ಶ್ರೀ ರಜಕ ಸಂಘ ಮುಂಬಯಿ 81ನೇ ವಾರ್ಷಿಕ  ಮಹಾಸಭೆ


Team Udayavani, Jul 31, 2018, 12:28 PM IST

3007mum01.jpg

ಮುಂಬಯಿ: ಎಲ್ಲಾ ಸಮಾಜಗಳ ಸಂಘ-ಸಂಸ್ಥೆಗಳಲ್ಲೂ ಎಲ್ಲಾ ಹರೆಯದ ಮತ್ತು ವಿಭಿನ್ನ ವರ್ಗದ ಜನರಿರುವಂತೆ ನಮ್ಮಲ್ಲೂ ವಿದ್ಯಾವಂತರೂ, ವಿವಿಧ ಕ್ಷೇತ್ರದ ಜನರಿದ್ದಾರೆ. ಆದರೆ ಸಂಘ-ಸಂಸ್ಥೆಗಳಲ್ಲಿ ಎಲ್ಲರಿಗೂ ಹೊಂದಿಕೊಂಡು ಹೋಗುವುದು ಸುಲಭವಲ್ಲ. ಇಂತವರ ಜೊತೆ ಸೇರಿ ಬಾಳಿದರೆನೇ ನಾವು ನಿಜವಾದ ಬುದ್ಧಿವಂತರಾಗುತ್ತೇವೆ. ಯಾಕೆಂದರೆ ವಿದ್ಯೆ ಕಲಿತರೆ ವಿದ್ಯಾವಂತರಾಗುತ್ತೇವೆ. ಎಲ್ಲಾ ಹರೆಯದ ಜನರೊಂದಿಗೆ ಬೆರೆತು ಬಾಳಿದಾಗ ಮಾತ್ರ ನಿಜವಾದ ಬುದ್ಧಿವಂತರಾಗಲು ಸಾಧ್ಯ. ವಿದ್ಯೆ ಮತ್ತು ಬುದ್ಧಿ ಒಲಿಸಿಕೊಂಡವನೇ ನಿಜವಾದ ಮಾನವ. ಅನೇಕರು  ವಿದ್ಯಾವಂತರಾಗುತ್ತಾರೆ ಆದರೆ ಸ್ವಸಮಾಜದಲ್ಲೇ ಇರಲಾರರು. ಅನೇಕ ಬಾರಿ ಬುದ್ಧಿವಂತರಲ್ಲಿ ವಿದ್ಯೆಯ ಕೊರತೆಯಿರುತ್ತದೆ. ಇಲ್ಲಿ ಇಬ್ಬರೂ ಹಿಂದುಳಿಯುವರು. ಸಮಾಜದ ಏಳ್ಗೆಗಾಗಿ  ಹಾಗೂ ಸ್ವಂತ ಏಳ್ಗೆಗಾಗಿ ವಿದ್ಯೆ ಮತ್ತು ಬುದ್ಧಿಯ ಅತ್ಯಗತ್ಯವಿದೆ. ವಿದ್ಯಾರ್ಜನೆಯಿಂದ  ವಿದ್ಯೆ ಗಳಿಸಬಹುದು, ಆದರೆ ಸಮಾಜದ ಜನತೆಯೊಂದಿಗೆ ಬೆರೆತುಕೊಂಡಾಗ ಮಾತ್ರ ಬುದ್ಧಿ ಲಭಿಸುವುದು. ಅದೂ ಶುಲ್ಕ ರಹಿತ ಜ್ಞಾನಾರ್ಜನೆ ಸಾಧ್ಯವಾಗುವುದು ಎಂದು ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್‌ ಎಸ್‌. ಸಾಲ್ಯಾನ್‌ ಅವರು ತಿಳಿಸಿದರು.

