194 ರನ್ ಟಾರ್ಗೆಟ್; ಭಾರತಕ್ಕೆ ಜಯ ಒಲಿದೀತೆ?
Team Udayavani, Aug 4, 2018, 6:00 AM IST
ಎಜ್‌ಬಾಸ್ಟನ್: ಇಂಗ್ಲೆಂಡ್ ಪಾಲಿನ “ಐತಿಹಾಸಿಕ ಟೆಸ್ಟ್’ ಪಂದ್ಯ ರೋಚಕ ಘಟ್ಟ ಮುಟ್ಟಿದೆ. ಗೆಲ್ಲುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾದರೂ ಪಿಚ್ ವರ್ತಿಸುತ್ತಿರುವ ರೀತಿಯನ್ನು ಗಮನಿಸಿದಾಗ ಇದು ಸುಲಭವಲ್ಲ ಎಂಬ ಸಂಗತಿ ಅರಿವಾಗತೊಡಗಿದೆ. ಪೇಸ್ ಬೌಲರ್ ಇಶಾಂತ್ ಶರ್ಮ ಅವರ ಘಾತಕ ದಾಳಿಗೆ ತತ್ತರಿಸಿದ ಆತಿಥೇಯ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ 180ಕ್ಕೆ ಕುಸಿದಿದ್ದು, ಭಾರತಕ್ಕೆ 194 ರನ್ನುಗಳ ಸಾಮಾನ್ಯ ಗುರಿ ನೀಡಿದೆ. ಆದರೆ ಬ್ಯಾಟಿಂಗಿಗೆ ಕಠಿನವಾಗಿ ಪರಿಣಮಿ ಸಿರುವ ಎಜ್‌ಬಾಸ್ಟನ್ ಟ್ರ್ಯಾಕ್‌ನಲ್ಲಿ ಟೀಮ್ ಇಂಡಿಯಾ ಚಡಪಡಿಸುತ್ತಿದ್ದು, 73 ರನ್ನಿಗೆ 4 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮುಂದುವರಿಸುತ್ತಿದೆ. ನಾಯಕ ಕೊಹ್ಲಿ ಕ್ರೀಸಿನಲ್ಲಿದ್ದು, ಭಾರತದ ಪಾಲಿನ ಆಶಾಕಿರಣವಾಗಿ ಉಳಿದಿದ್ದಾರೆ.
ಭಾರತ ಈಗಾಗಲೇ ಮುರಳಿ ವಿಜಯ್ (6), ಶಿಖರ್ ಧವನ್ (13), ಕೆ.ಎಲ್. ರಾಹುಲ್ (13) ಮತ್ತು ಅಜಿಂಕ್ಯ ರಹಾನೆ (2) ಅವರ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಕೊಹ್ಲಿ (29) ಜತೆಗೆ ನೈಟ್ ವಾಚ್‌ಮನ್ ಆರ್. ಅಶ್ವಿನ್ (9)ಕ್ರೀಸ್‌ನಲ್ಲಿದ್ದಾರೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಮೋಘ ಬೌಲಿಂಗ್ ನಡೆಸಿದ ಇಶಾಂತ್ ಶರ್ಮ 51 ರನ್ನಿತ್ತು 5 ವಿಕೆಟ್ ಹಾರಿಸಿದರು. ಇನ್ನಿಂಗ್ಸ್ ಒಂದರಲ್ಲಿ ಇಶಾಂತ್ 5 ಪ್ಲಸ್ ವಿಕೆಟ್ ಉರುಳಿಸಿದ 8ನೇ ನಿದರ್ಶನ ಇದಾಗಿದೆ. ಆರ್. ಅಶ್ವಿನ್ 3 ವಿಕೆಟ್ ಕಿತ್ತರೆ, ಉಮೇಶ್ ಯಾದವ್ ಇಬ್ಬರನ್ನು ಪೆವಿಲಿಯನ್ನಿಗೆ ಅಟ್ಟಿದರು.
