ನಗರದಲ್ಲಿ ವಿದ್ಯುತ್ ಉತ್ಪಾದನೆಗೊಂದು ಹೊಸ ದಾರಿ
Team Udayavani, Jul 29, 2018, 3:32 PM IST
ಹೆದ್ದಾರಿ, ಹೆಚ್ಚು ವಾಹನಗಳು ಓಡಾಡುವ ರಸ್ತೆಯ ಡಿವೈಡರ್ ಗಳು ಗಿಡ, ಹುಲ್ಲು ನಿರ್ಮಾಣಕ್ಕೆ ಅಥವಾ ಜಾಹೀರಾತು ಫ್ಲೆಕ್ಸ್‌ಗೆ ಬಳಕೆಯಾಗುತ್ತದೆ. ಆದರೆ ಇದರ ಬದಲು ಅದೇ ಸ್ಥಳ ನಗರಕ್ಕೆ ಬೇಕಾಗುವ ವಿದ್ಯುತ್ ಉತ್ಪಾದನೆಗೆ ಬಳಕೆಯಾದರೆ ಹೇಗಿರಬಹುದು?
ಈಗಾಗಲೇ ಈ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಡಿವೈಡರ್‌ಗಳಲ್ಲಿ ಅಳವಡಿಸುವ ಜಾಹೀರಾತಿನ ಬದಲು ಟರ್ಬೈನ್ (ಗಾಳಿ ಚಕ್ರ)ಗಳ ಅಳವಡಿಕೆಯಿಂದ ವಾಹನ ಸಂಚರಿಸುವಾಗ ಉಂಟಾಗುವ ಗಾಳಿಯಿಂದ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ. ಉತ್ಪಾದಿತ ವಿದ್ಯುತ್ ಅನ್ನು ಟರ್ಬೈನ್ ಕೆಳಗಡೆ ಅಳವಡಿಸಲಾದ ಬ್ಯಾಟರಿಯಲ್ಲಿ ಶೇಖರಿಸಲಾಗುತ್ತದೆ. ಈಗಾಗಲೇ ಸ್ಕಾಟ್ ಲ್ಯಾಂಡ್, ಮಲೇಷಿಯಾ ದೇಶಗಳಲ್ಲಿ ಇಂತಹ ಟರ್ಬೈನ್ ಅಳವಡಿಸಿ ಅದರಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಟರ್ಬೈನ್‌ಗಳನ್ನು ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗುತ್ತದೆ. ಇದು ಕಡಿಮೆ ತೂಕವನ್ನು ಹೊಂದಿರುತ್ತದೆ. ಇದು ರಸ್ತೆಯಿಂದ ಒಂದೂವರೆ ಮೀಟರ್ ಎತ್ತರದಲ್ಲಿ ನಿರ್ಮಿಸಿರುವುದರಿಂದ ವೇಗವಾಗಿ ಸಂಚಾರಿಸುವ ವಾಹನಗಳಿಂದ ಗಾಳಿ ಇದಕ್ಕೆ ತಾಗಿದಾಗ ಈ ಟರ್ಬೈನ್ ತಿರುಗುತ್ತದೆ. ಇದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಇಂತಹ ಒಂದು ಟರ್ಬೈನ್‌ನಿಂದ ಸುಮಾರು 2 ಕಿಲೋ ವ್ಯಾಟ್ ವಿದ್ಯುತ್ಛಕ್ತಿಯನ್ನು ಸಂಗ್ರಹಿಸಬಹುದಾಗಿದೆ. ಹಾಗಾಗಿ ರಸ್ತೆಯುದ್ದಕ್ಕೂ ಇಂತಹ ಹಲವು ಟರ್ಬೈನ್ ನಿರ್ಮಾಣದಿಂದ ನಗರಗಳ ಬೀದಿ ದೀಪ, ಸಿಗ್ನಲ್‌ಗಳಿಗೆ ಅಥವಾ ಮನೆ, ಅಂಗಡಿಗಳಿಗೂ ವಿದ್ಯುತ್ ಪೂರೈಸಬಹುದು.
ಇಂತಹ ತಂತ್ರಜ್ಞಾನಗಳ ಕರಾವಳಿ ತೀರ ಪ್ರದೇಶವಾಗಿರುವ ಮಂಗಳೂರು ನಗರಕ್ಕೆ ಹೆಚ್ಚು ಸೂಕ್ತ ಹಾಗೂ ಹೆಚ್ಚು ಗಾಳಿ ಇರುವ ಹಾಗೂ ವಾಹನಗಳು ಓಡಾಡುವ ರಸ್ತೆಗಳಲ್ಲಿ ಇವುಗಳನ್ನು ಅಳವಡಿಸಿದರೆ ವಿದ್ಯುತ್ ಉತ್ಪಾದನೆಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡತಾಗುವುದು. 24×4 ವಿದ್ಯುತ್ ಅಗತ್ಯ ಇರುವಲ್ಲಿಗೆ ಇದರ ಪ್ರಯೋಜನ ಪಡೆಯಬಹುದು.
ಸೌರ ವಿದ್ಯುತ್ ಟರ್ಬೈನ್
ಕೆಲವೆಡೆ ಇದರ ಮುಂದುವರಿದ ಆವಿಷ್ಕಾರ ಎಂಬಂತೆ ಈ ಟರ್ಬೈನ್‌ನ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಟು- ಇನ್- ವನ್ ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಗಾಳಿ ಹಾಗೂ ಸೂರ್ಯನ ಕಿರಣದಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಕಂಡುಹಿಡಿದು ನಗರಗಳಿಗೆ ದೊಡ್ಡ ಕೊಡುಗೆಗಳನ್ನು ನೀಡಿದೆ. ಇವುಗಳು ಕೇವಲ ರಸ್ತೆ ಡಿವೈಡರ್‌ಗೆ ಮಾತ್ರ ಸೀಮಿತವಾಗಿರದೆ ಸಮುದ್ರ ತೀರ ಹಾಗೂ ಹೆಚ್ಚು ಗಾಳಿ ಇರುವ ಸ್ಥಳಗಳಲ್ಲಿ ಇವುಗಳನ್ನು ನಿರ್ಮಿಸಿ ಇದರಿಂದ ವಿದ್ಯುತ್ ಉತ್ಪಾದಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ತಂತ್ರಜ್ಞಾನವನ್ನು ಇಸ್ತಾಂಬುಲ್‌ನಲ್ಲಿ ಮೊದಲಿಗೆ ಕಂಡುಹಿಡಿಯಲಾಗಿದೆ. ಇದರಿಂದ ದ್ವಿಗುಣ ವಿದ್ಯುತ್ ಅನ್ನು ಉತ್ಪಾದಿಸಬಹುದಾಗಿದ್ದು, ಇದೊಂದು ವರ ದಾನವಾಗಿದೆ.
ಭರತ್‌ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.