ವಯಸ್ಸಿನ ಕಥೆ: ಅಂಬಿ ವರ್ಸಸ್ ಜ್ಯೂನಿಯರ್ ಅಂಬಿ
Team Udayavani, Aug 3, 2018, 6:00 AM IST
22 ವರ್ಷಗಳ ಹಿಂದೆ ಅದೇ ಜಾಗದಲ್ಲಿ ಅಂಬರೀಶ್ ಮತ್ತು ಸುದೀಪ್ ಅಭಿನಯದ “ಬ್ರಹ್ಮ’ ಎಂಬ ಚಿತ್ರ ಸೆಟ್ಟೇರಿತ್ತು. ಚಿತ್ರ ಭರ್ಜರಿಯಾಗಿ ಸೆಟ್ಟೇರಿದ್ದೇನೋ ಹೌದು. ಆದರೆ, ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಆ ಚಿತ್ರದಲ್ಲಿ ಅಂಬರೀಶ್ ಮತ್ತು ಸುದೀಪ್ ಒಟ್ಟಾಗಿ ನಟಿಸದಿದ್ದರೂ, ಎಷ್ಟೋ ವರ್ಷಗಳ ನಂತರ “ವೀರ ಪರಂಪರೆ’ ಚಿತ್ರದಲ್ಲಿ ನಟಿಸಿದರು. ಆ ನಂತರ ಈಗ ಮತ್ತೆ ಅಂಬರೀಶ್ ಹಾಗೂ ಸುದೀಪ್, “ಅಂಬಿ ನಿಂಗೆ ವಯಸ್ಸಾಯೊ¤à’ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದ ಮುಕ್ತಾಯದ ಪತ್ರಿಕಾಗೋಷ್ಠಿ ಅದೇ ಜಾಗದಲ್ಲಿ ನಡೆದಿದ್ದು ವಿಶೇಷ. ಎರಡೂ ಕಾರ್ಯಕ್ರಮಗಳಿಗೂ ವೇದಿಕೆಯಾಗಿದ್ದು, ಏಟ್ರಿಯಾ ಹೋಟೆಲ್. ಆಗ ಅದು ಏಟ್ರಿಯಾ ಹೋಟೆಲ್ ಆಗಿತ್ತು. ಈಗ ಹೆಸರು ಬದಲಾಗಿ ಬ್ಲೂ ರ್ಯಾಡಿಸನ್ ಆಗಿದೆ.
ಅಂದು “ಅಂಬಿ ನಿಂಗೆ ವಯಸ್ಸಾಯೊ’ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಅಂಬರೀಶ್, ಸುದೀಪ್, ದಿಲೀಪ್ ರಾಜ್, ನಿರ್ದೇಶಕ ಗುರುದತ್ ಗಾಣಿಗ ಮತ್ತು ನಿರ್ಮಾಪಕ ಜಾಕ್ ಮಂಜು ಬಂದಿದ್ದರು. ಮೊದಲು ಮಾತನಾಡಿದ್ದು ನಿರ್ದೇಶಕ ಗುರುದತ್. ತಾವು ಮೊದಲ ಬಾರಿಗೆ ಅಂಬರೀಶ್ ಅವರ ಮನೆಗೆ ಹೋದ ಸಂದರ್ಭದಲ್ಲಿ, ಅಂಬರೀಶ್ ತನ್ನನ್ನು ನೋಡಿ ನಕ್ಕಿದ್ದನ್ನು ನೆನಪಿಸಿಕೊಂಡರು ಗುರುದತ್. “ನನ್ನನ್ನು ನೋಡಿ ನಕ್ಕ ಅವರು, ನಿನ್ನ ಕಣ್ಣಲ್ಲಿ ಸ್ಪಾರ್ಕ್ ಕಾಣಿಸ್ತಿದೆ. ನೀ ಏನು ಹೇಳ್ತೀಯೋ ಮಾಡ್ತೀನಿ ಎಂದರು. ನಿಜ ಹೇಳಬೇಕೆಂದರೆ, ನಾನು ತುಂಬಾನೇ ಲಕ್ಕಿ’ ಎಂದರು ಗುರುದತ್.
ಇಡೀ ಚಿತ್ರ ಮುಖ್ಯವಾಗಿದ್ದು ಅಂಬರೀಶ್ ಅವರಿಂದ ಎನ್ನುತ್ತಾರೆ ಸುದೀಪ್. “ಇಡೀ ಚಿತ್ರ ಮುಖ್ಯವಾಗಿರೋದು ಮತ್ತು ಚೆನ್ನಾಗಿ ಬಂದಿರೋದು ಅಂಬರೀಶ್ ಅವರಿಂದ. ಚಿತ್ರೀಕರಣ ಸಂದರ್ಭದಲ್ಲಿ ಅವರಿಗೆ ಆರೋಗ್ಯ ಸಮಸ್ಯೆಗಳಾಗುತ್ತಿದ್ದವು. ಆ ಸಂದರ್ಭದಲ್ಲಿ ಅವರನ್ನ ಡೇಟ್ ಕೇಳ್ಳೋಕೆ ಹಿಂಜರಿಕೆಯಾಗೋದು. ಅವರನ್ನು ಸುಸ್ತು ಮಾಡಿಸುತ್ತಿದ್ದೀವಿ ಅನಿಸೋದು. ಆದರೆ, ಅವರೇ ನಮಗೆ ಇಂತಿಂಥ ದಿನ ಚಿತ್ರೀಕರಣ ಮಾಡಿಕೊಳ್ಳಿ ಎಂದು ಹೇಳ್ಳೋರು. ಈ ಚಿತ್ರದಲ್ಲಿ ಅವರ ಜೊತೆಗೆ ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ, ನಾನು ಅವರ ಕಿರಿಯ ವಯಸ್ಸಿನ ಪಾತ್ರ ಮಾಡುತ್ತಿದ್ದೇನೆ’ ಎಂದರು ಸುದೀಪ್. ಪಕ್ಕದಲ್ಲೇ ಇದ್ದ ಅಂಬರೀಶ್, “ನನ್ನ ಮತ್ತು ಅವನ ಕಾಂಬಿನೇಷನ್ ಇದ್ದಿದ್ದರೆ ಅವನು ಚಿತ್ರದಲ್ಲಿ ನಟಿಸೋದಕ್ಕೆ ಒಪ್ಪುತ್ತಿರಲಿಲ್ಲ.
