ಪೈಲಟ್‌ಗಳಿಗೆ ಅನಾರೋಗ್ಯ: ದುಬಾೖ ವಿಮಾನ 15 ತಾಸು ವಿಳಂಬ!


Team Udayavani, Aug 2, 2018, 10:47 AM IST

dubai-flight.png

ಮಂಗಳೂರು: ದುಬಾೖಗೆ ತೆರಳಬೇಕಿದ್ದ ಸ್ಪೆ „ಸ್‌ ಜೆಟ್‌ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಬರೋಬ್ಬರಿ 15 ತಾಸು ವಿಳಂಬವಾಗಿ ಪ್ರಯಾಣ ಆರಂಭಿಸಿದೆ. 

ಇದಕ್ಕೆ ಕಾರಣವಾಗಿದ್ದು ತಾಂತ್ರಿಕ ದೋಷವಲ್ಲ, ಬದಲಿಗೆ ಇಬ್ಬರೂ ಪೈಲಟ್‌ಗಳ ಅನಾರೋಗ್ಯ. 180 ಪ್ರಯಾಣಿಕರಿದ್ದ ಸ್ಪೈಸ್‌ ಜೆಟ್‌ ಬೋಯಿಂಗ್‌ ವಿಮಾನ (ಎಸ್‌ಜಿ 59) ಮಂಗಳವಾರ ರಾತ್ರಿ 12.45ಕ್ಕೆ ಮಂಗಳೂರಿಂದ ನಿರ್ಗಮಿಸಬೇಕಿತ್ತು. ಬೋರ್ಡಿಂಗ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಪೈಲಟ್‌ಗೆ ಮಲೇರಿಯಾ ಜ್ವರ ಪತ್ತೆಯಾಗಿದ್ದು, ಹಾರಾಟರದ್ದುಗೊಳಿಸಿ ರಾತ್ರಿ 2 ಗಂಟೆಗೆ ಪ್ರಯಾಣಿಕರನ್ನು ಹೊಟೇಲ್‌ಗೆ ಕರೆತರಲಾಗಿತ್ತು. ಬಳಿಕ  ಬುಧವಾರ ಬೆಳಗ್ಗೆ 7.30ಕ್ಕೆ ಮರು ಪ್ರಯಾಣಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ವಿಚಿತ್ರ ಅಂದರೆ, ಮಾರನೇ ದಿನ ಬೋರ್ಡಿಂಗ್‌ ವೇಳೆ ಬಂದಿದ್ದ ಮುಖ್ಯ ಪೈಲಟ್‌ಗೂ ಅನಾರೋಗ್ಯವಾಗಿದೆ. ಈ ಮಧ್ಯೆ ಕೆಲ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸುಮಾರು 20 ಮಂದಿ ಟಿಕೆಟ್‌ ರದ್ದುಪಡಿಸಿ ಬೇರೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಕೊನೆಗೆ ಬುಧವಾರ ಸಂಜೆ ವಿಮಾನ ದುಬಾೖಗೆ ತೆರಳಿದೆ. 

ಇಬ್ಬರು ಪೈಲಟ್‌ಗಳಿಗೂ ಅನಾರೋಗ್ಯ ಹೇಗೆ? 
ಸಾಮಾನ್ಯವಾಗಿ ಬೋರ್ಡಿಂಗ್‌ಗೆ 
1 ತಾಸು ಮೊದಲು ಪೈಲಟ್‌ಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅನಾರೋಗ್ಯ ಕಂಡು ಬಂದರೆ ವಿಮಾನ ಚಲಾಯಿಸಲು ಅನುಮತಿ ನೀಡಲಾಗುವುದಿಲ್ಲ. ಮದ್ಯಪಾನ ಸಂಶಯ ಇದ್ದರೂ ಅನುಮತಿ ನೀಡಲಾಗುವುದಿಲ್ಲ. ಇನ್ನು  ಪೈಲಟ್‌ಗಳು ತಾವಾಗಿಯೇ ಅನಾರೋಗ್ಯ ಇರುವುದಾಗಿ ಹೇಳಿ ಹಿಂದೆ ಸರಿದರೇ ಅಥವಾ ತಪಾಸಣೆ ವೇಳೆ ಫಿಟ್‌ ಇಲ್ಲ ಎಂದು ವೈದ್ಯಕೀಯ ವರದಿ ಹೇಳಿತೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ನಾವೆಲ್ಲ ಮಂಗಳವಾರ ರಾತ್ರಿ ದುಬಾೖ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಬೋರ್ಡಿಂಗ್‌ ಆಗಬೇಕೆನ್ನುವಷ್ಟರಲ್ಲಿ ಪೈಲಟ್‌ ಅನಾರೋಗ್ಯದಿಂದ ಮರುದಿನ ಪ್ರಯಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಮತ್ತೆ ಬಂದ ಪೈಲಟ್‌ಗೂ ಫಿಟ್‌ನೆಸ್‌ ಕ್ಲಿಯರ್‌ ಆಗಿಲ್ಲ ಎಂದು ಮತ್ತೆ ಹೊಟೇಲ್‌ಗೆ ಕರೆತಂದರು. ಮಹಿಳೆಯೊಬ್ಬರಿಗೆ ಬುಧವಾರ ಬೆಳಗ್ಗೆ 10 ಗಂಟೆಗೆ ದುಬಾೖನಲ್ಲಿ ತುರ್ತಾಗಿ ವೈದ್ಯರ ಭೇಟಿ ಮಾಡಬೇಕಿತ್ತು. ಹಲವರು ನಿಗದಿತ ಸಮಯಕ್ಕೆ ತಲುಪಲಾಗದ ಆತಂಕದಲ್ಲಿದ್ದರು.
– ಭಟ್ಕಳ ಮೂಲದ ಓರ್ವ ಪ್ರಯಾಣಿಕ

ಮಂಗಳೂರು-ದುಬಾೖ ವಿಮಾನ ಹಾರಾಟ ರದ್ದುಗೊಂಡು ಪ್ರಯಾಣಿಕರಿಗೆ ತೊಂದರೆಯಾಗಿರುವುದು ನಿಜ. ಬಳಿಕ ಎಲ್ಲ ರೀತಿಯ ಪರ್ಯಾಯ ವ್ಯವಸ್ಥೆ ಮಾಡಿ ಬುಧವಾರ ಸಂಜೆ 5 ಗಂಟೆಗೆ ದುಬಾೖ ವಿಮಾನ ನಿರ್ಗಮಿಸಿದೆ. ಪೈಲಟ್‌ಗಳ ಅನಾರೋಗ್ಯ ಅಚ್ಚರಿ ಮೂಡಿಸಿದೆ. ಈ ವಿಮಾನ ಟರ್ಕಿಯ ಕೊರಿಯಂಡನ್‌ ಏರ್‌ಲೈನ್ಸ್‌ಗೆ ಸೇರಿದ್ದು, ಅದರ ಪೈಲಟ್‌ ಹಾಗೂ ಸಿಬಂದಿಯನ್ನು ಅದೇ ಕಂಪನಿ ನಿಯೋಜಿಸುತ್ತದೆ. ಇದಕ್ಕಾಗಿ ಬದಲಿ ಪೈಲಟ್‌ ಬರುವವರೆಗೆ ಕಾಯಬೇಕಾಯ್ತು.
– ಆನಂದ್‌, ಸ್ಪೈಸ್‌ ಜೆಟ್‌ನ ಮಾಧ್ಯಮ ವಿಭಾಗ

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.