ತಣ್ಣೆರುಪಂತ ಶಾಲೆಗೆ ಬಿಎಸ್ಪಿ ತಂಡ ಭೇಟಿ
Team Udayavani, Aug 3, 2018, 4:12 PM IST
ಉಪ್ಪಿನಂಗಡಿ : ಅಪಾಯದ ಅಂಚಿನಲ್ಲಿರುವ ತಣ್ಣೀರುಪಂತ ಸರಕಾರಿ ಶಾಲೆಗೆ ಸುದಿನ ವರದಿ ಆಧರಿಸಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ತಂಡ ಗುರುವಾರ ದಿಢೀರ್ ಭೇಟಿ ನೀಡಿದ್ದು, ನೂತನ ಕಟ್ಟಡ ಒದಗುವ ನಿರೀಕ್ಷೆ ಶಾಲಾಭಿವೃದ್ಧಿ ಸಮಿತಿಯಲ್ಲಿ ಮೂಡಿದೆ.
ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ 93 ವರ್ಷಗಳಷ್ಟು ಹಳೆಯದು. ಶಾಲೆಯ ಎಂಟು ಕೊಠಡಿಗಳ ಪೈಕಿ ಎರಡು ಕೊಠಡಿಗಳ ಛಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ಈ ಕೊಠಡಿಗಳ ಮೇಲೆ ರೀ ಗಾತ್ರದ ಮರವೊಂದು ಮುರಿದು ಬೀಳುವ ಆತಂಕವೂ ನಿರ್ಮಾಣವಾಗಿದೆ. ಸುದಿನ ವರದಿ ಗಮನಿಸಿದ ಬಿಎಸ್ಪಿ ಜಿಲ್ಲಾ ಸಮಿತಿಯ ಭಾಸ್ಕರ ಮಾರೂರು, ತಾಲೂಕು ಅಧ್ಯಕ್ಷ ರಮೇಶ ಆರ್., ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಜಿ.ಎನ್., ತಾಲೂಕು ಉಸ್ತುವಾರಿ ಸಂಜೀವ ಆರ್. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯ ಗ್ರಾ.ಪಂ. ಮಾಜಿ ಸದಸ್ಯ ಯೋಗೀಶ ಅಳಕೆ ಅವರಿಂದ ವಿವರವಾದ ಮಾಹಿತಿಯುಳ್ಳ ವರದಿ ಸ್ವೀಕರಿ ಸಿದ್ದು, ತತ್‌ಕ್ಷಣ ಶಿಕ್ಷಣ ಸಚಿವ ಆರ್. ಮಹೇಶ್ ಅವರನ್ನು ಖುದ್ದು ಭೇಟಿಯಾಗಿ, ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಮಾಡಿಸಲು ಯತ್ನಿಸುವುದಾಗಿ ನಿಯೋಗ ಶಾಲಾಭಿವೃದ್ಧಿ ಸಮಿತಿಗೆ ತಿಳಿಸಿದೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ ಕರ್ಕೇರ, ಸ್ಥಳೀಯ ಪ್ರಮುಖರಾದ ಮಿಥುನ್ ಕುಲಾಲ್, ಹರಿಶ್ಚಂದ್ರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.