ಪೌರ ಕಾರ್ಮಿಕರ ಗೋಳು ಕೇಳ್ಳೋರ್ಯಾರು?


Team Udayavani, Jul 30, 2018, 11:52 AM IST

vij-1.jpg

ವಿಜಯಪುರ: ನಿತ್ಯವೂ ನಾವೆಲ್ಲ ಮನೆ ಮುಂದಿನ ಕಸವನ್ನೂ ಗುಡಿಸದೇ ಮನೆಯಲ್ಲಿ ಬೆಚ್ಚಗೆ ಮಲಗಿದ್ದರೆ, ಪೌರಕಾರ್ಮಿಕರು ಮಾತ್ರ ಛಳಿ, ಮಳೆ, ಬಿಸಿಲೆನ್ನದೇ ನಸುಕಿನಲ್ಲೇ ಬೀದಿಗೆ ಬಂದು ಸ್ವತ್ಛತೆಯಲ್ಲಿ ತೊಡಗಿರುತ್ತಾರೆ. ಇಷ್ಟಾಗಿ ಬೆವರಿಗೆ ತಕ್ಕ ಫಲವಾಗಿ ನಾಲ್ಕಾರು ತಿಂಗಳಾದರೂ ಸಂಬಳ ಬರುವುದಿಲ್ಲ. ಹೋರಾಟ ಮಾಡದೇ ಇಲ್ಲಿ ಕೂಲಿ ಸಿಗುವುದಿಲ್ಲ, ಆಧುನಿಕ ಜೀತ ವ್ಯವಸ್ಥೆಯ ಶೋಷಣೆ ಎಂದು ನೋವಿಂದ ಹೇಳುತ್ತಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ನಗರಸಭೆ ಹಂತದಿಂದ ಮಹಾನಗರ ಪಾಲಿಕೆಯಾಗಿ ವಿಜಯಪುರ ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೆ ಏರಿದ ಬಳಿಕವೂ ಮಹಾನಗರ ನಗರದಲ್ಲಿ ಜನತೆಯಂತೆ ಮಹಾನಗರದ ಪಾಲಿಕೆಯ ಪೌರ ಕಾರ್ಮಿಕರು ಕೂಡ ಇಲ್ಲದ ಸಮಸ್ಯೆ ಹಾಗೂ ಶೋಷಣೆ ಅನುಭವಿಸುತ್ತಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಈ ಮೊದಲು ಕಾಯಂ ಸೇವೆಯ 80 ಪೌರ ಕಾರ್ಮಿಕರಿದ್ದಾರೆ. ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುವ ನೌಕರರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ 185 ಹುದ್ದೆಗೆ ಅರ್ಜಿ ಕರೆದರೂ ವಿವಿಧ ಮೀಸಲು ಸೇರಿದಂತೆ ಷರತ್ತಿನ ವ್ಯಾಪ್ತಿಯಲ್ಲಿ ಕಾಯಂ ನೇಮಕವಾದವರು 75 ಕಾರ್ಮಿಕರು ಮಾತ್ರ.
 
ಇದರ ಹೊರತಾಗಿಯೂ ಮಹಾನಗರ ಪಾಲಿಕೆಯಲ್ಲಿ ನಾಲ್ಕು ಖಾಸಗಿ ಸಂಸ್ಥೆಗಳ ಮೂಲಕ 450ಕ್ಕೂ ಅಧಿಕ ಪೌರ ಕಾರ್ಮಿಕರು ಹೊರ ಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅದರಲ್ಲಿ 300ಕ್ಕೂ ಅಧಿಕ ಪೌರ ಕಾರ್ಮಿಕರ ವಯೋಮಿತಿ ಮೀರಿದೆ. ಇದೀಗ ಸರ್ಕಾರ ಹೊರಗುತ್ತಿಗೆ ವ್ಯಸ್ಥೆಯನ್ನು ರದ್ದು ಪಡಿಸಿದ್ದು, ಮಹಾನಗರ ಪಾಲಿಕೆಯ ತಾತ್ಕಾಲಿಕ ನೌಕರರಾಗಿ ಪರಿವರ್ತನೆ ಆಗಲಿದ್ದಾರೆ. ಹೊಸ ಸ್ವರೂಪದ ಶೋಷಣೆ ಆರಂಭವಾಗಲಿದೆ ಎಂಬ ಆತಂಕ ತೋಡಿಕೊಳ್ಳುತ್ತಾರೆ.
 
