ಪೇಜಾವರ ಶ್ರೀಗಳ ರಜತ ತುಲಾಭಾರ ಸೇವೆ, ಅಭಿನಂದನೆ 


Team Udayavani, Jul 31, 2018, 11:27 AM IST

2907mum03a.jpg

ಮುಂಬಯಿ: ಐತಿಹ್ಯ ಪಂಚಮ ಪರ್ಯಾಯ ಪೂರೈಸಿದ ಯತಿವರ್ಯರ ಜೊತೆ ಕಳೆಯುವುದೇ ನಮ್ಮೆಲ್ಲರ ಸೌಭಾಗ್ಯ. ಇಡೀ ವಿಶ್ವಕ್ಕೆ ಸಂಸ್ಕಾರವನ್ನು ಕರುಣಿಸುವ ಅವರ ವಿಚಾರಗಳು ಅತ್ಯದ್ಭುತವಾದುದು. ಇಂತಹ ಸಾಧು-ಸಂತರಿಂದಲೇ ಧರ್ಮ, ಸಂಸ್ಕೃತಿಯಿಂದ  ಕೂಡಿದ ರಾಷ್ಟ್ರ ನಿರ್ಮಾಣ ಸಾಧ್ಯ. ಅವರ ಆಗಾಧವಾದ ತಪಸ್ಸು, ಧರ್ಮ ನಿಷ್ಠೆಯಿಂದ ಮನುಕುಲದ ಭವಿಷ್ಯ ಫಲಿಸುವುದು. ಸ್ವಾಮೀಜಿಗಳ ತಪಸ್ಸಿನ ಫಲ ನಿಶ್ಚಿತ ರೂಪದಲ್ಲಿ ನಮಗುಳಿ ಯುವುದು. ಆ ಮೂಲಕವೇ ರಾಷ್ಟ್ರಭಕ್ತಿ ನಿರ್ಮಾಣಗೊಂಡು ರಾಮರಾಜ್ಯ ಸಾಧ್ಯವಾಗುವುದು ಎಂದು ಮಹಾರಾಷ್ಟ್ರ ಸರಕಾರದ ವಸತಿ ಮತ್ತು ಕಾರ್ಮಿಕ ಸಚಿವ ಪ್ರಕಾಶ್‌ ಮೆಹ್ತಾ ನುಡಿದರು.

ಜು. 28 ರಂದು ಸಂಜೆ ಸಾಂತಾ ಕ್ರೂಜ್‌ ಪೂರ್ವದ ಪೇಜಾವರ ಮಠದಲ್ಲಿ ಐತಿಹ್ಯ ಪಂಚಮ ಪರ್ಯಾಯ ಮಹೋತ್ಸವ ಪೂರೈಸಿ ಪ್ರಥಮ ಬಾರಿಗೆ ಮುಂಬಯಿಗೆ ಆಗಮಿಸಿದ ಯತಿಕುಲ ಚಕ್ರವರ್ತಿ ಪೇಜಾವರ ಸ್ವಾಮಿಗಳ ಅಭಿವಂದನಾ  ಸಮಿತಿ ಪೇಜಾವರ ಮಠ ಮುಂಬಯಿ ಮತ್ತು ನಗರದ ತುಳು ಕನ್ನಡಿಗ ಸಂಘ ಸಂಸ್ಥೆಗಳು ಆಯೋಜಿಸಿದ ಅಭಿನಂದನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾನಾಡಿ ಶುಭಹಾರೈಸಿದರು.

ಸಮಾರಂಭದಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಮಹಾಪೌರ ಪ್ರೊ| ವಿಶ್ವನಾಥ್‌ ಮಹಾದೇಶ್ವರ್‌ ಮುಖ್ಯ ಅತಿಥಿಯಾಗಿದ್ದರು. ಪೇಜಾ ವರ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಧಾರ್ಮಿಕ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿ ಅಭ್ಯಾಗತರುಗಳಾಗಿ ಉದ್ಯಮಿಗಳಾದ ವಿರಾರ್‌ ಶಂಕರ್‌ ಬಿ. ಶೆಟ್ಟಿ ಮತ್ತು ಆಲ್‌ಕಾರ್ಗೋ ಶಶಿಕಿರಣ್‌ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿಗಳು ಮತ್ತು ಮಹಾ ದಾನಿಗಳು, ಭಕ್ತರು ಪೇಜಾವರ ಶ್ರೀಗಳ ರಜತ ತುಲಾಭಾರ ನೆರವೇರಿಸಿ ಸಾರ್ವಜನಿಕವಾಗಿ ಸಮ್ಮಾನಿಸಿ ಅಭಿನಂದಿಸಿ ಗೌರವಿಸಿದರು. ಮಹಾ ನಗರದಲ್ಲಿನ ಉಪಸ್ಥಿತ ತುಳು ಕನ್ನಡಿಗ ಸಂಘ-ಸಂಸ್ಥೆಗಳ ಮುಖ್ಯಸ್ಥರು ಶ್ರೀಗಳಿಗೆ ಪುಷ್ಪ ಗೌರವದೊಂದಿಗೆ ಶುಭಹಾರೈಸಿದರು.

