ಹದಿನೈದೇ ದಿನದಲ್ಲಿ ಕನ್ನಡ ಕಲಿತ ಜಪಾನಿಗ


Team Udayavani, Aug 4, 2018, 11:27 AM IST

15days.jpg

ಮಂಗಳೂರು: ಕನ್ನಡ ನಾಡಿನಲ್ಲಿದ್ದೂ ಹಲವರು ಇಂಗ್ಲಿಷ್‌ ವ್ಯಾಮೋಹಿಗಳಾಗಿದ್ದಾರೆ. ಅಂತದ್ದರಲ್ಲಿ ಜಪಾನ್‌ ಪ್ರಜೆಯೊಬ್ಬ ರೇಷ್ಮೆ ಬೆಳೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದು ಹದಿನೈದೇ ದಿನದಲ್ಲಿ ಕನ್ನಡ ಕಲಿತು ಕನ್ನಡ ಪ್ರೇಮ ಮೆರೆದಿದ್ದಾರೆ! ವಿಶೇಷವೆಂದರೆ ಸ್ಪಷ್ಟ ಕನ್ನಡ ಕಲಿತು ರಾಮನಗರದ ರೇಷ್ಮೆ ಬೆಳೆಗಾರರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಇಚ್ಛೆ ಈ ಯುವಕನದ್ದು.

ಈತನಿಗೆ ಕನ್ನಡ ಕಲಿಸಿದವರು ಮಂಗಳೂರಿನ ಯುವಕ, ಪ್ರಸ್ತುತ ಹೊಸದಿಲ್ಲಿಯ ಡೆಲ್ಲಿ ಕನ್ನಡ ಸೀನಿಯರ್‌ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿರುವ ಅರವಿಂದ ಬಿಜೈ. ಈತ ಇಪ್ಪತ್ತೆರಡು ವರ್ಷದ ಕಝುಕಿ. ಜಪಾನ್‌ನ ಚಿಬಾ ಮೂಲದವರು. ಜಪಾನ್‌ನ ಝೈಕಾ ಕಂಪೆನಿಯ ಮುಖಾಂತರ ರೇಷ್ಮೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.

ಜಪಾನ್‌ನಿಂದ ಹೊಸದಿಲ್ಲಿಗೆ ಬಂದ ಕಝುಕಿ, ಅಲ್ಲಿನ ಝುಬಾನ್‌ ಭಾಷಾ ಕಲಿಕಾ ಸಂಸ್ಥೆಯಲ್ಲಿ ತನ್ನ ಕನ್ನಡ ಕಲಿಕೆಯ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಸಂಸ್ಥೆಯವರು ಅರವಿಂದ ಅವರನ್ನು ಸಂಪರ್ಕಿಸಿ ಆತನಿಗೆ ಕನ್ನಡ ಪಾಠ ಹೇಳಿಕೊಡುವಂತೆ ಮನವಿ ಮಾಡಿದ್ದರು.

ದಿನಕ್ಕೆ ನಾಲ್ಕು ಗಂಟೆಯಂತೆ ಒಟ್ಟು ಹದಿನೈದು ದಿನಗಳ ಕಾಲ ಅರವಿಂದ ಅವರು ಕಝುಕಿ ಅವರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಆತನ ಕಲಿಕಾಸಕ್ತಿ ಹೇಗಿತ್ತೆಂದರೆ ಮೊದಲ ದಿನದಲ್ಲೇ ಕನ್ನಡ ವರ್ಣಮಾಲೆಯ “ಅ’ದಿಂದ “ಳ’ದವರೆಗೆ ಬರೆದು ತೋರಿಸಿದ್ದಾರೆ ಎನ್ನುತ್ತಾರೆ ಅರವಿಂದ್‌.

ಕನ್ನಡದಲ್ಲಿ ಟೈಪಿಂಗ್‌: ಕನ್ನಡ ಟೈಪಿಂಗ್‌ ಕಲಿಯಲು ಮೊಬೈಲ್‌ನಲ್ಲಿ ಲಿಪಿಕಾರ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ ನುಡಿ ಸಾಫ್ಟ್‌ವೇರ್‌ನ್ನು ಅರವಿಂದ್‌ ಅವರು ಡೌನ್‌ಲೋಡ್‌ ಮಾಡಿ ಕೊಟ್ಟಿದ್ದಾರೆ. ಕಝುಕಿ ಅವರು ಸದ್ಯ ಕನ್ನಡ ಟೈಪಿಂಗ್‌ನೂ° ಕಲಿತಿದ್ದು, ತಮ್ಮ ಮಾರ್ಗದರ್ಶಕ ಅರವಿಂದ್‌ ಅವರೊಂದಿಗೆ ಮೊಬೈಲ್‌ ಮೂಲಕ ಕನ್ನಡದಲ್ಲೇ ಸಂದೇಶ ಸಂವಹನ ನಡೆಸುತ್ತಾರೆ.

