ಅಭಿವೃದ್ಧಿ ಚಟುವಟಿಕೆ ಮಂಗಳೂರಿನ ಹೊರ ಪ್ರದೇಶಗಳಿಗೂ ವಿಸ್ತರಣೆಯಾಗಲಿ
Team Udayavani, Jul 29, 2018, 3:15 PM IST
ಮಂಗಳೂರು ನಗರ ಬೆಳೆದಿದೆ. ಆದರೆ ಅಭಿವೃದ್ಧಿ ಚಟುವಟಿಕೆಗಳು ಮಾತ್ರ ನಗರದ ಕೇಂದ್ರ ಭಾಗ ಹಾಗೂ ಅದರ ಸುತ್ತಮುತ್ತ ಕೇಂದ್ರೀಕೃತಗೊಂಡಿದೆ. ಪರಿಣಾಮ ನಗರ ಬೆಳೆದರೂ ಇದಕ್ಕೆ ಪೂರಕವಾಗಿ ಅಭಿವೃದ್ಧಿ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಅಲ್ಲಿಗೆ ವಿಸ್ತರಣೆಯಾಗಿಲ್ಲ.
ಮಂಗಳೂರು ನಗರ ಪ್ರಸ್ತುತ ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಪರಿಸರದಲ್ಲೇ ಕೇಂದ್ರೀಕೃತಗೊಂಡಿದೆ. ನಗರದ ಬೆಳವಣಿಗೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿದೆ. ಇನ್ನೂ ವಿಸ್ತೃತ ರೀತಿಯಲ್ಲಿ ಹೇಳಬಹುದಾದರೆ ಪಂಪ್‌ವೆಲ್, ನಂತೂರು, ಕುಳೂರು, ಬಿಜೈ, ಕೆಪಿಟಿ ಸರ್ಕಲ್, ಕುಂಟಿಕಾನ, ಪಾಂಡೇಶ್ವರ , ಕಂಕನಾಡಿ, ವೆಲೆನ್ಸಿಯಾ , ಬಂದರು ವರ್ತುಲದೊಳಗೆ ಬಹುತೇಕ ಚಟುವಟಿಕೆಗಳು ಕೇಂದ್ರೀಕೃತವಾಗಿವೆ. ಶೇ. 90ರಷ್ಟು ಸರಕಾರಿ ಕಚೇರಿಗಳು ಹಂಪನಕಟ್ಟೆ , ಸ್ಟೇಟ್‌ಬ್ಯಾಂಕ್ ಪರಿಸರದಲ್ಲೇ ಇದೆ. ಕೆಎಸ್‌ಆರ್ ಟಿಸಿ, ಖಾಸಗಿ ಸರ್ವಿಸ್, ಸಿಟಿಬಸ್ ನಿಲ್ದಾಣಗಳು, ಸೆಂಟ್ರಲ್ ರೈಲ್ವೇ ನಿಲ್ದಾಣ, ಕೇಂದ್ರ ಮಾರುಕಟ್ಟೆ, ಮಾಲ್‌ಗಳು, ಚಿತ್ರಮಂದಿರಗಳು , ಕ್ರೀಡಾಂಗಣಗಳು ಇಲ್ಲಿ ನೆಲೆಯಾಗಿವೆ. ಪರಿಣಾಮ ವಾಣಿಜ್ಯ, ಸರಕಾರಿ ಕಚೇರಿ ಚಟುವಟಿಕೆಗಳು ಶೇ. 90ರಷ್ಟು ಈ ಪ್ರದೇಶದಲ್ಲೇ ಕೇಂದ್ರೀಕೃತವಾಗಿವೆ. ಮಂಗಳೂರು ಜಿಲ್ಲಾ ಕೇಂದ್ರದ ಜತೆಗೆ ತಾಲೂಕು ಕೇಂದ್ರವೂ ಆಗಿದ್ದು, ಇದಕ್ಕೆ ಸಂಬಂಧಪಟ್ಟ ಸರಕಾರಿ ಕಚೇರಿಗಳು ಕೂಡ ಹಂಪನಕಟ್ಟೆ ಪ್ರದೇಶದಲ್ಲೇ ಇವೆ.