ಮಹಾಪೌರ ಮಹಾದೇಶ್ವರ್‌ ಮಾತ ನಾಡಿ, ನಾನೂ ಮೂಲತಃ  ಕರ್ನಾಟಕ ಆಂಧ್ರ ಪ್ರದೇಶದವ. ಗಡಿಭಾಗದಿಂದ ಹೊಟ್ಟೆಪಾಡಿಗಾಗಿ ಮುಂಬಯಿಗೆ ಬಂದು ನೆಲೆಸಿದವ. ಸ್ವಾಮೀಜಿ ಅವರ ಆಶೀರ್ವಾದಗಳಿಂದಲೇ ನಾನೂ ಈ ಮಟ್ಟಕ್ಕೆ ಬೆಳೆದವ.  ಲೋಕಾಂತ ಪ್ರಿಯ, ಏಕತೆಯ ಹರಿಕಾರರಾದ ಪೇಜಾವರ ಶ್ರೀಗಳ ಭಗವತøಜ್ಞೆಯ ವಿಶಾಲದೃಷ್ಟಿಯುಳ್ಳ ಇವರ ದರ್ಶನ ಪಡೆಯುವುದೇ ನಮ್ಮ ಭಾಗ್ಯವೇ ಸರಿ ಎಂದರು.

ಸತ್ಯಧ್ಯಾನ ವಿದ್ಯಾಪೀಠ ಮುಂಬಯಿ ಕುಲಪತಿ ವಿದ್ವಾನ್‌ ವಿದ್ಯಾ ಸಿಂಹಾ ಚಾರ್ಯ ಅಭಿವಂದನಾ ನುಡಿಗಳನ್ನಾಡಿ, ಮನುಷ್ಯನಿಗೆ ಆಧ್ಯಾತ್ಮಿಕ ಬಲದ ಸಂಪತ್ತಿನ ಅಗತ್ಯ ವಿದೆ. ಸಾತ್ವಿಕವಾದ ಕಾರ್ಯದಲ್ಲಿ ತಮ್ಮ ಶಕ್ತಿಯನ್ನು ಒಲಿಸುವುದು ಶ್ರೀಗಳ ಪರಮ ಕರ್ತವ್ಯವಾಗಿದೆ. ಅವರಲ್ಲಿನ ಹರೆಯದ ಉತ್ಸಾಹ ಈಗಲೂ,  ಈಗೀನ ಉತ್ಸಾಹ ಆಗಲೂ ಉಳಿಸಿಕೊಂಡಿ ದ್ದಾರೆ. ಹೇಗೆ ವಾದಿರಾಜರು 125 ವರ್ಷಗಳನ್ನು ಸಂಪನ್ನಗೊಳಿಸಿದರೋ, ಹಾಗೆಯೇ ವಿಶ್ವೇಶತೀರ್ಥರೂ ಆಯು ರಾರೋಗ್ಯವಾಗಿ ಸುದೀರ್ಘ‌ ಆಯುಷ್ಯ ಕಾಣುವಂತಾಗಲಿ. ಶ್ರೀಗಳ ಮಾರ್ಗದರ್ಶನ ಭಕ್ತಾದಿಗಳಿಗೆ ಅನುಕೂಲಕರ ಮತ್ತು ಹಿತವಾಗಿರಲಿ. ಅಖಂಡ ಹಿಂದೂ ಸಮಾಜಕ್ಕೆ, ಹಿಂದೂ ಹೃದಯ ಸಾಮ್ರಾಟ ಗುರುವಾಗಿರಲಿ ಎಂದು  ಶುಭಹಾರೈಸಿದರು.

