ಆ್ಯಂಟಿಗುವಾ ಆರೋಪ ಅಲ್ಲಗಳೆದ ಸೆಬಿ
Team Udayavani, Aug 4, 2018, 6:00 AM IST
ನವದೆಹಲಿ: ಭಾರತದ ಸೆಕ್ಯುರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ಮುಂಬೈ ಪೊಲೀಸ್ ಹಾಗೂ ಭಾರತೀಯ ವಿದೇಶಾಂಗ ಇಲಾಖೆಗಳಿಂದ ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಬಗ್ಗೆ ಸಕಾರಾತ್ಮಕ ಸ್ಪಂದನೆ ಬಂದ ನಂತರವಷ್ಟೇ ತಾವು ಚೋಕ್ಸಿಗೆ ಪೌರತ್ವ ನೀಡಿರುವುದಾಗಿ ಆ್ಯಂಟಿಗುವಾ ಆ್ಯಂಡ್ ಬಬುಡಾ ಸರ್ಕಾರ ತಿಳಿಸಿದೆ. ಆ್ಯಂಟಿಗುವಾ ಸರ್ಕಾರದ “ಸಿಟಿಜನ್‌ಶಿಪ್ ಬೈ ಇನ್ವೆಸ್ಟ್‌ಮೆಂಟ್ ಯೂನಿಟ್'(ಸಿಐಯು) ನೀಡಿರುವ ಈ ಹೇಳಿಕೆಯನ್ನು ಸೆಬಿ ತಳ್ಳಿಹಾಕಿದೆ.
ಚೋಕ್ಸಿಗೆ ಪೌರತ್ವ ನೀಡುವ ಮೊದಲು ಚೋಕ್ಸಿಯ ಪೂರ್ವಾಪರಗಳನ್ನು ಕಟ್ಟುನಿಟ್ಟಾಗಿ ವಿಚಾರಿಸಲಾಗಿತ್ತು. ಚೋಕ್ಸಿ ವಿರುದ್ಧ ಭಾರತದಲ್ಲಿ ತನಿಖಾ ಹಂತದಲ್ಲಿರುವ ಎರಡು ಪ್ರಕರಣಗಳ ಬಗ್ಗೆ ಸೆಬಿಯಿಂದ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಸೆಬಿ, ಮೊದಲ ಪ್ರಕರಣದ ತನಿಖೆ ಕೈಬಿಡಲಾಗಿದೆ. ಇನ್ನು, ಎರಡನೇ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆಯಿರುವುದರಿಂದ ತನಿಖೆ ಮುಂದುವರಿಸುವ ಅಗತ್ಯವಿಲ್ಲವೆಂದು ಹೇಳಿತ್ತೆಂದು ಸಿಐಯು ಹೇಳಿದೆ. ಆದರೆ, ಇದನ್ನು ತಳ್ಳಿಹಾಕಿರುವ ಸೆಬಿ, “ಸಿಐಯು ವತಿಯಿಂದ ಚೋಕ್ಸಿ ಬಗ್ಗೆ ಯಾವುದೇ ಮನವಿ ಬಂದಿರಲಿಲ್ಲ. ನಾವೂ ಯಾವುದೇ ಮಾಹಿತಿ ನೀಡಿಲ್ಲ’ ಎಂದಿದೆ.
ನೀರವ್ ಗಡಿ ಪಾರಿಗೆ ಮನವಿ
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 10 ಸಾವಿರ ಕೋಟಿ ರೂ. ದೋಚಿ ದೇಶಬಿಟ್ಟು ಪರಾರಿ ಯಾ ಗಿರುವ ನೀರವ್ ಮೋದಿಯನ್ನು ಹಸ್ತಾಂತರಗೊಳಿಸಬೇಕೆಂದು ಭಾರತ ಸರ್ಕಾರ, ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧದ ಮನವಿ ಪತ್ರವನ್ನು ವಿಶೇಷ ರಾಜತಾಂತ್ರಿಕ ಬ್ಯಾಗ್‌ನಲ್ಲಿಟ್ಟು ಕಳುಹಿ ಸಲಾಗಿದೆ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ.
ಆ್ಯಂಟಿಗುವಾ ಸರ್ಕಾರ ನೀಡಿರುವ ಆಘಾತಕಾರಿ ಹೇಳಿಕೆಯು ಚೋಕ್ಸಿ ದೇಶಬಿಟ್ಟು ತೆರಳಲು ಬಿಜೆಪಿ ಸರ್ಕಾರದ ಮೌನಸಮ್ಮತಿ ಇತ್ತು ಮತ್ತು ಬಿಜೆಪಿಯೂ ಇದರಲ್ಲಿ ಶಾಮೀಲಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ.
ರಣದೀಪ್ ಸುಜೇವಾಲಾ, ಕಾಂಗ್ರೆಸ್ ವಕ್ತಾರ
ಯುಪಿಎ ಸರ್ಕಾರದ ಅವಧಿಯಲ್ಲಿ ಚೋಕ್ಸಿ ಮಾಡಿದ್ದ ಅಪರಾಧಗಳನ್ನು ಬಯಲಿಗೆ ಎಳೆದಿದ್ದೇ ಕೇಂದ್ರದ ಮೋದಿ ನೇತೃತ್ವದ ಸರ್ಕಾರ. ಪ್ರತಿಪಕ್ಷಗಳ ನಾಯಕರೊಂದಿಗೆ ಚೋಕ್ಸಿಗೆ ಸಂಬಂಧವಿತ್ತು ಎನ್ನುವುದನ್ನು ಅವರ ವಕೀಲರೇ ಬಾಯಿಬಿಟ್ಟಿದ್ದಾರೆ.
ಅನಿಲ್ ಬಲೂನಿ, ಬಿಜೆಪಿ ವಕ್ತಾರ
ಉತ್ತಮ ಅಭಿಪ್ರಾಯ ಬಂದ ನಂತರವಷ್ಟೇ ನಾಗರಿಕತ್ವ ನೀಡಿರುವುದಾಗಿ ಆ್ಯಂಟಿಗುವಾ ಹೇಳಿಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.