ನಗರದ ಸಮಸ್ಯೆಗಳು
ಮಂಗಳೂರು ನಗರ ಕೆಲವೇ ಪ್ರದೇಶಗಳಿಗೆ ಕೇಂದ್ರೀಕೃತಗೊಂಡಿರುವ ಹಿನ್ನೆಲೆಯಲ್ಲಿ ನಗರದ ಆರ್ಥಿಕ ಚಟುವಟಿಕೆಗಳು, ಕಚೇರಿ ವ್ಯವಹಾರಗಳು ಅಲ್ಲಿಗೆ ಸೀಮಿತಗೊಂಡಿವೆ. ವ್ಯಾಪಾರ ವ್ಯಾಪಕತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಭಿವೃದ್ಧಿಗತಿಗೆ ಅನುಗುಣವಾಗಿ ನಗರ ವಿಸ್ತಾರವಾಗಲಿಲ್ಲ. ಪರಿಣಾಮ ಧಾರಣಾ ಶಕ್ತಿ ಕುಸಿಯಿತು. ಇದರಿಂದಾಗಿ ಜನದಟ್ಟನೆ, ಸಂಚಾರ ದಟ್ಟನೆ ಮಿತಿಮೀರಿದೆ. ಸಂಚಾರ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ 1990ರ ಬಳಿಕ ಹಂಪಕಟ್ಟೆ, ಸ್ಟೇಟ್‌ಬ್ಯಾಂಕ್‌ಗೆ ಹೊಸ ಬಸ್ ಪರವಾನಿಗೆ ನೀಡುವುದನ್ನು ನಿರ್ಬಂಧಿಸಿ ಜಿಲ್ಲಾ ಮಾಜಿಸ್ಟ್ರೇಟ್ ಆಗಿರುವ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು ಅದು ಇಂದಿಗೂ ಜಾರಿಯಲ್ಲಿದೆ.
ಗ್ರೇಟರ್ ಮಂಗಳೂರು ಪ್ರಸ್ತಾವ
ಮಂಗಳೂರು ನಗರ ವಿಸ್ತರಿಸುತ್ತಿದೆ. ಹೊರವಲಯಗಳನ್ನು ತೆಕ್ಕೆಗೆ ಸೆಳೆದುಕೊಳ್ಳುತ್ತಿದೆ. ಪಾಲಿಕೆಯ ಸುತ್ತಮುತ್ತ ಇರುವ ಇನ್ನಷ್ಟು ಪ್ರದೇಶಗಳನ್ನು ಇದರ ವ್ಯಾಪ್ತಿಗೆ ತಂದು ಗ್ರೇಟರ್ ಮಂಗಳೂರು ರಚನೆ ಈಗಾಗಲೇ ಪ್ರಸ್ತಾವನೆಯಲ್ಲಿದೆ. 2011ರ ಜನಗಣತಿ ಪ್ರಕಾರ ಇಲ್ಲಿಯ ಜನಸಂಖ್ಯೆ 4,99,487. ಈಗ ಇದು ಸುಮಾರು 5 ಲಕ್ಷ ದಾಟಿದೆ. ಈ ಹಿಂದೆ 1996 ರಲ್ಲಿ ಸುರತ್ಕಲ್ ಹಾಗೂ 2002 ರಲ್ಲಿ ಪಚ್ಚನಾಡಿ ಹಾಗೂ ಕುಡುಪು ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಪಾಲಿಕೆಯಲ್ಲಿ ಪ್ರಸ್ತುತ ಒಟ್ಟು 60 ವಾರ್ಡ್‌ಗಳಿವೆ.
ಗ್ರೇಟರ್ ಮಂಗಳೂರು ಪ್ರಸ್ತಾವನೆಯನ್ನು ರಾಜ್ಯ ನಗರಾಡಳಿತ ಸಚಿವರಾಗಿದ್ದ ವಿನಯ್‌ಕುಮಾರ್ ಸೊರಕೆ ಅವರು ರೂಪುಗೊಳಿಸಿದ್ದು. ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈ ಬಗ್ಗೆ ಆಸಕ್ತಿ ತೋರಿದ ಅವರು ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಕ್ರಿಯೆಗಳನ್ನು ಆರಂಭಿಸಿತ್ತು.