ಸ್ಥಳೀಯ ಬಿಲ್ಲವರ ಭವನ ದಿಂದ ಶ್ರೀಗಳನ್ನು ಭವ್ಯ ಶೋಭಾಯಾತ್ರೆಯಲ್ಲಿ ಮಠಕ್ಕೆ ಭಕ್ತಿಪೂರ್ವಕ ವಾಗಿ ಬರಮಾಡಿಕೊಳ್ಳಲಾಯಿತು. ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಸ್ವಾಗತ ಗೋಪುರಕ್ಕೆ ಶ್ರೀಗಳು ಭೂಮಿಪೂಜೆ ನೆರವೇರಿಸಿ ಬಳಿಕ ಗೋವರ್ಧನಾ ಮೆಡಿಕಲ್‌ ರಿಸರ್ಚ್‌ ಕೇಂದ್ರವನ್ನು ಉದ್ಘಾಟಿಸಿದರು.   ಭವ್ಯ ಸಮಾರಂಭದಲ್ಲಿ ಕೈರಬೆಟ್ಟು ವಿಶ್ವನಾಥ ಭಟ್‌, ಕೃಷ್ಣರಾಜ ತಂತ್ರಿ ಅತಿಥಿಗಳನ್ನು ಗೌರವಿಸಿದರು. ಶಾಖೆಯ ಪ್ರಬಂಧಕ ರಾದ ಹರಿ ಭಟ್‌, ನಿರಂಜನ್‌ ಗೋಗೆr, ವಿದ್ವಾಂಸರು. ಪುರೋಹಿತರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಅಧ್ಯಕ್ಷ ಡಾ| ಎ. ಎಸ್‌. ರಾವ್‌ ಸ್ವಾಗತಿಸಿದರು. ಆನಂದತೀರ್ಥ ವಿದ್ಯಾಪೀಠ ಮುಂಬಯಿ ಕುಲಪತಿ ವಿದ್ವಾನ್‌ ನಾಗರಹಳ್ಳಿ ಪ್ರಹ್ಲಾದ್‌ ಆಚಾರ್ಯ ಪ್ರಸ್ತಾವನೆಗೈದರು. 

ಶಾಖೆಯ ಪ್ರಬಂಧಕ ವಿದ್ವಾನ್‌ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಅತಿಥಿ, ಮಹಾನ್‌ ದಾನಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಆಚಾರ್ಯ ರಾಮಕುಂಜ ವಂದಿಸಿದರು. 

ಮುಂಬಯಿ ಭಾರತೀಯರ ಆತ್ಮವಾಗಿದೆ. ಇದು ನೂರಾರು ಸಂತರನ್ನು, ವಿದ್ವಾಂಸರು, ಧುರೀಣರು ಕಂಡ ಭೂಮಿ.  ನಾನು ಯತಿಕುಲ ಚಕ್ರವರ್ತಿ ಎಂದು ಹೇಳುವಷ್ಟು ಸಾಧಕನಲ್ಲ. ಬರೀ ಭಗವಂತನ ಸೇವಕನಾಗಿದ್ದೇನೆ. ಯತಿಕುಲ ಬಿರುದು ಭಕ್ತರ ಒಂದು ಸಂಕೇತವಷ್ಟೇ. ನನ್ನನ್ನು ಹೊಗಳುವ ಭರದಲ್ಲಿ ಇದ್ದದ್ದನ್ನೂ ಇಲ್ಲದ್ದನ್ನೂ ಹೇಳಿ ಪ್ರಶಂಸಿಸಿದ್ದಾರೆ. ಇದ್ದದ್ದನ್ನು ಸೇವೆಗೆ ಮುಡುಪಾಗಿಸುವೆ. ಇಲ್ಲದ್ದನ್ನು ಹಾಗೂ ಹೇಳಿದ್ದನ್ನು ಪಡೆಯಲು ಪ್ರಯತ್ನಿಸುತ್ತೇನೆ. ಭಗವಂತ ಆಯುಷ್ಯ ಪ್ರಾಪ್ತಿಸಿದ ಫಲವಾಗಿ 5 ಪರ್ಯಾಯ ಸಂಪನ್ನಗೊಳಿಸುವಂತಾಯಿತು. ಸಾರ್ವಜನಿಕ ಸಮ್ಮಾನಕ್ಕಿಂತ ಭಗವದ್ಭಕ್ತರ ಪ್ರೀತಿ-ವಿಶ್ವಾಸವೇ ಪ್ರಧಾನವಾದದ್ದು. ಅದು ಚಿರಕಾಲ ಉಳಿಯುವುದು.
-ಪೇಜಾವರ ಶ್ರೀ 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.