ಸಾರ್ಥಕತೆಯ ನಾಳೆಯ ಜೀವನಕ್ಕಾಗಿ ಕುಟುಂಬ ಯೋಜನೆಗಳ ಬಳಕೆ


Team Udayavani, Aug 5, 2018, 6:00 AM IST

family-planning.jpg

ಪ್ರತೀ ವರ್ಷ ಜುಲೈ 11ರಂದು ಪ್ರಪಂಚದಾದ್ಯಂತ ವಿಶ್ವ ಜನಸಂಖ್ಯೆ ದಿನವನ್ನಾಗಿ ಆಚರಿಸಲಾಗುತ್ತಿದೆ. 1987ರಲ್ಲಿ ಇದೇ ದಿನದಂದು ಪ್ರಪಂಚದ ಜನಸಂಖ್ಯೆ 500 ಕೋಟಿಗೆ ತಲುಪಿದ ದಿನ. ಈ ದಿನ ಜನರಲ್ಲಿ ಜನಸಂಖ್ಯೆ ಮತ್ತು ಜನಸಂಖ್ಯೆಯ ಅಸಮತೋಲನದಿಂದಾಗುವ ಪರಿಣಾಮಗಳನ್ನು ಜನರಿಗೆ ಅರಿವು ಮೂಡಿಸಲು ಪ್ರಯತ್ನ ಮಾಡಲಾಗುವುದು. ಕುಟುಂಬ ಯೋಜನೆಯೇ ಮಾನವ ಹಕ್ಕು ಎನ್ನುವುದು ಈ ವರ್ಷದ ಜನಸಂಖ್ಯೆಯ ದಿನಾಚರಣೆಯ ಘೋಷ ವಾಕ್ಯ ವಾಗಿದೆ. 

ಕ್ರಿ.ಶ. 1804ರಲ್ಲಿ 100 ಕೋಟಿಯಷ್ಟಿದ್ದ ಪ್ರಪಂಚದ ಜನಸಂಖ್ಯೆ 1999ರಲ್ಲಿ  600 ಕೋಟಿ ತಲುಪಿ 2011ರಲ್ಲಿ  700 ಕೋಟಿ ದಾಟಿದೆ. 1947ರಲ್ಲಿ ಅಂದಾಜು 35 ಕೋಟಿಯಷ್ಟಿದ್ದ ಭಾರತದ ಜನಸಂಖ್ಯೆ 1951ರ ಜನಗಣತಿಯಲ್ಲಿ  36 ಕೋಟಿ. 2011ರ ಜನಗಣತಿ ಪ್ರಕಾರ 121 ಕೋಟಿಗಿಂತ ಮಿಕ್ಕಿ ಬೆಳೆದಿದೆ. ಪ್ರಪಂಚದಲ್ಲಿ ಕೇವಲ 10 ದೇಶಗಳು. ಚೀನ, ಭಾರತ, ಯು.ಎಸ್‌.ಎ., ಇಂಡೋನೇಶಿಯ, ಬ್ರೆಜಿಲ್‌ ಪಾಕಿಸ್ಥಾನ, ನೈಜೀರಿಯಾ, ಬಾಂಗ್ಲಾದೇಶ, ರಷ್ಯಾ, ಮೆಕ್ಸಿಕೋ ಪ್ರಪಂಚದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿದೆ.