ಮೂಲ್ಕಿ ಪುರಸಭೆಯ ಮಾನಂಪಾಡಿ, ಬಪ್ಪನಾಡು, ಕಾರ್ನಾಡು, ಚಿತ್ರಾಪು, ಪಡುಪಣಂಬೂರು ಗ್ರಾಮ ಪಂಚಾಯತ್‌ನ ಪಡುಪಣಂಬೂರು ಹಾಗೂ ಬೆಳ್ಳಾಯೂರು, ತೋಕೂರು- 10, ಹಳೆಯಂಗಡಿ ಗ್ರಾಮ ಪಂಚಾಯತ್ ನ ಹಳೆಯಂಗಡಿ, ಪಾವಂಜೆ, ಸಸಿಹಿತ್ಲು, ಚೇಳಾಯೂರು ಗ್ರಾ.ಪಂ.ನ ಚೇಳಾಯೂರು ಮತ್ತು ಮಧ್ಯ, ಬಾಳ ಗ್ರಾ.ಪಂ.ನ ಬಾಳ, ಕಳವಾರು, ಮಳವೂರು ಗ್ರಾ.ಪಂ.ನ ಮಳವೂರು, ಕೆಂಜಾರು, ನೀರುಮಾರ್ಗ ಗ್ರಾ.ಪಂ.ನ ನೀರುಮಾರ್ಗ, ಬೊಂಡಂತಿಲ, ಬಜಪೆ ಗ್ರಾ.ಪಂ.ನ ಬಜಪೆ, ಮೂಡುಶೆಡ್ಡೆ ಗ್ರಾ.ಪಂ.ನ ಮೂಡುಶೆಡ್ಡೆ , ಪಡುಶೆಡ್ಡೆ, ಕೋಣಾಜೆ ಗ್ರಾ.ಪಂ.ನ ಕೊಣಾಜೆ, ಬೆಳ್ಮ ಗ್ರಾ.ಪಂ.ನ ಬೆಳ್ಮ, ಮುನ್ನೂರು ಗ್ರಾ.ಪಂ. ಮುನ್ನೂರು, ಉಳ್ಳಾಲ ಪುರಸಭೆಯ ಉಳ್ಳಾಲ, ಪೆರ್ಮನ್ನೂರು, ಅಡ್ಯಾರು ಗ್ರಾ.ಪಂ.ನ ಅಡ್ಯಾರು, ಅರ್ಕುಳ, ಸೋಮೇಶ್ವರ ಗ್ರಾ.ಪಂ.ನ ಸೋಮೇಶ್ವರ, ಕೋಟೆಕಾರು ಗ್ರಾ.ಪಂ.ನ ಕೋಟೆಕಾರು, ಜೋಕಟ್ಟೆಯ ತೋಕೂರು 62 , ತಲಪಾಡಿ ಗ್ರಾ.ಪಂ.ನ ತಲಪಾಡಿ ಗ್ರಾಮಗಳು ಪ್ರಸ್ತಾವನೆಯಲ್ಲಿವೆ. ಇವುಗಳಲ್ಲಿ ಕೆಲವು ಗ್ರಾಮ ಪಂಚಾಯತ್‌ಗಳು ಈಗಾಗಲೇ ಸೇರ್ಪಡೆಗೆ ಪಂಚಾಯತ್‌ಗಳಲ್ಲಿ ನಿರ್ಣಯ ಮಾಡಿ ಕಳುಹಿಸಿದ್ದವು. ಈ ಗ್ರಾಮಗಳ ಸೇರ್ಪಡೆಯಿಂದ ಮಂಗಳೂರು ಮಹಾನಗರದ ಜನಸಂಖ್ಯೆಗೆ 1.80 ಲಕ್ಷ ಜನಸಂಖ್ಯೆ ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿದ್ದು, ವಿಸ್ತೀರ್ಣವಾರು 119.54 ಚ.ಕಿ.ಮೀ. ಪ್ರದೇಶ ಪಾಲಿಕೆ ವ್ಯಾಪ್ತಿಗೆ ಬರಲಿದೆ. ಇದರಲ್ಲಿ ಕೋಟೆಕಾರು ಈಗ ಪಟ್ಟಣ ಪಂಚಾಯತ್ ಆಗಿದೆ.
