ಸಂಕಷ್ಟ ನಿವಾರಿಸಿದ ಗಣಪ!


Team Udayavani, Aug 2, 2018, 11:50 AM IST

likith-shetty-2.jpg

ಲಿಖಿತ್‌ ಶೆಟ್ಟಿ ಹ್ಯಾಪಿಯಾಗಿದ್ದಾರೆ. ಅವರಷ್ಟೇ ಅಲ್ಲ, ಇಡೀ ಚಿತ್ರತಂಡವೇ ಖುಷಿಯಲ್ಲಿದೆ. ಕಾರಣ, ಅವರ “ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆ. ಹೌದು, ಚಿತ್ರದ ಬಗ್ಗೆ ಎಲ್ಲೆಡೆಯಿಂದಲೂ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು. ಈಗ ದಿನ ಕಳೆದಂತೆ ಗಳಿಕೆಯೂ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ತೆಲುಗಿಗೆ ರಿಮೇಕ್‌ ರೈಟ್ಸ್‌ ಮಾರಾಟವಾಗಿದೆ.

ಒಂದು ಹೊಸ ತಂಡಕ್ಕೆ ಇನ್ನೇನು ಬೇಕು? ತಮ್ಮ “ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕುರಿತು ಮಾತನಾಡುವ ಲಿಖಿತ್‌ ಶೆಟ್ಟಿ, “ಚಿತ್ರ ಬಿಡುಗಡೆಯಾಗಿದ್ದು ಸುಮಾರು 70 ಚಿತ್ರಮಂದಿರಗಳಲ್ಲಿ. ಈ ವಾರದಿಂದ ಇನ್ನೂ 10 ಚಿತ್ರಮಂದಿರಗಳ ಸಂಖ್ಯೆ ಹೆಚ್ಚುತ್ತಿದೆ. ಸ್ವತಃ ವಿತರಕರೇ, ಚಿತ್ರದ ಗಳಿಕೆ ಏರಿಕೆದ ಹಿನ್ನೆಲೆಯಲ್ಲಿ, ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಾಗಿ, ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ.

ಒಂದು ಒಳ್ಳೆಯ ಚಿತ್ರವನ್ನು ಕನ್ನಡಿಗರು ಖಂಡಿತ ಕೈ ಬಿಡುವುದಿಲ್ಲ ಎಂಬುದಕ್ಕೆ ನಮ್ಮ “ಸಂಕಷ್ಟಕರ ಗಣಪತಿ’ ಸಾಕ್ಷಿ’ ಎನ್ನುತ್ತಾರೆ ಲಿಖಿತ್‌ ಶೆಟ್ಟಿ. “ಆರಂಭದಿಂದಲೂ ಚಿತ್ರದ ಗಳಿಕೆ ಕಡಿಮೆಯಾಗಿಲ್ಲ. ಶೇ.80 ರಷ್ಟು ಕಲೆಕ್ಷನ್‌ ಆಗಿದ್ದು, ಅದು ಇನ್ನಷ್ಟು ಹೆಚ್ಚುತ್ತಿದೆ. ಇನ್ನು, ಚಿತ್ರಕ್ಕೆ ಡಿಐ ಕೆಲಸ ನಡೆಯುತ್ತಿರುವಾಗಲೇ, ಒಳ್ಳೆಯ ರಿಪೋರ್ಟ್‌ ಬಂದಿತ್ತು.

ಅದನ್ನು ಕೇಳಿದ ಪರಭಾಷೆಯ ಕೆಲವರು ಚಿತ್ರದ ರಿಮೇಕ್‌ ರೈಟ್ಸ್‌ ಕೇಳಿದ್ದರು. ಆದರೆ, ನಾವು ಚಿತ್ರ ಬಿಡುಗಡೆ ನಂತರ ಮಾತಾಡುವುದಾಗಿ ಹೇಳಿದ್ದೆವು. ಅದರಂತೆ, ಮೊದಲ ದಿನದ ಪ್ರತಿಕ್ರಿಯೆ ತಿಳಿದುಕೊಂಡ ತೆಲುಗಿನ ವಿಜಯ್‌ ಎಂಬುವವರು, ಚಿತ್ರದ ರಿಮೇಕ್‌ ಮತ್ತು ಡಬ್ಬಿಂಗ್‌ ರೈಟ್ಸ್‌ ಎರಡನ್ನೂ ಖರೀದಿಸಿದ್ದಾರೆ. ತೆಲುಗಿನಲ್ಲಿ ಸ್ಟಾರ್‌ ನಟರೊಬ್ಬರಿಗೆ ಚಿತ್ರ ತೋರಿಸಿ, ಅಲ್ಲಿ ನಿರ್ಮಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ ಲಿಖಿತ್‌.