ಸ್ಯಾಮ್ ಕರನ್ ದಿಟ್ಟ ಬ್ಯಾಟಿಂಗ್
ಒಂದು ವಿಕೆಟಿಗೆ 9 ರನ್ ಗಳಿಸಿದಲ್ಲಿಂದ ಶುಕ್ರವಾರದ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್, ಸ್ಪಿನ್ನರ್ ಅಶ್ವಿನ್ ಮತ್ತು ಪೇಸರ್ ಇಶಾಂತ್ ಶರ್ಮ ದಾಳಿಗೆ ಚಡಪಡಿಸಿ ವಿಕೆಟ್ ಉರುಳಿಸಿಕೊಳ್ಳುತ್ತಲೇ ಹೋಯಿತು. ಒಂದು ಹಂತದಲ್ಲಂತೂ 87 ರನ್ನಿಗೆ 7 ವಿಕೆಟ್ ಉರುಳಲ್ಪಟ್ಟಿತ್ತು. ಇಂಥ ಸಂದಿಗ್ಧ ಸ್ಥಿತಿಯಲ್ಲಿ, ಕೇವಲ 2ನೇ ಟೆಸ್ಟ್ ಆಡುತ್ತಿರುವ 20ರ ಹರೆಯದ ಆಲ್‌ರೌಂಡರ್ ಸ್ಯಾಮ್ ಕರನ್ ದಿಟ್ಟ ಬ್ಯಾಟಿಂಗ್ ಹೋರಾಟವೊಂದನ್ನು ಪ್ರದರ್ಶಿಸಿದರು. ಕೊನೆಯ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದ ಅವರು 63 ರನ್ನುಗಳ ಬಹುಮೂಲ್ಯ ಕೊಡುಗೆ ಸಲ್ಲಿಸಿದರು. 65 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಉಳಿದ ಮೂವರು ಆಟಗಾರರ ನೆರವಿನಿಂದ 93 ರನ್ ಒಟ್ಟುಗೂಡಿಸಿದ ಕರನ್ ಇಂಗ್ಲೆಂಡನ್ನು ಮರು ಹೋರಾಟಕ್ಕೆ ಅಣಿಗೊಳಿಸಿದರು. ಉಳಿದಂತೆ ಜಾನಿ ಬೇರ್‌ಸ್ಟೊ (28), ಡೇವಿಡ್ ಮಾಲನ್ (20), ಆದಿಲ್ ರಶೀದ್ (16) ಜೋ ರೂಟ್ (14) ಆಟ ಸಾಮಾನ್ಯ ಮಟ್ಟದಲ್ಲಿತ್ತು. ಸ್ಯಾಮ್ ಕರನ್ ಕ್ರೀಸ್ ಆಕ್ರಮಿಸಿಕೊಳ್ಳದೇ ಹೋಗಿದ್ದಲ್ಲಿ ಇಂಗ್ಲೆಂಡಿನ ದ್ವಿತೀಯ ಸರದಿ 125ರ ಗಡಿಗೆ ಮುಗಿಯುವ ಸಾಧ್ಯತೆ ಇತ್ತು. ಕರನ್ ಸಾಹಸದಲ್ಲಿ ಭಾರತದ ಕಳಪೆ ಫೀಲ್ಡಿಂಗ್ ಕೊಡುಗೆಯೂ ಸಾಕಷ್ಟಿತ್ತು.
