ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ವಿತರಣೆ ಶುರು
Team Udayavani, Aug 4, 2018, 6:25 AM IST
ಉಡುಪಿ: ಹದಿಹರೆಯದ (6 – 12ನೇ ತರಗತಿ ವರೆಗಿನ) ಹೆಣ್ಣು ಮಕ್ಕಳು ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ದೃಷ್ಟಿಯಿಂದ, ಶುಚಿತ್ವದ ಅರಿವಿನ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ “ಶುಚಿ’ ಯೋಜನೆಯಡಿ ಜಿಲ್ಲೆಯ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲಾ – ಕಾಲೇಜು ವಿದ್ಯಾರ್ಥಿನಿಯರಿಗೆ ಸರಕಾರದ ರಾಷ್ಟ್ರೀಯ ಗ್ರಾಮೀಣ ಅಭಿಯಾನದಡಿ ಸಂಪೂರ್ಣ ಉಚಿತ ನ್ಯಾಪ್ಕಿನ್ (ಸ್ಯಾನಿಟರಿ ಪ್ಯಾಡ್) ವಿತರಿಸುವ ಯೋಜನೆ ಚಾಲ್ತಿಯಲ್ಲಿದೆ.
ವಿತರಣೆ ಆರಂಭ
6ನೇ ತರಗತಿಯ ಮೊದಲು ಹೆಣ್ಣು ಮಕ್ಕಳಿಗೆ ಋತುಚಕ್ರ ಆರಂಭಗೊಂಡರೆ ಅಂತಹ ಹೆಣ್ಣು ಮಕ್ಕಳನ್ನೂ ಗುರುತಿಸಿ ನ್ಯಾಪ್ಕಿನ್ ವಿತರಿಸಲಾಗುತ್ತಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಈ ಬಾರಿ ಈಗ ತಾನೇ ಸರಬರಾಜು ಆರಂಭಗೊಂಡಿದೆ. ಜಿಲ್ಲೆಯಲ್ಲಿರುವ ಶಾಲಾ – ಕಾಲೇಜುಗಳ ಪಟ್ಟಿಯನ್ನು ಸರಕಾರಕ್ಕೆ ಈಗಾಗಲೇ ಕಳುಹಿಸಿಕೊಡಲಾಗಿದ್ದು, ಸರಕಾರದಿಂದ ನೇರವಾಗಿ ಶಾಲಾ – ಕಾಲೇಜುಗಳಿಗೆ ಸರಬರಾಜಾಗಿ, ಅಲ್ಲಿಂದ ವಿದ್ಯಾರ್ಥಿನಿಯರಿಗೆ ವಿತರಣೆಯಾಗಲಿದೆ.
ವರ್ಷಕ್ಕೆ 13 ಪ್ಯಾಕೇಟ್
10 ಪ್ಯಾಡ್ಗಳಿರುವ 1 ಪ್ಯಾಕೇಟ್ ಅನ್ನು ಪ್ರತೀ ತಿಂಗಳಿಗೆ 1ರಂತೆ ವರ್ಷಕ್ಕೆ 13 ಪ್ಯಾಕೇಟ್ಗಳನ್ನು ಒದಗಿಸಲಾಗುತ್ತಿದೆ. (ಕೆಲವು ಹೆಣ್ಣು ಮಕ್ಕಳಿಗೆ ನಿಗದಿತ ದಿನಾಂಕದ ಮೊದಲೇ ಋತುಸ್ರಾವವಾಗುವ ನಿಟ್ಟಿನಲ್ಲಿ 12ರ ಬದಲು 13 ಪ್ಯಾಡ್ಗಳನ್ನು ನೀಡಲಾಗುತ್ತಿದೆ). ಶಾಲೆಗಳು ಮತ್ತು ಹಾಸ್ಟೆಲ್ ಒಳಗೊಂಡಿರುವ ಶಾಲೆಗಳಲ್ಲಿ (ರೆಸಿಡೆನ್ಶಿಯಲ್ ಸ್ಕೂಲ್)ಗಳ ನೋಡಲ್ ಶಿಕ್ಷಕಿಯರ ಮೂಲಕ ಹೆಣ್ಣು ಮಕ್ಕಳಿಗೆ ಪೂರೈಕೆ ಮಾಡಲಾಗುತ್ತದೆ.
ಶಾಲೆಯಿಂದ ಹೊರಗೆ ಉಳಿದವರಿಗೂ ವಿತರಣೆ
ಪ್ಯಾಡ್ಗಳನ್ನು ಸರಕಾರವೇ ಖರೀದಿಸಿ ಶಾಲೆಗಳ ಮೂಲಕ ವಿತರಿಸುತ್ತದೆ. ಶಾಲೆಯಿಂದ ಹೊರಗುಳಿದ ಹದಿಹರೆಯದ ಹೆಣ್ಣು ಮಕ್ಕಳಿಗೂ ಇಲಾಖೆಯಿಂದ ನ್ಯಾಪಿನ್ ವಿತರಣೆಯಾಗಬೇಕೆನ್ನುವ ನೆಲೆಯಲ್ಲಿ ಅಂಗನವಾಡಿಗಳ ಮೂಲಕ ವಿತರಿಸಲಾಗುತ್ತಿದೆ.ಜಿಲ್ಲೆಯ 2039 ಶಾಲೆ ಮತ್ತು ಅಂಗನವಾಡಿ ವ್ಯಾಪ್ತಿಯ ಒಟ್ಟು 34,448 ಹದಿಹರೆಯದ ಹೆಣ್ಣು ಮಕ್ಕಳು ಫಲಾನುಭವಿಗಳಿದ್ದಾರೆ.
ವಿತರಣೆ ಪ್ರಕ್ರಿಯೆ ಚಾಲ್ತಿಯಲ್ಲಿ
ಈ ವರ್ಷ ಈಗಾಗಲೇ ವಿತರಣೆಗೆ ಚಾಲನೆ ದೊರಕಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ವಿತರಣೆಯಾಗಲಿದೆ.
– ಡಾ| ರೋಹಿಣಿ
ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.