ಐಟಿ ರಿಟರ್ನ್ ಸಲ್ಲಿಕೆ ದುಪ್ಪಟ್ಟು ; ರಿಫಂಡ್ ಪ್ರಮಾಣ ಶೇ.80 ಹೆಚ್ಚು
Team Udayavani, Jul 30, 2018, 4:21 PM IST
ಹೊಸದಿಲ್ಲಿ : ಕಳೆದ ವಾರಾಂತ್ಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಐಟಿ ರಿಟರ್ನ್ ಸಲ್ಲಿಸಿರುವವರ ಸಂಖ್ಯೆ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟಾಗಿದೆ; ಈ ಬಾರಿ ಸುಮಾರು ಮೂರು ಕೋಟಿ ಜನರು ಐಟಿ ರಿಟರ್ನ್ ಸಲ್ಲಿಸಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.
ತೆರಿಗೆ ಪಾವತಿದಾರರು ಮತ್ತು ಕನ್‌ಸಲ್ಟೆಂಟ್‌ಗಳ ಒತ್ತಡಕ್ಕೆ ಮಣಿದು ಸರಕಾರ ಐಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಆ.31ರ ವರೆಗೆ ವಿಸ್ತರಿಸಿದೆ.
ಈ ಬಾರಿ ಐಟಿ ರಿಫಂಡ್ ಕೇಸುಗಳ ಸಂಖ್ಯೆ 65 ಲಕ್ಷ ದಾಟಿದ್ದು ಇದು ಶೇ.81ರಷ್ಟಾಗಿದೆ. ಕಳೆದ ವರ್ಷ ಐಟಿ ರಿಫಂಡ್ 57,551 ಕೋಟಿ ರೂ ಆಗಿತ್ತು. ಈ ಬಾರಿ ಅದು ಶೇ.35ರಷ್ಟು ಹೆಚ್ಚಿದ್ದು ಈ ವರಗಿನ ಐಟಿ ರಿಫಂಡ್ 77,700 ಕೋಟಿ ರೂ. ಆಗಿರುವುದಾಗಿ ಮೂಲಗಳು ತಿಳಿಸಿವೆ.
ರಿಫಂಡ್‌ಗಳನ್ನು ಬಾಕಿ ಇರಿಸದೆ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಇತ್ಯರ್ಥಪಡಿಸಬೇಕೆಂಬ ಎನ್‌ಡಿಎ ಸರಕಾರದ ಜನಸ್ನೇಹಿ ನೀತಿಯು ಹೊಸ ವ್ಯವಸ್ಥೆಯಲ್ಲಿನ ಚುರುಕಿನ ಪ್ರಕ್ರಿಯೆಗೆ ಪೂರಕವಾಗಿದೆ.
ಈ ಬಾರಿ ಶೇ.60ರಷ್ಟು ಐಟಿ ರಿಟರ್ನ್ ಗಳು ಆನ್ ಲೈನ್ ಮೂಲಕ ಸಲ್ಲಿಕೆಯಾಗಿವೆ. ಇಷ್ಟೂ ಪ್ರಮಾಣದ ರಿಟರ್ನ್ ಗಳನ್ನು ಈಗಾಗಲೇ ಸಂಸ್ಕರಿಸಲಾಗಿದೆ.
ಈ ಬಾರಿ 1.25 ಕೋಟಿ ಹೊಸ ಆದಾಯ ತೆರಿಗೆ ಪಾವತಿದಾರರನ್ನು ಸೇರಿಸಿಕೊಳ್ಳುವುದು ಸರಕಾರದ ಗುರಿಯಾಗಿದೆ. ಕಳೆದ ವರ್ಷ 1.06 ಕೋಟಿ ಹೊಸ ಐಟಿ ಪಾವತಿದಾರರನ್ನು ಸೇರಿಸಿಕೊಳ್ಳಲಾಗಿತ್ತು.
ತಡವಾಗಿ ಐಟಿ ರಿಟರ್ನ್ ಸಲ್ಲಿಸುವವರಿಗೆ ದಂಡ ಶುಲ್ಕ ಹೇರುವ ಸರಕಾರದ ಕ್ರಮದಿಂದಾಗಿ ಈ ಬಾರಿ ತ್ವರಿತ ಗತಿಯಲ್ಲಿ ಅತ್ಯಧಿಕ ಸಂಖ್ಯೆಯ ಐಟಿ ರಿಟರ್ನ್ ಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ಗುರುವಾರದ ವರೆಗೆ ಸಲ್ಲಿಕೆಯಾಗಿರುವ ಇ-ಐಟಿ-ರಿಟರ್ನ್ ಸಂಖ್ಯೆ 3.07 ಕೋಟಿ . 2017ರ ಜು.26ರ ವರಗೆ ಸಲ್ಲಿಸಲ್ಪಟ್ಟಿದ್ದ ಐಟಿ ರಿಟರ್ನ್ಗಳ ಸಂಖ್ಯೆ 1.07 ಕೋಟಿ. ಎಂದರೆ ಈ ಬಾರಿ ಶೇ.82ರ ಹೆಚ್ಚಳವನ್ನು ಸಾಧಿಸಲಾಗಿದೆ.
2016-17ರ ಹಣಕಾಸು ವರ್ಷದಲ್ಲಿ ಸಲ್ಲಿಸಲಾಗಿದ್ದ ಐಟಿ ರಿಟರ್ನ್ ಸಂಖ್ಯೆ 1.4 ಕೋಟಿ; 2017-18ರ ಹಣಕಾಸು ವರ್ಷದಲ್ಲಿ ಸಲ್ಲಿಕೆಯಾಗಿರುವ ಐಟಿ ರಿಟರ್ನ್ ಸಂಖ್ಯೆ 2.96 ಕೋಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.