ಕಾಬೂಲ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಕಾರವಾರದ ವ್ಯಕ್ತಿ ಬಲಿ
Team Udayavani, Aug 3, 2018, 1:53 PM IST
ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಮೂಲದ ವ್ಯಕ್ತಿಯನ್ನು ಅಪಹರಿಸಿ ಅಪಘಾನಿಸ್ತಾನದ ಕಾಬೂಲ್ ನಲ್ಲಿ ಹತ್ಯೆಗೈದಿದ್ದಾರೆ. ಗುರುವಾರ ಒಟ್ಟೂ ಮೂವರು ವಿದೇಶಿಗರನ್ನು ಅಪಹರಣ ಮಾಡಿದ್ದರು. ಉಗ್ರರು ಅಥವಾ ಪ್ರತ್ಯೇಕತಾವಾದಿಗಳ ಗುಂಪು ಇವರನ್ನು ಅಪಹರಣ ಮಾಡಿರಬಹುದೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಮಲೇಷ್ಯಾದ 64 ವರ್ಷದವ ವ್ಯಕ್ತಿ, ಮ್ಯಾಸಿಡೋನಿಯಾದ 37 ವರ್ಷದ ವ್ಯಕ್ತಿಯೊಂದಿಗೆ ಭಾರತದ ಪ್ಯಾಟ್ಸನ್ ರೋಡ್ರಿಗಸ್(39) ಸೇರಿದಂತೆ ಮೂವರನ್ನು ಹತ್ಯೆಗೈದಿದ್ದರು. ಪ್ಯಾಟ್ಸನ್ ಅವರಿಗೆ ವಿವಾಹವಾಗಿದ್ದು, ಪತ್ನಿ ಫ್ರಿಲ್ಲಾ ರೋಡ್ರಿಗಸ್(33ವರ್ಷ), ಮಗಳು ಪ್ರೆಸ್ಲಿ(5ವರ್ಷ) ಹಾಗೂ ತಂದೆ, ತಾಯಿಯನ್ನು ಅಗಲಿದ್ದಾರೆ.
ಕಾಬೂಲಿನಲ್ಲಿರುವ ಸಾಡೆಕ್ಸೋ ಅಂತಾರಾಷ್ಟ್ರೀಯ ಫುಡ್ ಮತ್ತು ಕ್ಯಾಟರಿಂಗ್ ಸರ್ವಿಸ್ ಕಂಪನಿಯಲ್ಲಿ ಬಾಣಸಿಗರಾಗಿ ಈ ಮೂವರು ಕಾರ್ಯ ನಿರ್ವಹಿಸುತ್ತಿದ್ದರು.
ಕಚೇರಿಗಳು, ಮಿಲಿಟರಿ, ಶಾಲೆಗಳು, ಆಸ್ಪತ್ರೆ ಮೊದಲಾದ ಮಹತ್ವದ ಸ್ಥಳಗಳಿಗೆ ಸಾಡೆಕ್ಸೋ ಕಂಪನಿ ಆಹಾರವನ್ನು ಸರಬರಾಜು ಮಾಡುತ್ತದೆ. ಇದು ವಿಶ್ವದಲ್ಲೇ 2ನೇ ಅತ್ಯಂತ ದೊಡ್ಡ ಆಹಾರ ಕಂಪನಿಯಾಗಿದೆ.
ಈ ಕಂಪನಿಯಲ್ಲಿ ಕಳೆದ ೧೦ ವರ್ಷ ದಿಂದ ಬಾಣಸಿಗನಾಗಿ ಕಾರವಾರದ ಪ್ಯಾಟ್ಸನ್ ರೋಡ್ರಿಗಸ್ ಕಾರ್ಯನಿರ್ವಹಿಸುತ್ತಿದ್ದ. ನಿನ್ನೆ ದಿನ ತಮ್ಮ ಕೆಲಸದ ನಿಮಿತ್ತ ವಾಹನದಲ್ಲಿ ಮಲೇಶಿಯ ಮೂಲದ ಇಬ್ಬರೊಂದಿಗೆ ಹೋಗುತ್ತಿದ್ದಾಗ ಉಗ್ರರು ಅವರನ್ನು ಕಾರಿನ ಸಮೇತ ಅಪಹರಿಸಿದ್ದರು
ಬಳಿಕ ಪಾರ್ಕಿಂಗ್ ಏರಿಯಾಗೆ ಕೊಂಡೊಯ್ದು ಕಾರಿನಲ್ಲಿಯೇ ಈ ಮೂವರನ್ನು ಗುಂಡಿಕ್ಕಿ ಕೊಲೆಗೈದಿದ್ದು, ಅವರ ದೇಹಗಳು ಕಾರಿನೊಳಗೆ ಪತ್ತೆಯಾಗಿತ್ತು.
ಕಾರು ಚಾಲಕನನ್ನು ಹಾಗೇ ಬಿಟ್ಟು ಹೋಗಿದ್ದು ಆತನನ್ನು ಅಪ್ಘಾನ್ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿರುವ ಗುರುತಿನ ಚೀಟಿಯಿಂದಾಗಿ ಈ ಮೂವರ ಗುರುತು ಪತ್ತೆಯಾಗಿದೆ. ಇನ್ನೆರಡು ದಿನದಲ್ಲಿ ಕಳೆಬರಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.