆರೆಗೂ ನೀರು ತುಂಬಿಲ್ಲ, ಇದಕ್ಕೆ ನಾನು ಹೇಗೆ ಹೊಣೆಗಾರನಾಗುವೆ?. ನನ್ನ ಸಂಬಂದಿಕರ್ಯಾರು ಈ ಗುತ್ತಿಗೆ ನಡೆಸಿಲ್ಲ, ಇದು ಮಾಜಿ ಶಾಸಕರ ಸುಳ್ಳಿನ ಕಂತೆಯಾಗಿದ್ದು, ಇವರ ಇಡೀ ಕುಟುಂಬವೇ ಸುಳ್ಳಿನ ಸರದಾರರೆಂಬುದು ಕೆಪಿಸಿಸಿ ಕಚೇರಿಗೆ ಗೊತ್ತಿದೆ ಎಂದು ಟೀಕಿಸಿದರು.

ರಿಯಲ್‌ ಟೈಗರ್‌: ಮಾಜಿ ಮುಖ್ಯಮಂತ್ರಿಯನ್ನೇ ಕ್ಯಾರೇ ಅನ್ನದೇ ನನ್ನವಾದ ಮಂಡಿಸಿದವನು ನಾನು. ಚಮಚಾ ರಾಜಕಾರಣಿ ನಾನಲ್ಲ. ಪೇಪರ್‌ ಹುಲಿಯೂ ಅಲ್ಲ, ನಾನು ರಾಜಕೀಯದಲ್ಲಿ ನಿಜವಾದ ಹುಲಿಯೇ ಐ ಯಾಮ್‌ ರಿಯಲ್‌ ಟೆ„ಗರ್‌ ಹೌದೆಂದು ತಿರುಗೇಟು ನೀಡಿದರು. ಜಾತಿ-ಜಾತಿ ನಡುವೆ ಸಂಘರ್ಷ ತಂದಿಟ್ಟಿರಿ. ಈ ವಿಶ್ವನಾಥ್‌ನನ್ನು ದಾರಿ ತಪ್ಪಿಸಲು ನಿಮಗೆ ಸಾಧ್ಯವಿಲ್ಲ. 

ನಾನೆ ಟಿಕೇಟ್‌ ಕೊಡಿಸಿದ್ದೆ: 10ವರ್ಷದ ಹಿಂದೆ ನಿಮಗೆ ಟಿಕೇಟ್‌ ಕೊಡಿಸುವಲ್ಲಿ ನಾನೇ ಪ್ರಮುಖ ಪಾತ್ರ ವಹಿಸಿದ್ದೆ. ಅದರ ಕನಿಷ್ಠ ಕೃತಜ್ಞತೆಯೂ ನಿಮಗಿಲ್ಲ. ಕಲ್ಲಹಳ್ಳಿ ಅಬಿವೃದ್ಧಿಗೆ 10ಕೋಟಿ ರೂ. ಕೊಡಿಸಿದ್ದೆ. ಏನಾಯಿತು ತಿಳಿಸಿ. ಯಾಕೆ ಅಭಿವೃದ್ಧಿಯಗಿಲ್ಲ ಕಾರಣಕೊಡಿ ಎಂದು ಪ್ರಶ್ನಿಸಿ, ಮುಂದಿನ ದಿನಗಳಲ್ಲಿ ನನ್ನ ವಿರುದ್ಧ ವೈಯಕ್ತಿಕ ಟೀಕೆ, ನನ್ನ ಸಮುದಾಯ ಹಾಗೂ ಪಕ್ಷದ ವಿರುದ್ಧವಾಗಲೀ ಟೀಕಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು ಎಚ್ಚರಿಸಿದರು. 

ಗೋಷ್ಠಿಯಲ್ಲಿ ಜೆಡಿಎಸ್‌ ತಾಲೂಕು ಅಧಕ್ಷ ಹರಳಹಳ್ಳಿ ಮಾದೇಗೌಡ, ನಗರಸಭಾಧ್ಯಕ್ಷ ಎಂ.ಶಿವಕುಮಾರ್‌, ಕುರುಬ ಸಮಾಜದ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಮುಖಂಡ ಬಸವಲಿಂಗಯ್ಯ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

ಮಾಜಿ ಶಾಸಕ ಮಂಜನಾಥ್‌ ಹೇಳಿದ್ದೇನು?: ಕಳಪೆ ಕಾಮಗಾರಿಗಳು ನಡೆದಿವೆ ಎಂದು ಆರೋಪಿಸುತ್ತಿರುವ ಶಾಸಕ ವಿಶ್ವನಾಥರು ನಿರ್ದಿಷ್ಟ ಕಾಮಗಾರಿ ಬಗ್ಗೆ ತಿಳಿಸಲಿ, ತಪ್ಪೆಸಗಿದ್ದಲ್ಲಿ ಇಂಜಿನಿಯರ್‌, ಗುತ್ತಿಗೆದಾರರ ವಿರುದ್ಧ ತನಿಖೆಗೆ ಆದೇಶಿಸಬೇಕಾದವರು ಮಾದ್ಯಮದ ಮುಂದೆ ಕುಳಿತು ಹೇಳಿಕೆ ನೀಡುವ ಪೇಪರ್‌ ಹುಲಿ ಕೆಲಸ ಮಾಡುತ್ತಿದ್ದಾರೆಂದು ಶುಕ್ರವಾರ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಛೇಡಿಸಿದ್ದರು. 

ಚಿಲ್ಕುಂದ ಏತ ನೀರಾವರಿಯೋಜನೆ ಕಾಮಗಾರಿ ಕಳಪೆ ಎಂದಿರುವ ಶಾಸಕರ ಆರೋಪಕ್ಕೆ  ಈ ಕಾಮಗಾರಿಯನ್ನು ಇಂಜಿನಿಯರ್‌ ಆಗಿರುವ ಅವರ ಅಳಿಯರವರದ್ದೇ ಉಸ್ತುವಾರಿಯಲ್ಲಿ ನಡೆದಿದ್ದು, ಅವರ ಹತ್ತಿರದ ಸಂಬಂಧಿಕರೇ ಈ ಕಾಮಗಾರಿ ನಡೆಸಿದ್ದು, ತಾವು ಹಿಂದೆಯೇ ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಒತ್ತಾಯಿಸಿದಾಗ ಇವರೇ ತಡೆ ಹಿಡಿದಿರುವುದನ್ನು ಮರೆತಿದ್ದಾರೆಂದು ವ್ಯಂಗ್ಯವಾಡಿ, ಈ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ, ಗುತ್ತಿಗೆದಾರರನ್ನು ಬ್ಲಾಕ್‌ ಲೀಸ್ಟ್‌ಗೆ ಸೇರಿಸಲಿ ಎಂದು ಸವಾಲೆಸೆದಿದ್ದರು.

ಇನ್ನು ಮುಂದಾದರೂ ತಾಲೂಕಿನಲ್ಲಿ ಈವರೆಗೆ ನಡೆದಿರುವ ಯಾವ ಕಾಮಗಾರಿಗಳು ಕಳಪೆ ಎಂದು ಕಂಡುಬಂದಲ್ಲಿ ತನಿಖೆ ನಡೆಸಲು ಸರಕಾರಕ್ಕೆ ಪತ್ರ ಬರೆಯಿರಿ, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯೋದು ಬೇಡ, ತಪ್ಪಿತಸ್ಥರ ವಿರುದ್ದಕ್ರಮವಾಗಲಿ ಎಂದು ವಿಶ್ವನಾಥರನ್ನು ಒತ್ತಾಯಿಸಿದರು.

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.