ಚಿತ್ರ ನೋಡಿದ ಬಹುತೇಕರು ತಮ್ಮ ನಟನೆ ಬಗ್ಗೆ ಮಾತಾನಾಡುತ್ತಿದ್ದಾರೆ ಎನ್ನುವ ಲಿಖಿತ್‌, “ನನ್ನ ಎಡಗೈ ಆ್ಯಕ್ಷನ್‌ ಹಾಗೂ ಬಾಡಿ ಲಾಂಗ್ವೇಜ್‌ ಸರಿಯಾಗಿ ಹೊಂದಾಣಿಕೆಯಾಗಿದೆ ಎಂಬ ಮೆಚ್ಚುಗೆ ಸೂಚಿಸಿದ್ದಾರೆ. ನಮ್ಮ ಚಿತ್ರತಂಡ ಕೂಡ ಎಲ್ಲೆಡೆ ಭೇಟಿ ಕೊಡುತ್ತಿದೆ. ನಮ್ಮೊಂದಿಗೆ ಶ್ರುತಿ ಗೊರಾಡಿಯಾ, ಅಚ್ಯುತ್‌ ಕುಮಾರ್‌, ಮಂಜುನಾಥ ಹೆಗಡೆ, ನಾಗಭೂಷಣ್‌ ಅವರುಗಳು ಸಹ ಚಿತ್ರದ ಪ್ರಚಾರಕ್ಕೆ ಬಂದು ಸಹಕರಿಸುತ್ತಿದ್ದಾರೆ.

ಒಂದು ಹೊಸ ತಂಡದ ಶ್ರಮಕ್ಕೆ ಸಿಕ್ಕ ಪ್ರತಿಫ‌ಲವಿದು. ಇನ್ನೊಂದು ಖುಷಿಯ ಮತ್ತು ತಮಾಷೆಯ ವಿಷಯವೆಂದರೆ, ಚಿತ್ರಮಂದಿರಕ್ಕೆ ಹೋದಲೆಲ್ಲಾ, ಪ್ರೇಕ್ಷಕರು ನನ್ನ ಎಡಗೈ ಹಿಡಿದುಕೊಂಡೇ ಫೋಟೋ, ಸೆಲ್ಫಿà ತೆಗೆಸಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಎಡಗೈ ಗುರುತಿಸಿಕೊಂಡಿದೆ’ ಎನ್ನುತ್ತಾರೆ ಲಿಖಿತ್‌. “ಈ ಚಿತ್ರದ ನಂತರ ಒಂದಷ್ಟು ಹೊಸ ಚಿತ್ರಗಳು ಹುಡುಕಿ ಬರುತ್ತಿವೆ.

ಯಾವುದನ್ನೂ ನಾನು ಅಂತಿಮಗೊಳಿಸಿಲ್ಲ. ಮೊದಲು ಈ ಚಿತ್ರ ಒಂದು ದಡ ಸೇರಬೇಕು. ಈಗಷ್ಟೇ, ಒಂದು ಜಯದ ಹಾದಿ ನೋಡುತ್ತಿದ್ದೇನೆ. ಮುಂದೆ ಚಿತ್ರ ಇನ್ನಷ್ಟು ಗೆಲುವು ಕೊಡುತ್ತೆ ಎಂಬ ವಿಶ್ವಾಸ ನನಗಿದೆ ಎನ್ನುತ್ತಾರೆ ಲಿಖಿತ್‌ ಶೆಟ್ಟಿ. ಈ ಚಿತ್ರನವನ್ನು ಅರ್ಜುನ್‌ ಕುಮಾರ್‌ ನಿರ್ದೇಶಿಸಿದ್ದಾರೆ. ರಾಜೇಶ್‌ ಬಾಬು, ಫೈಜಾನ್‌ ಖಾನ್‌ ಅವರ ನಿರ್ಮಾಣವಿದೆ. ಮುಂದಿನ ವಾರ ಅಮೇರಿಕ ಮತ್ತು ಆಸ್ಟ್ರೇಲಿಯಾದಲ್ಲೂ ಚಿತ್ರ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.