ಇನ್ನು ಕಳೆದ ಒಂದೂವರೆ ದಶಕದಿಂದ ಹೊರ ಗುತ್ತಿಗೆ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಪ್ರತಿ ತಿಂಗಳು ಸಂಬಳ ಪಡೆದ ದಾಖಲೆಯೇ ಇಲ್ಲ. ಕರ್ತವ್ಯ ನಿರ್ವಹಿಸಿದರೂ ಬಲವಂತವಾಗಿ ಗೈರು ಹಾಜರಿ ಎಂದು ದಾಖಲಿಸಿ ಸಂಬಳ ನೀಡದೇ ವಂಚಿಸಲಾಗುತ್ತಿದೆ. ದುಡಿದ ಕಾರ್ಮಿಕರಿಗೆ ನಾಲ್ಕಾರು ತಿಂಗಳಾದರೂ ಸಂಬಳ ದೊರೆಯುವುದಿಲ್ಲ. ಸಂಬಳಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವುದು, ಈ ಹಂತದಲ್ಲಿ ಒಂದೆರಡು ತಿಂಗಳ ಸಂಬಳ ನೀಡುವುದು ವಾಡಿಕೆಯಾಗಿದೆ. ಕಳೆದ ಐದು ದಿನಗಳ ಹಿಂದಷ್ಟೇ ನಾವು ಸಂಬಳಕ್ಕಾಗಿ ಬೀದಿಗಿಳಿದಿದ್ದೆವು ಎಂದು ಪೌರ ಕಾರ್ಮಿಕರು ದೂರುತ್ತಾರೆ.

ನಮ್ಮ ಮನೆಯ ಮುಂದಿನ ಕಸವನ್ನು ನಾವೇ ಗೂಡಿಸದ ಪರಿಸ್ಥಿತಿಯಲ್ಲಿ ಪೌರ ಕಾರ್ಮಿಕರು ಮಾತ್ರ ಬೀದಿ ಬೀದಿಗಳಲ್ಲಿ ಕಸ ಹಾಗೂ ಒಳಚರಂಡಿ ಸ್ವತ್ಛಗೊಳಿಸುವ ಕಾರ್ಮಿಕರಿಗೆ ಸಂಬಳದ ವಿಷಯದಲ್ಲಿ ಮಾತ್ರವಲ್ಲ, ಇತರೆ ಸೌಲಭ್ಯಗಳನ್ನು ಕಲ್ಪಿಸುವಲ್ಲಿಯೂ ಶೋಷಣೆ ಮುಂದುವರಿದೆ. ಒಳಚರಂಡಿ ಹಾಗೂ ಇತರೆ ಅಪಾಯಕಾರಿ ಕೆಲಸ ಮಾಡು ಪರ ಕಾರ್ಮಿಕರಿಗೆ ಜೀವ ರಕ್ಷಣೆ ಅಗತ್ಯವಾದ ಪೂರಕ ಆಧುನಿಕ ಪರಿಕರಗಳನ್ನು ಒದಗಿಸುತ್ತಿಲ್ಲ. ವರ್ಷಕ್ಕೆ ಬಣ್ಣದ ಒಂದು ಅಂಗಿಯನ್ನು ಕೊಡುವುದನ್ನೇ ಸೌಲಭ್ಯಗಳ ಪೂರೈಕೆ ಎಂದು ಬಿಂಬಿಸಲಾಗುತ್ತದೆ.

ಧೂಳು ಹಾಗೂ ಅಪಾಯಕಾರಿ ವಾತಾವರಣದಿಂದ ರಕ್ಷಿಸಿಕೊಳ್ಳಲು ನೀಡುವ ಮಾಸ್ಕ್ಗಳು ಗುಣಮಟ್ಟದಿಂದ ಕೂಡಿರದ ಕಾರಣ ಒಂದು ವಾರಕ್ಕೆ ಹಾಳಾಗುತ್ತವೆ. ಕೈ ಕವಚಗಳು, ಕಾಲಿನ ರಕಣೆಗೆ ಬಲಿಷ್ಠ ಬೂಟುಗಳು ನಮ್ಮ
ಪಾಲಿಗೆ ಗಗನ ಕುಸುಮ. ಎಷ್ಟೋ ಸಂದರ್ಭದಲ್ಲಿ ಪೌರ ಕಾರ್ಮಿಕರೇ ನೇರವಾಗಿ ಒಳಚರಂಡಿಗೆ ಇಳಿದು ಸ್ವತ್ಛಗೊಳಿಸುವ ದುಸ್ಥಿತಿ ಇದೆ. ಪೌರ ಕಾರ್ಮಿಕರ ಸಧ್ಯದ ಸ್ಥಿತಿ ಆಧುನಿಕ ಶೋಷಿತ ಜೀತ ವ್ಯವಸ್ಥೆಯಲ್ಲದೇ ಬೇರಿನ್ನೇನೂ ಅಲ್ಲ. ಪೌರ ಕಾರ್ಮಿಕರ ಸಮಸ್ಯೆ ಗಂಭೀರ ಸ್ವರೂಪದಲ್ಲಿದ್ದರೂ ಸರ್ಕಾರ ಕಣ್ತೆರೆದು ನೋಡುವುದಿಲ್ಲ.
ನಗರದ ಸ್ವತ್ಛತೆ ಕೆಲಸ ಮಾಡುವ ನಮ್ಮನ್ನು ಸಾರ್ವಜನಿಕರು ತಮ್ಮ ಸೇವಕರೆಂದು ನಮ್ಮ ನೋವಿಗೆ ಧ್ವನಿ ಎತ್ತುವುದಿಲ್ಲ ಎಂದು ದೂರುತ್ತಾರೆ.

