ಉಡುಪಿ: ಗಾಯಗೊಂಡ ಬಾವಲಿ, ಗರುಡ: ಚಿಕಿತ್ಸೆ
Team Udayavani, Aug 4, 2018, 1:22 PM IST
ಉಡುಪಿ: ವಿದ್ಯುತ್ ಸ್ಪರ್ಶಿಸಿ ಹಾರಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿ ಪತ್ತೆಯಾದ ಗರುಡ ಮತ್ತು ಬಾವಲಿಗಳನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಶುಕ್ರವಾರ ನಡೆದಿದೆ.
ನಗರದ ಜಾಮಿಯ ಮಸೀದಿ ಬಳಿ ವಿದ್ಯುತ್ ಕಂಬದ ತಂತಿಗೆ ರೆಕ್ಕೆ ಸ್ಪರ್ಶಗೊಂಡು ಗಂಡು ಬಾವಲಿ ನೆಲಕ್ಕೆ ಉರುಳಿತ್ತು ವಿದ್ಯುತ್ ಹರಿದು ರೆಕ್ಕೆಗಳು ಘಾಸಿಗೊಂಡಿದ್ದವು. ಮತ್ತೂಂದು ಘಟನೆಯಲ್ಲಿ ಬೈಲಕೆರೆಯಲ್ಲಿ ವಿದ್ಯುತ್ ತಂತಿಯನ್ನು ಗರುಡ ಸ್ಪರ್ಶಿಸಿ ಹಾರಲಾಗದ ಸ್ಥಿತಿಯಲ್ಲಿತ್ತು. ಗರುಡನನ್ನು ಹಿಡಿದು ಸ್ಥಳೀಯರಾದ ರವಿ ಬೈಲಕೆರೆ ಅವರು ನಿತ್ಯಾನಂದ ಒಳಕಾಡು ಅವರಿಗೆ ಹಸ್ತಾಂತರಿಸಿದರು. ಬಳಿಕ ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಆಚಾರ್ಯ ಸಾಸ್ತಾನ ಅವರು ಎರಡು ಪಕ್ಷಿಗಳನ್ನು ಆ್ಯಂಬುಲೆನ್ಸ್ ಮೂಲಕ ಉದ್ಯಾವರ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ದರು. ಪಶುತಜ್ಞ ಡಾ| ಸಂದೀಪ್ ಶೆಟ್ಟಿ ಸೂಕ್ತ ಚಿಕಿತ್ಸೆ ನೀಡಿದರು. ಅನಂತರ ಬಾವಲಿ, ಗರುಡವನ್ನು ಆದಿಉಡುಪಿಯಲ್ಲಿ ಇರುವ ಅರಣ್ಯ ಇಲಾಖೆ ಕಚೇರಿಗೆ ಸಾಗಿಸಿ ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದರು. ಗುಣ ಹೊಂದಿದ ಬಳಿಕ ಬಾವಲಿ, ಗರುಡವನ್ನು ಪ್ರಕೃತಿಯ ಮಡಿಲಿಗೆ ಬಿಡುತ್ತೇವೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾಗಿ ಸಾಮಾಜಿಕ ಕಾರ್ಯಕರ್ತರು ತಿಳಿಸಿ¨ªಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.