ಪುತ್ತೂರು: ಸಂಚಾರ ಸುವ್ಯವಸ್ಥೆಗೆ ಪ್ರಾಯೋಗಿಕ ಮುನ್ನುಡಿ
Team Udayavani, Jul 30, 2018, 10:33 AM IST
ಪುತ್ತೂರು: ಸಂಚಾರ ನಿಯಂತ್ರಣ, ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಜನರಿಂದ ಸಂಗ್ರಹಿಸಿದ ಅಭಿಪ್ರಾಯಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಪುತ್ತೂರು ನಗರದ ಹೃದಯ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಸಂಬಂಧಿಸಿ ಕೆಲವು ಬದಲಾವಣೆಗೆ ಪ್ರಾಯೋಗಿಕ ಮುನ್ನಡಿ ಇಟ್ಟಿದೆ. ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ರವಿವಾರದಿಂದಲೇ ಕಾರ್ಯರೂಪಕ್ಕೆ ಇಳಿಸಲಾಗಿದೆ. ವ್ಯತ್ಯಾಸ ಮಾಡಿದಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿ, ಸವಾರರಿಗೆ ಮಾಹಿತಿ ನೀಡಲಾಗುತ್ತಿದೆ. ಮುಂದೆ ಸೂಚನ ಫಲಕ ಅಳವಡಿಸಲಾಗುತ್ತದೆ. ಸೋಮವಾರ ವಾಹನಗಳ ಸಂಚಾರ ಜಾಸ್ತಿ ಇರುವ ಕಾರಣ ಬದಲಾದ ವ್ಯವಸ್ಥೆಯ ಅರಿವು ಮೂಡಿಸುವ ಸವಾಲು ಸಂಚಾರ ಪೊಲೀಸರಿಗಿದೆ.
ಸಪ್ತಾಹದ ಅಭಿಪ್ರಾಯ
ಪುತ್ತೂರಿನ ಸಂಚಾರ ಅವ್ಯವಸ್ಥೆಯ ಕುರಿತು ಸಾರ್ವಜನಿಕ ವಲಯದಿಂದ ಆರೋಪ, ಅಸಮಾಧಾನಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನಗರ ಠಾಣೆ ಹಾಗೂ ಸಂಚಾರ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹಣೆಗೆ ಇಲಾಖೆಗಳ ಅಧಿಕಾರಿಗಳನ್ನೂ ಕೂಡಿಕೊಂಡು ಸಪ್ತಾಹವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು, ಆಟೋ ರಿಕ್ಷಾ ಸಂಘಟನೆಗಳು, ವರ್ತಕರಿಂದ ಲಿಖಿತ ಅಭಿಪ್ರಾಯಗಳನ್ನು ಪಡೆದು ಈ ಪ್ರಯೋಗ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬದಲಾವಣೆ ಹೇಗೆಂದರೆ…
· ಆಟೋ ರಿಕ್ಷಾಗಳಿಗೆ ವಿಕ್ಟರ್ ಶಾಲಾ ಬಳಿಯಿಂದ ಸಂಜೀವ ಶೆಟ್ಟಿ ಅಂಗಡಿ ತನಕದ ರಸ್ತೆ ಒನ್ ವೇ ಮಾಡಲಾಗಿದೆ.
· ಬೊಳುವಾರು ಕಡೆಯ ರಿಕ್ಷಾಗಳು ಹಳೆ ಪೋಸ್ಟ್ ಬಜಾರ್ ರಸ್ತೆ ಮೂಲಕ ಬಸ್ ನಿಲ್ದಾಣದ ಬಳಿಯಿಂದ ಬರಬೇಕು.
· ಭುವನೇಂದ್ರ ಕಲಾ ಮಂದಿರ ರಸ್ತೆಯ ಒನ್ ವೇ ನಿಯಮ ರದ್ದು.
· ಬಸ್ ನಿಲ್ದಾಣದ ಬಳಿಯ ಸೂಪರ್ ಟವರ್ ಎದುರಿನ ದ್ವಿಚಕ್ರ ವಾಹನ ಪಾರ್ಕಿಂಗ್ ಬಸ್ ನಿಲ್ದಾಣದ ನೆಲ ಅಂತಸ್ತಿಗೆ ಸ್ಥಳಾಂತರ.
· ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಮುಖ್ಯರಸ್ತೆ, ಗಾಂಧಿಕಟ್ಟೆ ಮೂಲಕ ಪ್ರವೇಶವಿಲ್ಲ. ಬಸ್ ನಿಲ್ದಾಣದ ಬಳಿಯಿಂದ ಗಾಂಧಿಕಟ್ಟೆ ಮೂಲಕ ಮಾತ್ರ ಮುಖ್ಯರಸ್ತೆಗೆ ಪ್ರವೇಶ.
· ಕೋರ್ಟು ರಸ್ತೆಯಿಂದ ಮುಖ್ಯರಸ್ತೆಗೆ ಸೇರುವ ಆಟೋ ರಿಕ್ಷಾಗಳು ಮುಖ್ಯ ರಸ್ತೆಗೆ ಸೇರುವಾಗ ಎಡಕ್ಕೆ ಚಲಿಸಬೇಕು.
ಕಾಲಾವಕಾಶವಿದೆ
ಸಪ್ತಾಹದ ಮೂಲಕ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಸಂಚಾರ ವ್ಯತ್ಯಾಸಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು, ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಪ್ರಾಯೋಗಿಕ ಅವಧಿಯಲ್ಲಿ ಸಾಧಕ -ಬಾಧಕಗಳನ್ನು ಅರಿತುಕೊಳ್ಳಲಾಗುತ್ತದೆ. ಪ್ರಸ್ತಾವನೆ ಅಂಗೀಕರಿಸಲು ಜಿಲ್ಲಾಧಿಕಾರಿಗಳಿಗೆ ಮೂರು ತಿಂಗಳ ಕಾಲಾವಕಾಶವಿದೆ. ಒಂದು ತಿಂಗಳೊಳಗಿನ ಪ್ರಾಯೋಗಿಕ ಅವಧಿಯಲ್ಲಿ ಬದಲಾವಣೆಯ ಕ್ರಮ ಅಂತಿಮಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ವಾಹನ ಚಾಲಕರ ಸಹಕಾರಬೇಕು.
– ಮಹೇಶ್ ಪ್ರಸಾದ್,
ಪಿಐ, ಪುತ್ತೂರು
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Kalaburagi: ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ
Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!
Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು
Bangla; ಭಾರತೀಯ ಬಸ್ ಮೇಲೆ ಬಾಂಗ್ಲಾದಲ್ಲಿ ದಾಳಿ; ಭಾರತ ವಿರೋಧಿ ಘೋಷಣೆ ಕೂಗಿದ ಸ್ಥಳೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.