ಕಾಯಿಲೆಯೇ ಈ ಸಿನಿಮಾದ ಜೀವಾಳ
Team Udayavani, Aug 3, 2018, 6:00 AM IST
ಪ್ರೇಕ್ಷಕರನ್ನು ಸಿನಿಮಾದುದ್ದಕ್ಕೂ ಕನ್‌ಫ್ಯೂಸ್ ಮಾಡಿ, ಕೊನೆಗೆ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲವನ್ನು ಹೇಳಿಬಿಡುವ ಸಾಕಷ್ಟು ಸಿನಿಮಾಗಳು ಬರುತ್ತವೆ. ಕನ್‌ಫ್ಯೂಶನ್‌ನಲ್ಲೇ ಸಿನಿಮಾವನ್ನು ಕಟ್ಟಿಕೊಟ್ಟರೆ ತಮಗೆ ಬುದ್ಧಿವಂತ ನಿರ್ದೇಶಕ ಎಂಬ ಪಟ್ಟ ಸಿಗುತ್ತದೆ ಎಂಬ ಭ್ರಮಯಲ್ಲಿ ಕೆಲವು ನಿರ್ದೇಶಕರಿದ್ದಾರೆ ಎಂದರೆ ತಪ್ಪಲ್ಲ. ಅದೇ ಕಾರಣದಿಂದ ಸಿನಿಮಾವನ್ನು ಗೊಂದಲಮಯವಾಗಿ ಕಟ್ಟಿಕೊಡುತ್ತಾರೆ. ಈಗ “ಮನೋರಥ’ ಎಂಬ ಸಿನಿಮಾವೊಂದು ಇದೇ ಸಾಲಿನಲ್ಲಿ ನಿಂತಂತಿದೆ. ಅದಕ್ಕೆ ಕಾರಣ ಇದು ಕೂಡಾ ಪ್ರೇಕ್ಷಕರನ್ನು ಕನ್‌ಫ್ಯೂಸ್ ಮಾಡುವ ಸ್ಕ್ರಿಪ್ಟ್. ಈ ಚಿತ್ರಕ್ಕೆ “ಒನ್ಸ್ ಅಗೇನ್ ಬುದ್ಧಿವಂತರಿಗೆ ಮಾತ್ರ’ ಎಂಬ ಟ್ಯಾಗ್‌ಲೈನ್ ಇದೆ. ಪ್ರಸನ್ನ ಕುಮಾರ್ ಈ ಸಿನಿಮಾದ ನಿರ್ದೇಶಕರು. ನಿರ್ಮಾಣ ಕೂಡಾ ಇವರದೇ. ಇವರಿಗಿದು ಮೊದಲ ಸಿನಿಮಾ.
ಚಿತ್ರದಲ್ಲಿ ಮಾನಸಿಕ ಅಸಮತೋಲನ ಇರುವ ವ್ಯಕ್ತಿಯ ಮನಸ್ಥಿತಿಯನ್ನು ತೋರಿಸಲಾಗಿದೆಯಂತೆ. ಜೊತೆಗೆ ಆತನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದನ್ನು ಹೇಳಿದ್ದಾರಂತೆ. “ಚಿತ್ರದಲ್ಲಿ ಕಾಯಿಲೆಯೊಂದಕ್ಕೆ ತುತ್ತಾಗಿರುವ ವ್ಯಕ್ತಿಯನ್ನು ಜನ, ಸಂಬಂಧಿಕರು ಹೇಗೆ ನೋಡುತ್ತಾರೆ ಮತ್ತು ತನ್ನ ಮಗನನ್ನು ನಿಭಾಹಿಸಲು ತಾಯಿ ಎಷ್ಟು ಕಷ್ಟಪಡುತ್ತಾಳೆ ಎಂಬ ಅಂಶವನ್ನು ಹೇಳಿದ್ದೇನೆ. ಇಲ್ಲಿ ಎರಡು ಕಥೆಯನ್ನು ನೋಡಬಹುದು. ಪ್ರೇಕ್ಷಕರು ಆರಂಭದಿಂದ ಕೊನೆವರೆಗೆ ಪ್ರತಿ ದೃಶ್ಯಗಳನ್ನು ಗಮನವಿಟ್ಟು ನೋಡಿದರೆ ಮಾತ್ರ ಇಡೀ ಸಿನಮಾ ಅರ್ಥವಾಗುತ್ತದೆ. ಏಕೆಂದರೆ ಸಿನಿಮಾ ಕನ್‌ಫ್ಯೂಶನ್‌ನಲ್ಲಿ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು. ಎಲ್ಲಾ ಓಕೆ, ಚಿತ್ರದಲ್ಲಿ ನಾಯಕನಿಗಿರುವ ಕಾಯಿಲೆ ಏನೆಂದರೆ ಅದು ಸಸ್ಪೆನ್ಸ್ ಎಂಬ ಉತ್ತರ ನಿರ್ದೇಶಕರಿಂದ ಬರುತ್ತದೆ. “ಆ ಕಾಯಿಲೆ ಬಗ್ಗೆ ಹೇಳಿದರೆ ಇಡೀ ಸಿನಿಮಾದ ಕಥೆ ಗೊತ್ತಾಗುತ್ತದೆ’ ಎನ್ನುವುದು ನಿರ್ದೇಶಕರ ಮಾತು.
ಚಿತ್ರದಲ್ಲಿ ರಾಜ್ ಚರಣ್ ನಾಯಕರಾಗಿ ನಟಿಸಿದ್ದಾರೆ. ಅವರಿಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. “ತುಂಬಾ ರಿಸ್ಕ್ ಹಾಕಿ ಮಾಡಿರುವ ಸಿನಿಮಾ. ಸಿನಿಮಾದುದ್ದಕ್ಕೂ ನನ್ನ ಪಾತ್ರ ವಿಚಿತ್ರವಾಗಿಯೇ ಸಾಗಿ ಬರುತ್ತದೆ. ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗುವ ವಿಶ್ವಾಸವಿದೆ’ ಎಂದರು ರಾಜ್ ಚರಣ್. ಅಂಜಲಿ ಈ ಚಿತ್ರದ ನಾಯಕಿ. ಅವರಿಗೂ ಇಲ್ಲಿ ಎರಡು ಶೇಡ್ ಇರುವ ಪಾತ್ರ ಸಿಕ್ಕಿದೆಯಂತೆ. ಚಿತ್ರದಲ್ಲಿ ಧಮಯಂತಿ ನಾಯಕನ ತಾಯಿಯಾಗಿ ಹಾಗೂ ರೇಣು ಅಕ್ಕನಾಗಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಗೋಲ್ಡನ್ ಕಂಫೋಸರ್’ ಎಂದು ಬಿರುದು ಪಡೆದಿರುವ ಚಂದ್ರು ಓಬಯ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Lawyer Jagadish: ಮತ್ತೆ ಬಿಗ್ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಎಂಟ್ರಿ..!
Bengaluru: 54 ಎಂಜಿನಿಯರಿಂಗ್ ಸೀಟ್ ಬ್ಲಾಕ್: ಕೆಇಎ ಶಂಕೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.