ಅಡಿಲೇಡ್ ಬಳಿಕ ಅತ್ಯುತ್ತಮ ಆಟ
ಶತಕದ ಬಳಿಕ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ಇದು 2014ರ ಅಡಿಲೇಡ್ ಶತಕ ಸಾಹಸದ ಬಳಿಕ ದಾಖಲಾದ ತನ್ನ ಅತ್ಯುತ್ತಮ ಇನ್ನಿಂಗ್ಸ್ ಎಂದಿದ್ದಾರೆ. “ಅಡಿಲೇಡ್ ಪ್ರದರ್ಶನ ನನ್ನ ಪಾಲಿಗೆ ವೆರಿ ಸ್ಪೆಷಲ್. ಏಕೆಂದರೆ, ಅದು ಚೇಸಿಂಗ್ ವೇಳೆ ದಾಖಲಾದ ಸಾಧನೆಯಾಗಿತ್ತು’ ಎಂದು ಕೊಹ್ಲಿ ಹೇಳಿದ್ದಾರೆ. ಅದು ನಾಯಕನಾಗಿ ಕೊಹ್ಲಿಗೆ ಮೊದಲ ಟೆಸ್ಟ್ ಪಂದ್ಯವಾಗಿತ್ತು. ಪ್ರಥಮ ಇನ್ನಿಂಗ್ಸ್‌ನಲ್ಲಿ 115 ರನ್ ಸಿಡಿಸಿದ್ದರು. ಭಾರತಕ್ಕೆ 364 ರನ್ ಗೆಲುವಿನ ಗುರಿ ಲಭಿಸಿತ್ತು. ವಿಜಯ್ ಜತೆ ಸೇರಿಕೊಂಡ ಕೊಹ್ಲಿ ಆಸೀಸ್ ದಾಳಿಯನ್ನು ಪುಡಿಗುಟ್ಟಿ 185 ರನ್ ಜತೆಯಾಟ ನಿಭಾ ಯಿಸಿದರು. ಭಾರತ 48 ರನ್ನುಗಳಿಂದ ಸೋತಿತಾದರೂ ಕೊಹ್ಲಿ ಅವರ 141 ರನ್ನುಗಳ ದಿಟ್ಟ ಆಟ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದಿತ್ತು. ಕೊಹ್ಲಿ ಅಂದರೆ “ಅಗ್ರೆಸ್ಸೀವ್ ಕ್ರಿಕೆಟ್’ ಎಂಬುದು ಆಗಲೇ ಬ್ರ್ಯಾಂಡ್ ಆಗಿತ್ತು.
ಕೊಹ್ಲಿ ಬ್ಯಾಟಿಂಗ್ ಸಾಹಸ-ಸಾಧನೆ
2014ರ ಸರಣಿಗಿಂತ ಹೆಚ್ಚು ಸ್ಕೋರ್ ವಿರಾಟ್ ಕೊಹ್ಲಿ 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಗಳಿಸಿದ ಒಟ್ಟು ರನ್ನಿಗಿಂತ ಹೆಚ್ಚು ರನ್ನನ್ನು ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಬಾರಿಸಿದರು. ಅಂದಿನ ಪ್ರವಾಸದ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಗಳಿಸಿದ್ದು 134 ರನ್ ಮಾತ್ರ!
ಅಜರುದ್ದೀನ್ ಬಳಿಕ ಮೊದಲಿಗ
ವಿರಾಟ್ ಕೊಹ್ಲಿ ನಾಯಕನಾಗಿ ಇಂಗ್ಲೆಂಡ್‌ನಲ್ಲಿ ಆಡಿದ ಪ್ರಥಮ ಟೆಸ್ಟ್ ಇನ್ನಿಂಗ್ಸ್‌ನಲ್ಲೇ ಸೆಂಚುರಿ ಹೊಡೆದ ಭಾರತದ ಕೇವಲ 2ನೇ ನಾಯಕ. 1990ರ ಪ್ರವಾಸದ ವೇಳೆ ಮೊಹಮ್ಮದ್ ಅಜರುದ್ದೀನ್ 121 ರನ್ ಬಾರಿಸಿದ್ದರು. ಹಾಗೆಯೇ ಇಂಗ್ಲೆಂಡ್ ನೆಲದಲ್ಲಿ ಅತ್ಯಧಿಕ ರನ್ ಬಾರಿಸಿದ 2ನೇ ನಾಯಕನೆನಿಸಿದರು. 1990ರ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಅಜರ್ 179 ರನ್ ಹೊಡೆದದ್ದು ದಾಖಲೆ.
