ನಿವೃತ್ತ ನೌಕರರಿಗೆ ಸನ್ಮಾನ
Team Udayavani, Aug 4, 2018, 11:54 AM IST
ಮುದ್ದೇಬಿಹಾಳ: ಸರಕಾರಿ ಸೇವೆ ಜನಸಾಮಾನ್ಯರ ಸೇವೆಯಾಗಿದ್ದು ಸರಕಾರಿ ನೌಕರಿ ಪಡೆದ ಪ್ರತಿಯೊಬ್ಬರೂ ಜನಸೇವೆಗೆ ಸದಾಕಾಲ ಮುಂದಾಗಬೇಕು ಎಂದು ಲೋಕೊಪಯೋಗಿ ಇಲಾಖೆ ಸಹಾಯ ಅಧಿಕಾರಿ ಅರುಣಕುಮಾರು ಪಾಟೀಲ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಜನರಿಗಾಗಿ ಸರಕಾರ ಸಾಕಷ್ಟು ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಸರಕಾರಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಎಂದರು.
ಇದೇ ವೇಳೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಆರ್.ಎಂ. ಪುರಾಣಿಕಮಠ, ಎಂ.ಎಚ್. ಮನಗೂಳಿ, ಎಂ.ಎ. ಮುಜಾವರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ವೇಳೆ ದಲಿತ ಮುಖಂಡ ಚನ್ನಪ್ಪ ವಿಜಯಕರ್, ಯಲ್ಲಪ್ಪ ಚಲವಾದಿ, ಹರೀಶ ನಾಟಿಕರ, ಕಿರಿಯ ಎಂಜಿನಿಯರ್ ಎ.ಜಿ. ಗುಜರಿ, ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ಬಸನಗೌಡ, ಎಂ.ಎ. ಢವಳಗಿ, ಎ.ಬಿ.ಅಂಕಲಗಿ, ಆನಂದ ಆರೋಢ, ಬಿ.ವಿ.ಮಠ, ಜಿ.ಎಸ್.ಕಂಠಿ, ಐ.ಎಸ್.ಹಿರೇಮಠ, ಮಹಾಂತೇಶ ಬಿರಾದಾರ, ನಾಗಮ್ಮ ತಳವಾರ, ಶೈಲಾ ಡೊಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.