ಆದರೆ ಪೌರ ಕಾರ್ಮಿಕರ ಈ ದೂರನ್ನು ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಒಪ್ಪುವುದಿಲ್ಲ. ಪೌರ ಕಾರ್ಮಿಕರಿಗೆ ಇದೀಗ ಹೊರ ಗುತ್ತಿಗೆ ವ್ಯವಸ್ಥೆರದ್ದಾಗಿದೆ. ಒಳಚರಂಡಿ ಸ್ವತ್ಛತೆಗಾಗಿ 4 ಡಿ-ಸಿಲ್ಟಿಂಗ್‌ ಹಾಗೂ 2 ಸಕ್ಕಿಂಗ್‌ ಯಂತ್ರಗಳಿವೆ. ಇದರ ಹೊರತಾಗಿ ಕಾರ್ಮಿಕರ ಹಿತ ರಕ್ಷಣೆಗಾಗಿ ವಿಮಾ ಸೌಲಭ್ಯ ಕಲ್ಪಿಸುವ ಜೊತೆಗೆ ನಿಯಮಿತವಾಗಿ ಆರೋಗ್ಯ ಪರೀಕ್ಷೆಯನ್ನೂ ಮಾಡಿಸಲಾಗುತ್ತದೆ. ಹೀಗೆ ಎಲ್ಲ  ವಸ್ಥೆಯನ್ನೂ ಆಡಲಾಗುತ್ತಿದೆ ಎಂದು ವಿವರಿಸುತ್ತಾರೆ

ಪೌರ ಕಾರ್ಮಿಕರು ಹೊರ ಗುತ್ತಿಗೆ ವ್ಯವಸ್ಥೆ ಇದ್ದಾಗ ಸಂಬಳ ವಿತರಣೆಯಲ್ಲಿ ಕೊಂಚ ಸಮಸ್ಯೆ ಆಗಿತ್ತು. ಹೊರಗುತ್ತಿಗೆ
ವ್ಯವಸ್ಥೆ ರದ್ದಾಗಿರುವ ಕಾರಣವ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಇದರ ಹೊರತಾಗಿ ಉಳಿದಂತೆ ಎಲ್ಲ
ಸೌಲಭ್ಯಗಳನ್ನೂ ಪಾಲಿಕೆ ಕೈಗೊಂಡಿದೆ. ನಿರ್ಮಾಣ ಹಂತದ ಹಾಗೂ ಮುಖ್ಯ ಚರಂಡಿಗೆ ಸಂಪರ್ಕ ಕಲ್ಪಿಸದ ಹೊಸ
ಒಳಚರಂಡಿಯಲ್ಲಿ ಬಿದ್ದ ಸಿಮೆಂಟ್‌ ತೆಗೆಯಲು ಕಾರ್ಮಿಕರು ಇಳಿದುದನ್ನೇ ಮಾನವ ಬಳಕೆ ಎಂದು ದೂರುವುದು
ಸಲ್ಲದ ಕ್ರಮ. 
 ಹರ್ಷಾ ಶೆಟ್ಟಿ, ಪೌರಾಯುಕ್ತರು, ಮಹಾನಗರ ಪಾಲಿಕೆ, ವಿಜಯಪುರ

ಪೌರ ಕಾರ್ಮಿಕರು ಎಂದರೆ ಆಧುನಿಕ ಜೀತ ವ್ಯವೆಸ್ಥೆ ಹಾಗೂ ಶೋಷಣೆಯ ಹೊಸ ಸ್ವರೂಪದ ದುರವಸ್ಥೆ ಅಷ್ಟೇ. ನಗರವನ್ನು ಸ್ವತ್ಛವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರ ಹಿತ ರಕ್ಷಗೆ ವಿಷಯದಲ್ಲಿ ಸರ್ಕಾರ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ ಸಹಿಲಸಾಧ್ಯ. ದುಡಿಮೆಗೆ ಪ್ರತಿಫಲ ಪಡೆಯಲು ಕೂಡ ಬೀದಿಗಿಳಿದು ಹೋರಾಡಬೇಕಾದ
ದುಸ್ಥಿತಿ ಇರುವುದೇ ಇದಕ್ಕೆ ಸಾಕ್ಷಿ. 
 ಲಕ್ಷ್ಮಣ ಹಂದ್ರಾಳ, ಪೌರ ಕಾರ್ಮಿಕರ ಮುಖಂಡ, ವಿಜಯಪುರ

„ಜಿ.ಎಸ್‌. ಕಮತರ

ಟಾಪ್ ನ್ಯೂಸ್

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.