ಗ್ರೇಟರ್ ಮಂಗಳೂರು ರಚನೆಯಾದರೆ ಮಂಗಳೂರು ನಗರ ಇನ್ನಷ್ಟು ತೆರೆದುಕೊಳ್ಳತ್ತದೆ. ಮೂಲ ಸೌಲಭ್ಯಗಳು ಅಭಿವೃದ್ಧಿಯಾಗುತ್ತವೆ. ಬೃಹತ್ ನಗರಾಭಿವೃದ್ಧಿ ಯೋಜನೆಗಳಡಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನಗಳು ಲಭ್ಯವಾಗುತ್ತವೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಶನ್‌ನಿಂದ ವಿವಿಧ ಅನುದಾನಗಳನ್ನು ಪಡೆಯಲು ಸಾಧ್ಯವಾಗುತ್ತವೆ. ಮಹಾನಗರ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಇದೇ ವೇಳೆ ಕೆಲವು ಋಣಾತ್ಮಕ ಅಂಶಗಳನ್ನು ಕೂಡ ಮುಂದಿಡಲಾಗುತ್ತಿದೆ. ಈಗಾಗಲೇ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡಿದ್ದ, ಸುರತ್ಕಲ್
ಹಾಗೂ ಕುಡುಪು, ಪಚ್ಚನಾಡಿ ಪ್ರದೇಶಗಳಿಗೆ ಇನ್ನೂ ಮೂಲ ಸೌಕರ್ಯಗಳನ್ನು ನೀಡಲು ಸಾಧ್ಯವಾಗಿಲ್ಲ. ಹೊಸದಾಗಿ ಇನ್ನಷ್ಟು ಪ್ರದೇಶಗಳ ಸೇರ್ಪಡೆಯಾಗುವುದರಿಂದ ಮಹಾನಗರ ಪಾಲಿಕೆಗೆ ಹೆಚ್ಚಿನ ಹೊರೆಯಾಗಲಿದೆ ಎಂಬ ವಾದವೂ ಇದೆ.
ಹಿಂದೆ ಪ್ರಯತ್ನ ನಡೆದಿತ್ತು
ಮಂಗಳೂರು ನಗರ ಹಂಪನಕಟ್ಟೆ , ಸ್ಟೇಟ್‌ಬ್ಯಾಂಕ್ ಪ್ರದೇಶಕ್ಕೆ ಕೇಂದ್ರೀಕೃತಗೊಳ್ಳುವುದನ್ನು ತಪ್ಪಿಸಿ ಹೊರ ಪ್ರದೇಶಗಳಿಗೆ ವಿಸ್ತರಿಸಲು ಈ ಹಿಂದೆ ಭರತ್‌ಲಾಲ್ ಮೀನಾ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಪ್ರಕ್ರಿಯೆ ನಡೆಸಿದ್ದರು. ಕದ್ರಿ ಮಲ್ಲಿಕಟ್ಟೆ, ಕಂಕನಾಡಿ, ಕೊಟ್ಟಾರಚೌಕಿ ಸಂಚಾರ ವಲಯಗಳಾಗಿ ಗುರುತಿಸಲಾಗಿತ್ತು. ಅಲ್ಲಿ ಸಿಟಿ ಬಸ್ ನಿಲ್ದಾಣಗಳಿಗೆ ನಿವೇಶನಗಳನ್ನು ಗುರುತಿಸಲಾಗಿದ್ದು ಮಾತ್ರವಲ್ಲದೆ ಕೊಟ್ಟಾರ ಚೌಕಿಯಲ್ಲಿ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯು ನಡೆದಿತ್ತು. ಆಯಾಯ ಪ್ರದೇಶಗಳಿಗೆ ಹೊಂದಿಕೊಂಡಂತೆ ಸಂಚರಿಸುವ ಎಲ್ಲ ಸಿಟಿ ಬಸ್‌ಗಳು ಅಲ್ಲಿಗೆ ಆಗಮಿಸಿ, ಅಲ್ಲಿಂದಲೇ ನಿರ್ಗಮಿಸುವ ಯೋಜನೆ ರೂಪಿಸಲಾಗಿತ್ತು.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.