ಜು. 29 ರಂದು ಪೂರ್ವಾಹ್ನ ದಾದರ್‌ ಪೂರ್ವದ  ಕೊಹಿನೂರ್‌ ಭವನ್‌ ಸಭಾಗೃಹದಲ್ಲಿ ನಡೆದ  ರಜಕ ಸಂಘ ಮುಂಬಯಿ ಇದರ 81ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸದ್ಯದ ಯುವಪೀಳಿಗೆ ಸ್ವಸಮಾಜದ ಸಂಸ್ಥೆಗಳಲ್ಲೂ ಸಹಭಾಗಿಗಳಾಗದಿರುವುದು ದೊಡª ದುರಂತವೇ ಸರಿ. ಪೋಷಕರು ಇಲ್ಲೇನು ಸಿಗುವುದು ಎಂಬ ಉಮೇದು ಇರಿಸಿ ಬರುವುದೂ ಇದೆ. ಯಾವುದೇ ವಿಶ್ವವಿದ್ಯಾಲಯಗಳಲ್ಲೂ ಲಭ್ಯವಾಗದ ತಿಳುವಳಿಕೆ ಸಮಾಜ ಸಂಸ್ಥೆಗಳಲ್ಲಿ ಲಭಿಸುತ್ತದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ದಾಸು ಸಿ. ಸಾಲ್ಯಾನ್‌, ಜೊತೆ ಕೋಶಾಧಿಕಾರಿ ಸುಭಾಷ್‌ ಸಾಲ್ಯಾನ್‌, ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಡಿ.ಗುಜರನ್‌, ಯುವ  ವಿಭಾಗಧ್ಯಕ್ಷ ಮನೀಷ್‌ ಕುಂದರ್‌, ಡೊಂಬಿವಿಲಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಸಾಲ್ಯಾನ್‌, ನವಿ ಮುಂಬಯಿ  ಪ್ರಾದೇಶಿಕ ಸಮಿತಿಯ  ಅಧ್ಯಕ್ಷ ಜಯ ಮಡಿವಾಳ, ವಸಾಯಿ ಪ್ರಾದೇಶಿಕ ಸಮಿತಿ ಗೌರವಾಧ್ಯಕ್ಷ ಶ್ಯಾಮ ಮಡಿವಾಳ, ಅಧ್ಯಕ್ಷ ರಮೇಶ್‌ ಪಲಿಮಾರ್‌, ಪಶ್ಚಿಮ ಪ್ರಾದೇಶಿಕ ಸಮಿತಿ ಅಧ್ಯಕ್ಷ ಸುರೇಶ್‌ ಸಾಲ್ಯಾನ್‌, ಮಧ್ಯ ಪ್ರಾದೇಶಿಕ ಸಮಿತಿ ಅಧ್ಯಕ್ಷ  ರತ್ನಾಕರ್‌ ಕುಂದರ್‌ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸದಸ್ಯ ಬಂಧುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆಗಳನ್ನು ನೀಡಿದರು. ನಂತರ 2018-2020ರ ಸಾಲಿಗೆ ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆ, ಪ್ರಾದೇಶಿಕ, ಮಹಿಳಾ ವಿಭಾಗ ಮತ್ತು ಯುವ ವಿಭಾಗಗಳ ಪದಾಧಿಕಾರಿಗಳ ಆಯ್ಕೆ ಸಭೆ ನಡೆಸಿತು. ದಾಸು ಸಿ. ಸಾಲ್ಯಾನ್‌ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ಅಂತೆಯೇ ಇತರ ಪದಾಧಿಕಾರಿಗಳ ಆಯ್ಕೆಯೂ ನಡೆಸಲ್ಪಟ್ಟಿತು.

ಸಭೆಯ ಮಧ್ಯಾಂತರದಲ್ಲಿ ಸಮಾಜದ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿವಿಧ ವಿಭಾಗಗಳ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪ್ರದಾನಿಸಲಾ ಯಿತು. ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಆಚರಿಸಿದ ಎಂ. ಎಸ್‌. ಕುಂದರ್‌ ಮತ್ತು ಸುಮತಿ ಕುಂದರ್‌ ದಂಪತಿ  ಮತ್ತು ಅಂತರಾóàಯ ಮಟ್ಟದಲ್ಲಿ ಕಾಮ್‌ರೇಡ್‌ ಗೌರವಕ್ಕೆ ಪಾತ್ರರಾದ ಸತೀಶ್‌ ಗುಜರನ್‌ ಇವರಿಗೆ ಸಾಧಕ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶಶಾಂಕ್‌ ಸಾಲ್ಯಾನ್‌, ಸುಮಿತಾ ಡಿ. ಸಾಲ್ಯಾನ್‌, ಭಾಸ್ಕರ್‌ ಕುಂದರ್‌, ಸಂಜೀವ್‌ ಎಕ್ಕಾರ್‌, ಪ್ರಕಾಶ್‌ ಗುಜರನ್‌, ಕುಮಾರ್‌ ಬಂಗೇರ, ಅಂತರಿಕ ಲೆಕ್ಕ ಪರಿಶೋಧಕರಾದ ಪೂವಣಿ ಸಾಲ್ಯಾನ್‌, ಸಿಎ  ಪ್ರದೀಪ್‌ ಕುಂದರ್‌ ಮತ್ತಿತರರು ಉಪಸ್ಥಿತರಿದ್ದು ಅವರನ್ನು ಪದಾಧಿಕಾರಿಗಳು  ಪುಷ್ಪಗುತ್ಛವನ್ನಿತ್ತು ಗೌರವಿಸಿದರು.

ಡೊಂಬಿವಲಿ ಪ್ರಾದೇಶಿಕ ಮಹಿಳಾ ವಿಭಾಗದ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ನಂತರ ಅಗಲಿದ ಸದಸ್ಯರು, ಹಿತೈಷಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯದರ್ಶಿ ಸುಮಿತ್ರಾ ಆರ್‌. ಪಲಿಮಾರ್‌ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜೊತೆ ಕೋಶಾಧಿಕಾರಿ ಸಿಎ ವಿಜಯ್‌ ಕುಂದರ್‌ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಜೊತೆ ಕಾರ್ಯದರ್ಶಿ ಕಿರಣ್‌ ಕುಂದರ್‌ ವಾರ್ಷಿಕ ಚಟುವಟಿಕೆಗಳ ಮಾಹಿತಿ ಓದಿದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.