ಉಳಿದೆಲ್ಲರಿಗಿಂತ ಅಧಿಕ ಮೊತ್ತ
ತಂಡದ ಉಳಿದೆಲ್ಲ ಆಟಗಾರರ ಒಟ್ಟು ಮೊತ್ತಕ್ಕಿಂತ ಕೊಹ್ಲಿ ಒಬ್ಬರೇ ಹೆಚ್ಚು ರನ್ ಬಾರಿಸಿದರು. ಭಾರತೀಯ ನಾಯಕರ ಈ ದಾಖಲೆಯ ಯಾದಿಯಲ್ಲಿ ಕೊಹ್ಲಿಗೆ 2ನೇ ಸ್ಥಾನ (ಶೇ. 54.37 ರನ್). 2014ರ ಇಂಗ್ಲೆಂಡ್ ಎದುರಿನ ಓವಲ್ ಟೆಸ್ಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಶೇ. 55.41ರಷ್ಟು ರನ್ ಹೊಡೆದದ್ದು ದಾಖಲೆ. ಅಂದು ಭಾರತ 148 ರನ್ ಗಳಿಸಿತ್ತು. ಇದರಲ್ಲಿ ಧೋನಿ ಪಾಲು 82 ರನ್.
ಅರ್ಧ ಶತಕದಿಂದ ಶತಕದ ಓಟ
ವಿರಾಟ್ ಕೊಹ್ಲಿ ಅತ್ಯಧಿಕ ಅರ್ಧ ಶತಕಗಳನ್ನು ಶತಕವಾಗಿ ಪರಿವರ್ತಿಸಿದ ನಾಯಕರಲ್ಲೇ ಅಗ್ರಸ್ಥಾನದಲ್ಲಿದ್ದಾರೆ (ಶೇ. 71). ಅನಂತರದ ಸ್ಥಾನದಲ್ಲಿರುವವರು ಸ್ಟೀವ್ ಸ್ಮಿತ್ (ಶೇ. 53).
ನಾಯಕನಾಗಿ 15 ಶತಕ
ಕೊಹ್ಲಿ ನಾಯಕನಾಗಿ 15 ಸೆಂಚುರಿ ಹೊಡೆದು 3ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಗ್ರೇಮ್ ಸ್ಮಿತ್ (22), ರಿಕಿ ಪಾಂಟಿಂಗ್ (19) ಮೊದಲೆರಡು ಸ್ಥಾನದಲ್ಲಿದ್ದಾರೆ.
ಎಕ್ಸ್‌ಟ್ರಾ ಇನ್ನಿಂಗ್ಸ್
ಅಲಸ್ಟೇರ್ ಕುಕ್ ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ಸಲ ಎರಡೂ ಇನ್ನಿಂಗ್ಸ್‌ಗಳಲ್ಲಿ ಬೌಲ್ಡ್ ಆದರು. ಇದು ಅವರ 157ನೇ ಟೆಸ್ಟ್ ಆಗಿದ್ದು, ಎರಡೂ ಸಲ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.
ಕುಕ್ ಅವರನ್ನು ಬೌಲ್ಡ್ ಮಾಡುವ ಮೂಲಕ ಅಶ್ವಿನ್ ಇಬ್ಬರು ಆಟಗಾರರನ್ನು ಸರ್ವಾಧಿಕ 9 ಸಲ ಔಟ್ ಮಾಡಿದರು (ಮತ್ತೂಬ್ಬ ಆಟಗಾರ ಡೇವಿಡ್ ವಾರ್ನರ್).
ಕುಕ್ ಅವರನ್ನು ಅತೀ ಹೆಚ್ಚು ಸಲ ಔಟ್ ಮಾಡಿದ ಬೌಲರ್‌ಗಳ ಯಾದಿಯಲ್ಲಿ ಅಶ್ವಿನ್ ಜಂಟಿ 2ನೇ ಸ್ಥಾನ. ಮಿಚೆಲ್ ಜಾನ್ಸನ್, ಟ್ರೆಂಟ್ ಬೌಲ್ಟ್ ಕೂಡ ಕುಕ್ ಅವರನ್ನು 9 ಸಲ ಔಟ್ ಮಾಡಿದ್ದಾರೆ. ಮಾರ್ನೆ ಮಾರ್ಕೆಲ್ 12 ಸಲ ಔಟ್ ಮಾಡಿದ್ದು ದಾಖಲೆ.