ಪ್ರಸ್ತುತ ಚೀನ 141 ಕೋಟಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಭಾರತ 135 ಕೋಟಿ ಜನಸಂಖ್ಯೆ ಹೊಂದಿದ್ದು 2ನೇ ಸ್ಥಾನದಲ್ಲಿದೆ. ಕಳೆದ 18 ವರ್ಷಗಳಲ್ಲಿ ಚೀನದ ಜನಸಂಖ್ಯೆ 11 ಶೇಕಡಾ ಬೆಳವಣಿಗೆ ಹೊಂದಿದ್ದರೆ ಭಾರತದ ಜನಸಂಖ್ಯೆ 34 ಶೇಕಡಾ ಬೆಳವಣಿಗೆಗೆ ಹೆಚ್ಚಳ ಕಂಡಿದೆ. ರಾಷ್ಟ್ರದ ಜನಸಂಖ್ಯೆಗೆ ಪ್ರತೀ ವರ್ಷ ಸುಮಾರು 2.7 ಕೋಟಿ (ಆಸ್ಟ್ರೇಲಿಯಾದ ಒಟ್ಟು ಜನಸಂಖ್ಯೆಗಿಂತ ಹೆಚ್ಚು) ಮಕ್ಕಳು ಸೇರ್ಪಡೆಯಾಗುತ್ತಿದ್ದಾರೆ. ಅದರಿಂದ 2022ರಲ್ಲಿ ಭಾರತದ ಜನಸಂಖ್ಯೆ ಚೀನಾದ ಜನಸಂಖ್ಯೆಯನ್ನು ಮೀರಿಸುವ ಅಂದಾಜಿದೆ. ದೇಶದಲ್ಲಿ ಸರಾಸರಿ ಪ್ರತೀ ಸೆಕೆಂಡಿಗೆ ಒಂದು ಮಗುವಿನ ಜನನವಾಗುತ್ತಿದ್ದು ಪ್ರಪಂಚದಲ್ಲಿಯೇ ಅತೀ ಹೆಚ್ಚು ಜನ ಸಂಪನ್ಮೂಲ ವ್ಯಾಪಿಸುವ ರಾಷ್ಟ್ರವಾಗಿದೆ.

ಭಾರತದ ಕೆಲವು ರಾಜ್ಯಗಳ ಜನಸಂಖ್ಯೆಯು ಕೆಲವು/ಹಲವು ದೇಶಗಳ ಜನಸಂಖ್ಯೆಗೆ ಸರಿಸಮಾನವಾಗಿದೆ. ಉತ್ತರ ಪ್ರದೇಶದ ಜನಸಂಖ್ಯೆ ಬ್ರೆಜಿಲ್‌ಗಿಂತ ಹೆಚ್ಚಿದೆ. ಮಹಾರಾಷ್ಟ್ರದ ಜನಸಂಖ್ಯೆ ಸರಿ ಸುಮಾರು ಜಪಾನ್‌ನಷ್ಟು , ಬಿಹಾರದ ಜನಸಂಖ್ಯೆ ಜರ್ಮನಿಗಿಂತ ತುಸು ಹೆಚ್ಚಿದೆ. ನೈಜಿರಿಯ, ಭಾರತ, ಮೆಕ್ಸಿಕೊ, ಬಾಂಗ್ಲಾದೇಶ ಕ್ರಮವಾಗಿ ಜನಸಂಖ್ಯೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯು ತ್ತಿರುವ ದೇಶಗಳಾಗಿವೆ. ನೆರೆಯ ಪುಟ್ಟದೇಶ ಬಾಂಗ್ಲಾದ ಜನಸಂಖ್ಯೆ ರಷ್ಯಾದ ಜನಸಂಖ್ಯೆಗಿಂತ ಸುಮಾರು 2 ಕೋಟಿಗೂ ಮಿಗಿಲಿದೆ.ಇನ್ನೊಂದೆಡೆಯಲ್ಲಿ ಜಪಾನ್‌, ರಷ್ಯಾ ಮತ್ತು ಯುರೋಪಿನ ದೇಶಗಳ ಜನಸಂಖ್ಯೆಯಲ್ಲಿ ಕುಸಿತ ಕಂಡುಬರುತ್ತಿದೆ.

