ಕಾಯಕಲ್ಪಕ್ಕೆ ಕಾಯುತ್ತಿರುವ ಉಪ್ಪಳ ಅಗ್ನಿಶಾಮಕ ದಳ


Team Udayavani, Jul 30, 2018, 6:00 AM IST

29ksde6.jpg

ಕಾಸರಗೋಡು: ಬೆಂಕಿ, ನೆರೆ, ವಾಹನ ಅಪಘಾತ ಹೀಗೆ ಆಕಸ್ಮಿಕವಾಗಿ ಸಂಭವಿಸುವ ದುರಂತಗಳ ಸಂದರ್ಭದಲ್ಲಿ ರಕ್ಷಣೆಗೆ ಧಾವಿಸುವ ಅಗ್ನಿಶಾಮಕ ದಳಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಇದ್ದೂ ಇಲ್ಲದಂತೆ. ಇದಕ್ಕೆ ಸ್ಪಷ್ಟ ಉದಾಹರಣೆ ಉಪ್ಪಳ ಅಗ್ನಿಶಾಮಕ ದಳ. 

ಕೆಲವೇ ವರ್ಷಗಳ ಹಿಂದೆ ಆರಂಭಗೊಂಡ ಉಪ್ಪಳ ಅಗ್ನಿಶಾಮಕ ದಳ ವಿವಿಧ ಸಮಸ್ಯೆ ಗಳಿಂದ ಸೊರಗುತ್ತಿದೆ. ಇಲ್ಲಿನ ಸಿಬಂದಿಗೂ ಸರಿಯಾದ ವ್ಯವಸೆœಯಿಲ್ಲ. ಇದರಿಂದಾಗಿ ಅವರೂ ಸಮಸ್ಯೆ ಎದುರಿಸುತ್ತಿದ್ದಾರೆ.

ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಸವಲತ್ತು ಕಲ್ಪಿಸುವ ಉದ್ದೇಶದಿಂದ ಆರಂಭಿಸಿದ ಮಂಜೇಶ್ವರ ತಾಲೂಕು ಕೇಂದ್ರವಾಗಿರುವ ಉಪ್ಪಳದ ನಯಾಬಜಾರಿನ ಸೋಂಕಾಲ್‌ ಪರಿಸರದಲ್ಲಿರುವ ಉಪ್ಪಳ ಅಗ್ನಿಶಾಮಕ ದಳಕ್ಕೆ ಸುವ್ಯವಸ್ಥಿತ ಕಚೇರಿಯಿಲ್ಲ. ಇದರಿಂದಾಗಿ ಅಗ್ನಿಶಾಮಕ ದಳದ ಸಿಬಂದಿ ಸಹಿತ ನಾಗರಿಕರು ಹತಾಶರಾಗಿದ್ದಾರೆ.

7 ಮಂದಿ ಸಿಬಂದಿ
2010ರಲ್ಲಿ ಆರಂಭಗೊಂಡ ನಯಾಬಜಾರಿನ ಸೋಂಕಾಲ್‌ ಸಮೀಪದ ಫಯರ್‌ ಸ್ಟೇಶನ್‌ನಲ್ಲಿ ಎರಡು ಫಯರ್‌ಎಂಜಿನ್‌ ವಾಹನಗಳಿವೆ. ವಾಹನ ಚಾಲಕರು ಸಹಿತ ಒಟ್ಟು 7 ಮಂದಿ ಸಿಬಂದಿಯಿದ್ದಾರೆ. ಆದರೆ ವಾಹನ ನಿಲುಗಡೆಗೊಳಿಸಲು ಸೂಕ್ತ ವ್ಯವಸ್ಥೆಯಿಲ್ಲ. ಸುದೀರ್ಘ‌ ಮುಂಗಾರಿನ ಸಮಯ ಅಗ್ನಿಶಮನ ವಾಹನಗಳ ಪಾರ್ಕಿಂಗ್‌ ಸ್ಥಳಕ್ಕೆ ಮಳೆ ನೀರು ನುಗ್ಗುತ್ತದೆ. ಕಚೇರಿ ಸಮೀಪವು ಮಳೆ ನೀರು ನಿಂತು ಅಧಿಕಾರಿಗಳು ಸಹಿತ ಸಿಬಂದಿ ಒಡಾಟಕ್ಕೆ ತೊಂದರೆಯಾಗುತ್ತಿದೆ.

