ದೊಡ್ಡ ಸೋಲನುಭವಿಸಿದ ಸೆರೆನಾ ವಿಲಿಯಮ್ಸ್
Team Udayavani, Aug 2, 2018, 12:17 PM IST
ಸ್ಯಾನ್ ಜೋಸ್ : ವಿಶ್ವ ಟೆನಿಸಿನ ದೈತ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಮ್ಮ ಟೆನಿಸ್ ಬಾಳ್ವೆಯಲ್ಲೇ ದೊಡ್ಡ ಸೋಲನುಭವಿಸಿದ್ದಾರೆ. ಸ್ಯಾನ್ ಜೋಸ್ ಡಬ್ಲ್ಯುಟಿಎ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲೇ ಅವರನ್ನು ಬ್ರಿಟನ್ನಿನ ಜೊಹಾನ್ನಾ ಕೊಂಟಾ 6-1, 6-0 ಅಂತರದಿಂದ ಮಣಿಸಿದರು.
ಈ ಪಂದ್ಯದ ವೇಳೆ ಸೆರೆನಾ ಸತತವಾಗಿ ಕೊನೆಯ 12 ಗೇಮ್ಸ್ ಕಳೆದುಕೊಂಡರು. ಇಡೀ ಪಂದ್ಯದಲ್ಲಿ ಅವರಿಗೆ ಗಳಿಸಲು ಸಾಧ್ಯವಾದದ್ದು ಒಂದು ಅಂಕ ಮಾತ್ರ. ಈ ಲೆಕ್ಕಾಚಾರದಲ್ಲಿ ಇದು ಸೆರೆನಾ ಅನುಭವಿಸಿದ ದೊಡ್ಡ ಸೋಲಾಗಿ ದಾಖಲಾಗಿದೆ. ಕೊಂಟಾ ಕೇವಲ 51 ನಿಮಿಷಗಳಲ್ಲಿ 23 ಗ್ರ್ಯಾನ್ಸ್ಲಾಮ್ ವಿಜೇತೆಗೆ ಆಘಾತವಿಕ್ಕಿದರು. ಅವರ ಮುಂದಿನ ಸುತ್ತಿನ ಎದುರಾಳಿ ಅಮೆರಿಕದ ಸೋಫಿಯಾ ಕೆನಿನ್.
“ನನ್ನ ತಲೆಯಲ್ಲಿ ಅದೆಷ್ಟೋ ಸಂಗತಿಗಳು ತುಂಬಿವೆ. ಹೀಗಾಗಿ ಈ ಆಘಾತದ ಬಗ್ಗೆ ಚಿಂತಿಸಲಿಕ್ಕೂ ನನಗೆ ಸಮಯವಿಲ್ಲ. ಒಂದಂತೂ ಸತ್ಯ, ನಾನು ಬಹಳ ಕಳಪೆ ಆಟವಾಡಿದೆ…’ ಎಂದು ಸೆರೆನಾ ಸೋಲಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.ಸೆರೆನಾ ಈ ಪಂದ್ಯಾವಳಿಯಲ್ಲಿ 3 ಸಲ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ (2011, 2012 ಮತ್ತು 2014). ಕೊಂಟಾ 2016ರಲ್ಲಿ ವೀನಸ್ ವಿಲಿಯಮ್ಸ್ಗೆ ಸೋಲುಣಿಸಿ ಪ್ರಶಸ್ತಿ ಎತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.