ಕನ್ನಡ ಕಲಿಬೇಕೆಂದ ಮೊದಲ ವಿದೇಶಿಗ: ವಿಶೇಷವೆಂದರೆ ಹೊಸದಿಲ್ಲಿಯ ಝುಬಾನ್‌ ಭಾಷಾ ಕಲಿಕಾ ಸಂಸ್ಥೆಯಲ್ಲಿ ಕನ್ನಡ ಕಲಿಸಿ ಎಂದು ಕೇಳಿದ ಮೊದಲ ವಿದೇಶಿಗ ಬಹುಶಃ ಕಝುಕಿ ಅವರಾಗಿದ್ದಾರೆ ಎಂದು ಸಂಸ್ಥೆಯವರೇ ಹೇಳುತ್ತಾರಂತೆ.

ಈ ಸಂಸ್ಥೆಯಲ್ಲಿ ಹೊರ ರಾಜ್ಯ ಅಥವಾ ವಿದೇಶಗಳಿಂದ ಆಗಮಿಸಿದವರಿಗೆ ಭಾಷಾ ಕಲಿಕೆ ತರಬೇತಿಯನ್ನು ನೀಡಲಾಗುತ್ತದೆ. ಉರ್ದು, ಹಿಂದಿ, ಇಂಗ್ಲಿಷ್‌ ಸೇರಿದಂತೆ ವಿವಿಧ ಭಾಷೆಗಳನ್ನು ಇಲ್ಲಿ ಕಲಿಸಲಾಗುತ್ತದೆ. ಆದರೆ ಕನ್ನಡ ಭಾಷೆ ಕಲಿಸಲು ಸಂಪನ್ಮೂಲ ವ್ಯಕ್ತಿಗಳಿಲ್ಲದ ಹಿನ್ನೆಲೆಯಲ್ಲಿ ಅರವಿಂದ ಅವರ ಮೂಲಕ ಕನ್ನಡವನ್ನು ಕಲಿಸಲಾಗಿದೆ.

ಬಸವಣ್ಣನ ವಚನ ತಪ್ಪಿಲ್ಲದೇ ಓದುತ್ತಾರೆ: ಬಸವಣ್ಣನವರ “ಕಳಬೇಡ, ಕೊಲಬೇಡ..ಹುಸಿಯ ನುಡಿಯಲು ಬೇಡ..’ ವಚನವನ್ನು ಕಝುಕಿ ನಿರರ್ಗಳವಾಗಿ ಓದುತ್ತಾರೆ. ಇದನ್ನು ಅರವಿಂದ ಅವರು ತಮ್ಮ ಫೇಸುºಕ್‌ ಖಾತೆಯಲ್ಲಿ ವೀಡಿಯೋ ಸಮೇತ ಅಪ್‌ಲೋಡ್‌ ಮಾಡಿದ್ದಾರೆ.

“ನಮಸ್ಕಾರ’ ಎನ್ನುತ್ತ ಕನ್ನಡ ಮಾತನ್ನು ಆರಂಭಿಸುತ್ತಾರೆ. ಓದು ಮತ್ತು ಬರಹವನ್ನು ಶೀಘ್ರ ಕಲಿತಿರುವ ಕಝುಕಿ ಮಾತನಾಡುವಾಗ ಸ್ವಲ್ಪ ತಡವರಿಸುತ್ತಾರೆ. ಏನೇ ಕೇಳಿದರೂ ಯೋಚನೆ ಮಾಡಿ ಕನ್ನಡದಲ್ಲಿ ಉತ್ತರಿಸುತ್ತಾರೆ ಎನ್ನುತ್ತಾರೆ ಅವರು.

ನಾನು ರೇಷ್ಮೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿನ ವ್ಯಾವಹಾರಿಕ ಭಾಷೆ ಕನ್ನಡವಾದ್ದರಿಂದ ಅದೇ ಭಾಷೆಯಲ್ಲಿ ಜನರೊಂದಿಗೆ ಬೆರೆಯುವ ಇಚ್ಛೆ ನನ್ನದು. ಮುಂದೆ ರಾಮನಗರದಲ್ಲಿ ರೇಷ್ಮೆ ಬೆಳೆ ಕುರಿತು ಅಧ್ಯಯನ ಮಾಡಲಿದ್ದೇನೆ. ರಾಮನಗರದ ರೇಷ್ಮೆ ಬೆಳೆಗಾರ ರೈತರೊಂದಿಗೆ ಕನ್ನಡದಲ್ಲೇ ವ್ಯವಹರಿಸುತ್ತೇನೆ.
-ಕಝುಕಿ, ಕನ್ನಡ ಕಲಿತ ಜಪಾನಿಗ

* ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

hdk-office

Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.