ಕೇವಲ 17 ಸೆಂಟ್ಸ್‌ ಸ್ಥಳದಲ್ಲಿ ನಿರ್ಮಾಣ ಗೊಂಡ ಅಗ್ನಿಶಾಮಕ ದಳದ ಕೇಂದ್ರವು ಒಂದು ಕಚೇರಿ, ಮೂರು ವಾಹನ ನಿಲುಗಡೆಯ ಪಾರ್ಕಿಂಗ್‌ ಸ್ಥಳ ಸಹಿತ ಸಿಬಂದಿ  ವಿಶ್ರಾಂತಿ ಕೇಂದ್ರ ಹೊಂದಿದೆ. 

ಇಲ್ಲಿನ ಸಿಬಂದಿಗೆ ಕ್ವಾರ್ಟರ್ಸ್‌ ವ್ಯವಸ್ಥೆಯಿಲ್ಲ.  ಸೂಕ್ತ ಖಾಸಗಿ ಕೊಠಡಿ ವ್ಯವಸ್ಥೆಯೂ ಇಲ್ಲ. ಕಚೇರಿ ಸಮೀಪದಲ್ಲಿ ಕಾಡು ಪೊದೆಗಳು ಬೆಳೆದಿವೆ.

ಜನಪ್ರತಿನಿಧಿಗಳ ಅಸಡ್ಡೆ
ಜನಪ್ರತಿನಿಧಿಗಳ ಅಸಡ್ಡೆ  ಅಗ್ನಿ ಶಾಮಕ ಕಚೇರಿಯನ್ನು ಮೇಲ್ದರ್ಜೆಗೇರಿಸುವಲ್ಲಿ ಮುಳುವಾಗಿದೆ. ಫಯರ್‌  ಎಂಜಿನ್‌ಗಳು ನಿಲುಗಡೆಗೊಳ್ಳುವ ಸ್ಥಳವು ಶೀಟ್‌ ಹೊದಿಸಿದ ಮೇಲ್ಛಾವಣಿಯನ್ನು ಹೊಂದಿದ್ದು, ಮಳೆ ಗಾಳಿ ನೀರು ಎಂಜಿನ್‌ಗಳಿಗೆ ರಾಚಿ ನೆಲವು ಕೆಸರು ಗುಂಡಿಯಾಗುತ್ತಿದೆ. ಉತ್ತಮ ಫಯರ್‌ ಸ್ಟೇಶನ್‌ ನಿರ್ಮಾಣಕ್ಕೆ ಈ ಹಿಂದೆ ಹೊಸ ಸ್ಥಳವನ್ನು ಗೊತ್ತುಪಡಿಸಲಾಗಿದ್ದರೂ ಹಲವು ಕಾರಣಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ಕಚೇರಿಯು ಸಮಸ್ಯೆಗಳ ಮೂಲಕ ಅವಗಣನೆಗೆ ಒಳಗಾಗಿದೆ ಎನ್ನುತ್ತಾರೆ ಫಯರ್‌ ಸ್ಟೇಶನ್‌ ಅಧಿಕಾರಿಗಳು.

