ರಾಜಕಾರಣಿಗಳ ನೋಡಿ ಸ್ವಪ್ರತಿಷ್ಠೆ ಬಿಡಿ
Team Udayavani, Jul 30, 2018, 12:15 PM IST
ಬೆಂಗಳೂರು: “ವೈದ್ಯರು ಸ್ವಪ್ರತಿಷ್ಠೆ ಬಿಟ್ಟು, ಸನ್ನಿವೇಶಗಳನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ರಾಜಕಾರಣಿಗಳನ್ನು ನೋಡಿ ಕಲಿಯಿರಿ’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಕಿವಿಮಾತು ಹೇಳಿದರು. ನಗರದ ಹೋಟೆಲೊಂದರಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ ಬೆಂಗಳೂರು ಶಾಖೆ ಹಮ್ಮಿಕೊಂಡಿದ್ದ “ವೈದ್ಯರ ದಿನಾಚರಣೆ-2018′ ಉದ್ಘಾಟಿಸಿ ಅವರು ಮಾತನಾಡಿದರು.
ಯಾವೊಬ್ಬ ರೋಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಾಗ, ಭಾವೋದ್ವೇಗಕ್ಕೆ ಒಳಗಾದ ಆ ರೋಗಿಯ ಕುಟುಂಬ ವೈದ್ಯರ ಮೇಲೆ ಮುಗಿಬೀಳುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿವೆ. ಹಾಗಂತಾ, ಕಾಯ್ದೆ ಅಥವಾ ಕಾನೂನುಗಳ ಮೂಲಕ ಅಂತಹವರನ್ನು ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ. ಸ್ವಪ್ರತಿಷ್ಠೆ ಬದಿಗೊತ್ತಿ, ದುಃಖದಲ್ಲಿರುವವರ ಸ್ಥಾನದಲ್ಲಿ ನಿಂತು ಯೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸ್ವಪ್ರತಿಷ್ಠೆಯನ್ನು ಬಿಡುವುದರಲ್ಲಿ ವೈದ್ಯರಿಗೆ ರಾಜಕಾರಣಿಗಳು ಮಾದರಿ ಆಗಬೇಕು ಎಂದು ಸಲಹೆ ಮಾಡಿದ ಯು.ಟಿ. ಖಾದರ್, ಸದನದಲ್ಲಿ ಜನಪ್ರತಿನಿಧಿಗಳು ಪರಸ್ಪರ ಎಷ್ಟೇ ಆರೋಪ-ಪ್ರತ್ಯಾರೋಪಗಳನ್ನು ಮಾಡಿದರೂ, ಹೊರಗೆ ಬಂದ ತಕ್ಷಣ ಅದೆಲ್ಲವನ್ನೂ ಮರೆತು ಸ್ನೇಹಿತರಾಗುತ್ತೇವೆ. ಇದನ್ನು ವೈದ್ಯರು, ಅಧಿಕಾರಿಗಳು ಕಲಿಯಬೇಕು ಎಂದರು.
ವೈದ್ಯರು ಕೇವಲ ಮದ್ದು ಕೊಡುವುದು ಕಲಿತರೆ ಸಾಲದು, ಸನ್ನಿವೇಶಗಳನ್ನು ನಿಭಾಯಿಸುವ ಕಲೆಯನ್ನೂ ಕರಗತ ಮಾಡಿಕೊಳ್ಳಬೇಕು. ಎಲ್ಲವೂ ಕಾನೂನಿನ ಮೂಲಕವೇ ಬದಲಾವಣೆ ಸಾಧ್ಯವಿಲ್ಲ. ವರದಕ್ಷಿಣೆ ಪಿಡುಗು, ಭ್ರಷ್ಟಾಚಾರ ನಿಯಂತ್ರಣ, ಭಯೋತ್ಪಾದನೆ ನಿಗ್ರಹ, ಕೋಮುಗಲಭೆ ವಿರುದ್ಧ ಕೂಡ ಕಾನೂನುಗಳು ಜಾರಿಯಲ್ಲಿವೆ. ಆದರೆ, ಅದರಿಂದ ಕೃತ್ಯಗಳು ಹೆಚ್ಚಿಗೆ ಆಗಿವೆ ಹೊರತು, ಕಡಿಮೆ ಆಗಿಲ್ಲ. ಹಾಗಾಗಿ, ವೈದ್ಯರ ಮೇಲಿನ ಹಲ್ಲೆಗಳು ಅಥವಾ ದಾಳಿಗಳಿಗೆ “ವೈದ್ಯರ ನಿಂದನೆ ವಿರೋಧಿ ಕಾಯ್ದೆ’ ಪರಿಹಾರ ಆಗದು ಎಂದು ಸೂಚ್ಯವಾಗಿ ಹೇಳಿದರು.