ಏಕೆಂದರೆ, ನಾನು ಅವರ ಕಿರಿಯ ವಯಸ್ಸಿನ ಪಾತ್ರ ಮಾಡುತ್ತಿದ್ದೇನೆ’ ಎಂದರು ಸುದೀಪ್. ಪಕ್ಕದಲ್ಲೇ ಇದ್ದ ಅಂಬರೀಶ್, “ನನ್ನ ಮತ್ತು ಅವನ ಕಾಂಬಿನೇಷನ್ ಇದ್ದಿದ್ದರೆ ಅವನು ಚಿತ್ರದಲ್ಲಿ ನಟಿಸೋದಕ್ಕೆ ಒಪ್ಪುತ್ತಿರಲಿಲ್ಲ. ಏಕೆಂದರೆ, ನಾನು ನಾಲ್ಕು ಗಂಟೆ ಕೆಲಸ ಮಾಡಿದರೆ, ಅವನು 24 ಗಂಟೆ ಕೆಲಸ ಮಾಡುತ್ತಿರುತ್ತಾನೆ. ಸದಾ ಓಡುತ್ತಲೇ ಇರುತ್ತಾನೆ’ ಎಂದರು.
ಇನ್ನು ಚಿತ್ರಕ್ಕೆ “ಅಂಬಿ ನಿಂಗೆ ವಯಸ್ಸಾಯೊ¤à’ ಎಂಬ ಹೆಸರಿಟ್ಟಿದ್ದರ ಕುರಿತು ಪ್ರಸ್ತಾಪವಾಯಿತು. ಈ ಕುರಿತು ಮಾತನಾಡಿದ ಅಂಬರೀಶ್, “ತಲೆಗೂದಲು ನೋಡಿ ಯಾರ ವಯಸ್ಸೂ ಡಿಸೈಡ್ ಮಾಡಬಾರದು. ನಂಗೆ ವಯಸ್ಸಾಗಿದೆಯೋ, ಇಲ್ಲವೋ ಎಂಬುದನ್ನು ಚಿತ್ರ ನೋಡಿ ಹೇಳಿ’ ಎಂದು ಪಾಟೀಸವಾಲು ಹಾಕಿದರು.
ಜಾಕ ಮಂಜು ಈ ಹಿಂದೆ ಸುದೀಪ್ ಅಭಿನಯದಲ್ಲಿ ನಾಲ್ಕೈದು ಬಾರಿ ಚಿತ್ರ ಮಾಡಬೇಕು ಎಂದು ಪ್ರಯತ್ನ ಪಟ್ಟರಂತೆ. ಆದರೆ, ಕಾರಣಾಮತರಗಳಿಂದ ಸಾಧ್ಯವಾಗಿಲ್ಲ. “ಸುದೀಪ್ ಅವರ ಸಹಕಾರದಿಂದ ಈ ಚಿತ್ರ ಸಾಧ್ಯವಾಯಿತು. “ಬಿಗ್ ಬಾಸ್’ ನಡೆಯುವ ಸಂದರ್ಭದಲ್ಲಿ, ಸುದೀಪ್ ಕರೆದು ಚಿತ್ರದ ಬಗ್ಗೆ ಹೇಳಿದರು. ನಿಜಕ್ಕೂ ಈ ನನಗೆ ಬಹಳ ಖುಷಿ ಕೊಟ್ಟಿದೆ. ಅಂಬರೀಶ್ ಅವರಿಂದ ಯಾವುದೇ ಸಮಸ್ಯೆ ಆಗಿಲ್ಲ. ಸೆಟ್‌ಗೆ ಬಂದ ನಂತರ ಅವರು ಪೂರ್ತಿ ಪಾತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇನ್ನು ಸುದೀಪ್ ಅವರು ಚಿತ್ರದಲ್ಲಿ ಅಭಿನಯಿಸಿರುವುದು 24 ದಿನಗಳಾದರೂ, ಚಿತ್ರಕಥೆ, ಸಂಕಲನ, ಸಂಗೀತ ಮುಂತಾದ ಹಲವು ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರ ನನಗೆ ಬಹಳ ತೃಪ್ತಿ ಕೊಟ್ಟಿದೆ’ ಎಂದು ಮಾತು ಮುಗಿಸಿದರು.
ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ
Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!
Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ
AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.