ಸಲಕರಣೆಗಳಿಲ್ಲ 
ಇತ್ತೀಚೆಗೆ ಉಪ್ಪಳ ನಯಾಬಜಾರಿನಲ್ಲಿ ನಡೆದ ಅಪಘಾತದಲ್ಲಿ ಐವರು ಸ್ಥಳದಲ್ಲೇ ಅಸುನೀಗಿದ್ದರು. ಬದುಕುಳಿದ ಮಂದಿ ವಾಹನದಲ್ಲಿ ಸಿಲುಕಿದ್ದರು, ಹಾನಿಗೊಂಡ ವಾಹನದಿಂದ ಬದುಕುಳಿದವರನ್ನು ಪಾರು ಮಾಡಲು, ನಜ್ಜುಗುಜ್ಜಾದ ವಾಹನದ ಡೋರ್‌ ತೆರೆ ಯುವ ಮತ್ತು ಕತ್ತರಿಸಲು ಸಹಾಯಕ‌  ಉಪಕರಣಗಳು ಅಗ್ನಿ ಶಾಮಕ ಕಚೇರಿಯಲ್ಲಿ ಇರಲಿಲ್ಲ 
ಕಷ್ಟಸಾಧ್ಯಸಮುದ್ರ ರಕ್ಷಣೆ ಸಹಿತ ಮಳೆಗಾಲದ ಅವಧಿಯಲ್ಲಿ ಸಂಭವಿಸುವ ಸಂಭಾವ್ಯ ಅವಘಡಗಳನ್ನು  ತಪ್ಪಿಸುವ ಕಾರ್ಯ ಉಪ್ಪಳದ ಅಗ್ನಿಶಾಮಕ ದಳ ಸಿಬಂದಿಯಿಂದ ಕಷ್ಟಸಾಧ್ಯ. ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 2 ಕಿ.ಮೀ. ದೂರದ ಒಳ ಪ್ರದೇಶದಲ್ಲಿರುವ ಈ ಅಗ್ನಿಶಾಮಕ ದಳದ ಕೇಂದ್ರವನ್ನು 2010 ಎ.17ರಂದು ಅಂದಿನ ಗೃಹ ಖಾತೆ ಸಚಿವ ಕೊಡೆಯೇರಿ ಬಾಲಕೃಷ್ಣನ್‌ ಉದ್ಘಾಟಿಸಿದ್ದರು. ಇದು ಅಂದಿನ ಮಂಜೇಶ್ವರ ಶಾಸಕರಾಗಿದ್ದ ಸಿ. ಎಚ್‌. ಕುಂಞಂಬು ಅವರ ದೂರದರ್ಶಿ ಯೋಜನೆಯಾಗಿದೆ.

ಗ್ಯಾರೇಜ್‌ ವ್ಯವಸ್ಥೆ ಇಲ್ಲ
ಸೂಕ್ತ ವ್ಯವಸ್ಥೆ ಮತ್ತು ಭದ್ರತೆ ಇಲ್ಲದ ಫಯರ್‌ ಸ್ಟೇಶನ್‌ ನಲ್ಲಿ ಗ್ಯಾರೇಜ್‌ ವ್ಯವಸ್ಥೆ ಇಲ್ಲ. ವಾಹನಗಳ ದುರಸ್ತಿಗೆ ಪೂರಕ ವಾಗುವ ಮೆಕ್ಯಾನಿಕಲ್‌ ಡಿವಿಶನ್‌ ಕೊರತೆಯಿದೆ. ಪ್ರಸ್ತುತ ಒಂದು ಆ್ಯಂಬುಲೆನ್ಸ್‌  ಹಾಗೂ  ಎರಡು ಫಯರ್‌ಎಂಜಿನ್‌ ಇರುವ ಈ ಅಗ್ನಿ ಶಾಮಕ ಕೇಂದ್ರದಲ್ಲಿ ಮೂವರು ವಾಹನ ಚಾಲಕರು ಇದ್ದಾರೆ. ಒಟ್ಟಾರೆ 10 ಸಿಬಂದಿಯಿರಬೇಕಾದ ಕಚೇರಿಯು ಸೂಕ್ತ ಸಿಬಂದಿ  ಕೊರ ತೆಯ ಕಾರಣದಿಂದ ಆಗಾಗ್ಗೆ ಸಮಸ್ಯೆಯ ಸುಳಿ ಯಲ್ಲಿ ಸಿಲುಕುತ್ತಿದೆ. 

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.