ವೈದ್ಯರಲ್ಲದವರ ಪ್ರವೇಶ: ಇತ್ತೀಚಿನ ದಿನಗಳಲ್ಲಿ ವೈದ್ಯರಲ್ಲದವರು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಪರಿಣಾಮ ಅದೊಂದು ಉದ್ಯಮವಾಗಿ ಪರಿವರ್ತನೆ ಆಗುತ್ತಿದೆ. ಈ ಬೆಳವಣಿಗೆಗೆ ಭಾರತೀಯ ವೈದ್ಯಕೀಯ ಸಂಸ್ಥೆ ಕಡಿವಾಣ ಹಾಕಬೇಕು ಎಂದ ಅವರು, ವೈದ್ಯಕೀಯ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಮತ್ತು ಸಾಮರ್ಥ್ಯ ಇದೆ. ಅದನ್ನು ಹೊರದೇಶಗಳಿಗೆ ವಿಸ್ತರಿಸುವ ಅವಶ್ಯಕತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ಎಸ್. ಶ್ರೀಕಂಠ, ಡಾ.ಎಂ. ಗೋವಿಂದರಾಜ, ಡಾ.ರಿಯಾಜ್ ಬಾಷಾ ಸರ್ದಾರ್, ಡಾ.ಶ್ರೀನಿವಾಸ್ ಜಿ. ಕಾಶಿ, ಡಾ.ಕೆ.ಎಚ್. ಜ್ಞಾನೇಂದ್ರಪ್ಪ, ಡಾ.ಸುಮತಿ ಕೆ. ಭಟ್ ಅವರಿಗೆ “ಡಾ.ಬಿ.ಸಿ. ರಾಯ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ, ಸಂಸ್ಥೆಯ ಬೆಂಗಳೂರು ಶಾಖೆ ಅಧ್ಯಕ್ಷ ಡಾ.ಎಸ್. ಶ್ರೀನಿವಾಸ, ಬಿಎಂಸಿಆರ್‌ಐ ನಿರ್ದೇಶಕ ಡಾ.ಎಚ್.ಎಸ್. ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ಡಾಕ್ಟರ್‌ಗಳಿಗೇ ಮಂತ್ರಿಯಾದೆ!: ಡಾಕ್ಟರ್ ಆಗುವ ಕನಸು ಕಂಡ ನಾನು, ಡಾಕ್ಟರ್‌ಗಳಿಗೇ ಮಂತ್ರಿಯಾದೆ. ಇದು ಪ್ರಜಾಪ್ರಭುತ್ವದ ವೈಶಿಷ್ಟé ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು. ಎಸ್ಸೆಸ್ಸೆಲ್ಸಿ ಪೂರೈಸಿದ ನಂತರ ನನ್ನ ಅಣ್ಣನಂತೆ ನಾನೂ ವೈದ್ಯನಾಗಬೇಕು ಎಂಬ ಆಶೆ ಇತ್ತು.
ಇದಕ್ಕಾಗಿ ಪ್ರಥಮ ಪಿಯುಸಿ ವಿಜ್ಞಾನದಲ್ಲಿ ಪ್ರವೇಶ ಪಡೆದೆ. ಆದರೆ ಅದನ್ನು ಅರ್ಧಕ್ಕೇ ಕೈಬಿಟ್ಟು, ಕಲಾ ವಿಭಾಗದಲ್ಲಿ ಮತ್ತೆ ಪ್ರವೇಶ ಪಡೆದು ಕಾನೂನು ಪದವಿ ಪೂರೈಸಿದೆ. ವೈದ್ಯನಾಗುವ ಆಸೆ ಕೈಗೂಡಲಿಲ್ಲ. ಆದರೆ, ವೈದ್ಯರ ಮಂತ್ರಿಯಾಗಿ ಕಾರ್ಯನಿರ್ವಹಿಸಲು ನನಗೆ ಹಿಂದಿನ ಸರ್ಕಾರದಲ್ಲಿ ಅವಕಾಶ ಸಿಕ್ಕಿತ್ತು ಎಂದು ಮೆಲುಕು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.