ಸ್ಯಾಮ್ ಕರನ್ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 4 ವಿಕೆಟ್ ಕಿತ್ತ ಅತೀ ಕಿರಿಯ ಬೌಲರ್ ಎನಿಸಿದರು (20 ವರ್ಷ, 60 ದಿನ). ಹಿಂದಿನ ದಾಖಲೆ ಬಿಲ್ ವೋಕ್ ಹೆಸರಲ್ಲಿತ್ತು (20 ವರ್ಷ, 179 ದಿನ). ಅದು ವೆಸ್ಟ್ ಇಂಡೀಸ್ ಎದುರಿನ 1930ರ ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಆಗಿತ್ತು.
ಆರ್. ಅಶ್ವಿನ್ 1967ರ ಬಳಿಕ ಇಂಗ್ಲೆಂಡ್‌ನಲ್ಲಿ ಆಡಲಾದ ಟೆಸ್ಟ್ ಪಂದ್ಯವೊಂದರಲ್ಲಿ ಬೌಲಿಂಗ್ ಆರಂಭಿಸಿದ ಭಾರತದ ಮೊದಲ ಸ್ಪಿನ್ನರ್ ಎನಿಸಿದರು. ಅಂದು ಬೌಲಿಂಗ್ ಆರಂಭಿಸಿದವರು ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ.
ಸ್ಕೋರ್‌ಪಟ್ಟಿ
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 287
ಭಾರತ ಪ್ರಥಮ ಇನ್ನಿಂಗ್ಸ್ 274
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್
ಅಲಸ್ಟೇರ್ ಕುಕ್ ಬಿ ಅಶ್ವಿನ್ 0
ಕೀಟನ್ ಜೆನ್ನಿಂಗ್ಸ್ ಸಿ ರಾಹುಲ್ ಬಿ ಅಶ್ವಿನ್ 8
ಜೋ ರೂಟ್ ಸಿ ರಾಹುಲ್ ಬಿ ಅಶ್ವಿನ್ 14
ಡೇವಿಡ್ ಮಾಲನ್ ಸಿ ರಹಾನೆ ಬಿ ಇಶಾಂತ್ 20
ಜಾನಿ ಬೇರ್‌ಸ್ಟೊ ಸಿ ರಹಾನೆ ಬಿ ಇಶಾಂತ್ 28
ಬೆನ್ ಸ್ಟೋಕ್ಸ್ ಸಿ ಕೊಹ್ಲಿ ಬಿ ಇಶಾಂತ್ 6
ಜಾಸ್ ಬಟ್ಲರ್ ಸಿ ಕಾರ್ತಿಕ್ ಬಿ ಇಶಾಂತ್ 1
ಸ್ಯಾಮ್ ಕರನ್ ಸಿ ಕಾರ್ತಿಕ್ ಬಿ ಯಾದವ್ 63
ಆದಿಲ್ ರಶೀದ್ ಬಿ ಯಾದವ್ 16
ಸ್ಟುವರ್ಟ್ ಬ್ರಾಡ್ ಸಿ ಧವನ್ ಬಿ ಇಶಾಂತ್ 11
ಜೇಮ್ಸ್ ಆ್ಯಂಡರ್ಸನ್ ಔಟಾಗದೆ 0
ಇತರ 13
ಒಟ್ಟು (ಆಲೌಟ್) 180
ವಿಕೆಟ್ ಪತನ: 1-9, 2-18, 3-39, 4-70, 5-85, 6-86, 7-87, 8-135, 9-
ಬೌಲಿಂಗ್:
ಮೊಹಮ್ಮದ್ ಶಮಿ 12-2-38-0
ಆರ್. ಅಶ್ವಿನ್ 21-4-59-3
ಇಶಾಂತ್ ಶರ್ಮ 13-0-51-5
ಉಮೇಶ್ ಯಾದವ್ 7-1-20-2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.