ಅಂತಿಮ ಮೀಸಲಾತಿ ಅಧಿಸೂಚನೆ ಪ್ರಕಟ
Team Udayavani, Aug 3, 2018, 6:00 AM IST
ಕುಂದಾಪುರ: ಇದೇ ತಿಂಗಳ ಕೊನೆಯಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಆ. 29 ರಂದು ನಡೆಯುವ ಚುನಾವಣೆಗೆ ಕುಂದಾಪುರ ಪುರಸಭೆಯ ವಾರ್ಡುವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟಗೊಂಡಿದೆ.
ಪುರಸಭೆ ವ್ಯಾಪ್ತಿಯಲ್ಲಿರುವ 23 ವಾರ್ಡ್‌ಗಳ ಪೈಕಿ 7 ಸಾಮಾನ್ಯ, 6 ಸಾಮಾನ್ಯ ಮಹಿಳೆ, 3 ಹಿಂದುಳಿದ ವರ್ಗ
(ಎ) ಮಹಿಳೆ, 1 ಹಿಂದುಳಿದ ವರ್ಗ (ಬಿ) ಮಹಿಳೆ, 3 ಹಿಂದುಳಿದ ವರ್ಗ (ಎ), 1 ಹಿಂದುಳಿದ ವರ್ಗ (ಬಿ), 1 ಪರಿಶಿಷ್ಟ ಪಂಗಡ ಹಾಗೂ 1 ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಲಾಗಿದೆ.
ಮಹಿಳೆಯರಿಗಿಲ್ಲ ಶೇ. 50 ಮೀಸಲಾತಿ
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಪ್ರಾತಿನಿಧ್ಯ ನೀಡಬೇಕು ಎನ್ನುವ ನಿಯಮ ಇಲ್ಲಿಗೆ ಮಾತ್ರ ಅನ್ವಯ ಆಗಿಲ್ಲ. ಇದಕ್ಕೂ ಮೊದಲು ಪ್ರಕಟವಾದ ವಾರ್ಡುವಾರು ಮೀಸಲಾತಿ ಪಟ್ಟಿಯಲ್ಲಿಯೂ 23 ವಾರ್ಡುಗಳ ಪೈಕಿ ಮಹಿಳೆಯರಿಗೆ ಕೇವಲ 10 ಸ್ಥಾನಗಳಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಅಂತಿಮ ಮೀಸಲಾತಿ ಪಟ್ಟಿಯಲ್ಲಿಯೂ 10 ಸ್ಥಾನಗಳನ್ನೂ ಮಾತ್ರ ನೀಡಲಾಗಿದೆ.
ಅದಲು – ಬದಲು
ಮೇ 25 ರಂದು ಮೊದಲು ಪ್ರಕಟಗೊಂಡ ಮೀಸಲಾತಿ ಪಟ್ಟಿಗೆ ಕೆಲವರು ಆಕ್ಷೇಪಣೆ ಸಲ್ಲಿಸಿದ ಕಾರಣ ಈಗ ಕೆಲವೊಂದನ್ನು ಬದಲಾಯಿಸ ಲಾಗಿದೆ. ಹಿಂದುಳಿದ ವರ್ಗ (ಎ) ಮಹಿಳೆಯಿದ್ದ ಫೆರ್ರಿ ವಾರ್ಡ್‌ಗೆ ಈ ಬಾರಿ ಹಿಂದುಳಿದ ವರ್ಗ (ಎ), ಸಾಮಾನ್ಯ ಮಹಿಳೆ ಇದ್ದ ಚಿಕನ್‌ಸಾಲ್(ಎಡಬದಿ) ವಾರ್ಡ್‌ಗೆ ಹಿಂದುಳಿದ (ಬಿ) ವರ್ಗಕ್ಕೆ, ಹಿಂದುಳಿದ ವರ್ಗ (ಬಿ) ಇದ್ದ ಮೀನು ಮಾರ್ಕೇಟ್ ವಾರ್ಡ್‌ಗೆ ಈಗ ಸಾಮಾನ್ಯ ನೀಡಲಾಗಿದೆ. ಸಾಮಾನ್ಯವಿದ್ದ ಕೋಡಿ ಉತ್ತರಕ್ಕೆ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿಯಿದ್ದ ಟಿ.ಟಿ. ವಾರ್ಡ್‌ಗೆ ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ (ಎ) ಇದ್ದ ನಾನಾ ಸಾಹೇಬ್ ವಾರ್ಡ್‌ಗೆ ಹಿಂದುಳಿದ ವರ್ಗ (ಎ) ಮಹಿಳೆ, ಸಾಮಾನ್ಯ ಮಹಿಳೆಯಿದ್ದ ಜೆಎಲ್‌ಬಿಗೆ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ ಇದ್ದ ಹುಂಚಾರುಬೆಟ್ಟು ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ.
ಕಾರ್ಕಳ ಪುರಸಭೆ
ಕಾರ್ಕಳ: ಕಾರ್ಕಳ ಪುರ ಸಭೆಯ ವಾರ್ಡುವಾರು ಮೀಸಲಾತಿ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 23 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ.
ಈ ಹಿಂದೆ ಗೊಂದಲಕ್ಕೊಳಗಾಗಿದ್ದ ಪೆರ್ವಾಜೆ ಸದ್ಭಾವನ ನಗರದಲ್ಲಿ ಸಾಮಾನ್ಯ ಬದಲಾಗಿ ಅಂತಿಮ ಪಟ್ಟಿಯಲ್ಲಿ ಸಾಮಾನ್ಯ ಮಹಿಳೆಗೆ ಅವಕಾಶ ನೀಡಲಾಗಿದೆ. ಗಾಂಧಿ ಮೈದಾನ ಅತ್ತೂರು ವಾರ್ಡ್‌ನಲ್ಲಿ ಸಾಮಾನ್ಯ ತೆಗೆದು ಸಾಮಾನ್ಯ ಮಹಿಳೆಗೆ ಹಾಗೂ ತಾಲೂಕು ಕಚೇರಿ-ಕಾಬೆಟ್ಟು ವಾರ್ಡ್‌ನಲ್ಲಿ ಸಾಮಾನ್ಯ ಮಹಿಳೆ ತೆಗೆದು ಸಾಮಾನ್ಯ ನೀಡಲಾಗಿದೆ.
ಆದರೆ ವರ್ಣಬೆಟ್ಟು- ಗೊಮ್ಮಟಬೆಟ್ಟು ವಾರ್ಡ್‌ನಲ್ಲಿ ಈ ಹಿಂದಿದ್ದ ಪಟ್ಟಿಯಲ್ಲಿದ್ದಂತೆ ಮೂರನೇ ಬಾರಿಗೆ ಸಾಮಾನ್ಯ ಮೀಸಲಾತಿ ಮುಂದುವರಿದಿದೆ. ಐದು ವರ್ಷಕೊಮ್ಮೆ ಬದಲಾಗಬೇಕೆನ್ನುವ ನಿಯಮವಿದ್ದರೂ ವರ್ಣಬೆಟ್ಟು-ಗೋಮಟಬೆಟ್ಟು ವಾರ್ಡ್‌ನಲ್ಲಿ ಬದಲಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.