ಗೃಹರಕ್ಷಕರಿಗೆ ಇನ್ನೂ ಬಾರದ ವೇತನ!
Team Udayavani, Aug 2, 2018, 10:14 AM IST
ಉಡುಪಿ: ಪೊಲೀಸರ ಅನಂತರ ರಕ್ಷಣೆಯ ವ್ಯವಸ್ಥೆ ನೋಡಿಕೊಳ್ಳುವವರು ಗೃಹ ರಕ್ಷಕರು. ಆದರೆ ಇವರು ವೇತನವೇ ಬಾರದೆ ಪರದಾಟ ನಡೆಸುವಂತಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ನಡೆದ ಚುನಾವಣೆಯ ಭತ್ತೆ, ಮೇ, ಜೂನ್, ಜುಲೈ ತಿಂಗಳ ವೇತನ ಬಂದಿಲ್ಲ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ, ಜೂನ್, ಜುಲೈ ತಿಂಗಳ ವೇತನ ಬಂದಿಲ್ಲ. ದ.ಕ. ಗ್ರಾಮಾಂತರದಲ್ಲಿ ಜೂನ್, ಜುಲೈ ವೇತನ ಬಂದಿಲ್ಲ.
ದಿನಕ್ಕೆ 380 ರೂ. ಪಗಾರ
ಗೃಹರಕ್ಷಕರಿಗೆ ದಿನಕ್ಕೆ 380 ರೂ. ಪಗಾರ ಸಿಗುತ್ತದೆ. ಗೃಹರಕ್ಷಕರು ಸಾಮಾನ್ಯವಾಗಿ ಪೊಲೀಸ್, ಅಬಕಾರಿ, ಆರ್‌ಟಿಒ, ಅಗ್ನಿಶಾಮಕ ದಳ, ಪ್ರವಾಸೋದ್ಯಮ, ಗಣಿ ಇಲಾಖೆ ಹೀಗೆ ವಿವಿಧೆಡೆ ನಿಯೋಜನೆ ಗೊಂಡಿರುತ್ತಾರೆ. ಚುನಾವಣೆ ಹೊತ್ತಿಗೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ತಮಗೆ ಇಷ್ಟು ಗೃಹ ರಕ್ಷಕರು ಬೇಕೆಂದು ಬೇಡಿಕೆ ಮಂಡಿಸುತ್ತಾರೆ. ಕಮಾಂಡೆಂಟರು ಗೃಹರಕ್ಷಕದಳದವರ ಮನೆಗೆ ಹೋಗಿ, ಒತ್ತಾಯ ಮಾಡಿ ಒಂದಿಷ್ಟು ಜನರನ್ನು ಒಲಿಸಿ ಚುನಾವಣಾ ಕರ್ತವ್ಯಕ್ಕೆ ಕಳುಹಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಉಡುಪಿಯಲ್ಲಿ 325 ಗೃಹರಕ್ಷಕರು, ದ.ಕ. ಜಿಲ್ಲೆಯಲ್ಲಿ ಸುಮಾರು 800 ಗೃಹರಕ್ಷಕರನ್ನು ನಿಯೋಜಿಸಲಾಗಿತ್ತು.
ಚುನಾವಣೆ ಭತ್ತೆ ನೀಡಿಲ್ಲ
ಉಡುಪಿ ಜಿಲ್ಲೆಯ ಗೃಹರಕ್ಷಕರಿಗೆ ಚುನಾ ವಣೆ ಭತ್ತೆ ನೀಡಿಲ್ಲ. ಜತೆಗೆ ಮೇ, ಜೂನ್, ಜುಲೈ ತಿಂಗಳ ವೇತನ ಬಂದಿಲ್ಲ. ದ.ಕ. ಜಿಲ್ಲೆಯಲ್ಲಿ ಚುನಾವಣಾ ಭತ್ತೆ ಬಂದಿದೆ. ಇನ್ನು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ, ಜೂನ್, ಜುಲೈ ವೇತನ ಬಂದಿಲ್ಲ ದ.ಕ. ಎಸ್‌ಪಿ ವ್ಯಾಪ್ತಿಯಲ್ಲಿ ಜೂನ್, ಜುಲೈ ವೇತನ ಬಂದಿಲ್ಲ. ಜುಲೈನ ವೇತನ ವಾದರೂ ಮುಂದಿನ ತಿಂಗಳ 10ನೆಯ ತಾರೀಕಿನವರೆಗೆ ಅವಕಾಶವಿದೆ. ಬಜೆಟ್ ಅನುದಾನ ಕೊರತೆಯಿಂದ ಹೀಗಾಗಿದೆ ಎನ್ನಲಾಗುತ್ತಿದೆ.
ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳಲ್ಲಿ ಮಾತನಾಡಿದ್ದೇವೆ. 10 ದಿನಗಳೊಳಗೆ ಪಾವತಿಯಾಗುವ ಸಾಧ್ಯತೆ ಇದೆ. ಈ ಸಮಸ್ಯೆ ಹೆಚ್ಚು ದಿನ ಮುಂದುವರಿಯಲ್ಲ ಎಂಬ ವಿಶ್ವಾಸವಿದೆ.
– ಡಾ| ಮುರಳೀ ಮೋಹನ್,
– ಡಾ| ಪ್ರಶಾಂತ್ ಶೆಟ್ಟಿ ಉಭಯ ಜಿಲ್ಲಾ ಕಮಾಂಡೆಂಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.