ಇದರಿಂದಾಗಿ ಮುಂದೆ ಕೆಲಸ ಮಾಡುವ ಯುವಶಕ್ತಿ ಕಡಿಮೆಯಾಗಿ 60ಕ್ಕೂ ಹೆಚ್ಚು ಪ್ರಾಯದವರ ಜನಸಂಖ್ಯೆ ಪ್ರಮಾಣ ಹೆಚ್ಚಾಗಿ ದೇಶದಲ್ಲಿ ದುಡಿಯುವವರ ಪ್ರಮಾಣ ಕಡಿಮೆಯಾಗಲಿದೆ. ಇದಕ್ಕೆಲ್ಲ ಮುಖ್ಯ ಕಾರಣ ದೇಶಗಳಲ್ಲಿ ಜನಸಂಖ್ಯೆ ಬೆಳವಣಿಗೆ ಸ್ಥಳಾಂತರ ಮಟ್ಟ  2.1ರಲ್ಲಿ ಇಲ್ಲದೇ ಇರುವುದು. ಈ ಸ್ಥಳಾಂತರ ಜನಸಂಖ್ಯೆ ಬೆಳವಣಿಗೆ ಮಟ್ಟ ಎಂದರೆ ಒಂದು ದೇಶದಲ್ಲಿ ಪ್ರತಿವರ್ಷ ಎಷ್ಟು ಜನ ಮರಣ ಹೊಂದುವರೊ ಅಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಮಟ್ಟದಲ್ಲಿ ಜನನ ಪ್ರಮಾಣ ಕಾಯ್ದುಕೊಳ್ಳುವುದು ಭಾರತದಲ್ಲಿ ಈ 1950ರಲ್ಲಿ  ಸರಿ ಸುಮಾರು 6 ಆಗಿದ್ದು (ಸರಾಸರಿ ಒಬ್ಬ ಮಹಿಳೆಗೆ 6 ಮಕ್ಕಳು) ಈಗ 2.3ರಷ್ಟಿದ್ದು ಇನ್ನೂ ದೇಶದ ಜನಸಂಖ್ಯೆಯನ್ನು ಸ್ಥಿರಗೊಳಿಸಲು ಬೇಕಾದ 2.1 ಸ್ಥಳಾಂತರ ಮಟ್ಟಕ್ಕೆ ತಲುಪಿಲ್ಲ. ದೇಶದ 640 ಜಿಲ್ಲೆಗಳಲ್ಲಿ  145 ಜಿಲ್ಲೆಗಳ ಒಟ್ಟು ಫ‌ಲವತ್ತತೆಯ ಪ್ರಮಾಣ (ಖಊR) ಸರಾಸರಿ 3ಕ್ಕಿಂತ ಹೆಚ್ಚಿದೆ. ರಾಷ್ಟ್ರದ ಜನಸಂಖ್ಯೆಯ ಶೇ. 40ರಷ್ಟು ಜನಸಂಖ್ಯೆ ಈ 145 ಜಿಲ್ಲೆಗಳಲ್ಲಿದೆ. ಜಪಾನ್‌, ರಷ್ಯಾ, ಚೀನ, ಬ್ರೆಜಿಲ್‌ಗ‌ಳಲ್ಲಿ  ಈ ಮಟ್ಟ 2ಕ್ಕಿಂತ ಕಡಿಮೆ ಇದ್ದರೆ ನೈಜಿರಿಯ, ಸುಮಾಲಿಯ, ಪಾಕಿಸ್ಥಾನಗಳಲ್ಲಿ  3ಕ್ಕಿಂತ ಹೆಚ್ಚಿದೆ. 

ನಮ್ಮ ದೇಶದಲ್ಲಿ ತೀವ್ರಗತಿಯಲ್ಲಿ ಜನಸಂಖ್ಯೆ ಬೆಳೆಯುವುದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಕಾರಣಗಳಲ್ಲದೇ ಕುಟುಂಬ ಕಲ್ಯಾಣ ಸೇವೆಗಳ ಬಗ್ಗೆ  ಸರಿಯಾದ ಮಾಹಿತಿ ಇಲ್ಲದೇ ಇರುವುದು ಸಹ ಆಗಿದೆ. ಕುಟುಂಬ ಕಲ್ಯಾಣ ಯೋಜನೆಗಳು  ಕೇವಲ ಸಂತಾನ ತಡೆಗಟ್ಟುವ ಕಾರ್ಯಕ್ರಮ ಎನ್ನುವ ತಪ್ಪು ಕಲ್ಪನೆ ಸಹ ಜನರಲ್ಲಿದೆ. ಕುಟುಂಬ ಕಲ್ಯಾಣ ಸೇವೆಗಳು ಮದುವೆಗೆ ಮುಂಚೆನೆ ಪ್ರಾರಂಭವಾಗುತ್ತವೆ. ಮದುವೆಯಾಗುವ ಗಂಡು ಹೆಣ್ಣಿನಲ್ಲಿ ಇರಬಹುದಾದ ಕಾಯಿಲೆಗಳು ಪರೀಕ್ಷೆ ಮತ್ತು ಅವರಿಂದ ಆನುವಂಶಿಕವಾಗಿ ಮಕ್ಕಳಿಗೆ ಬರಬಹುದಾದ ಅಂಶಗಳ ತುಲನೆ, ಲೈಂಗಿಕ ಶಿಕ್ಷಣ ಸಂತಾನೋತ್ಪತ್ತಿ ಆರೋಗ್ಯ, ಲೈಂಗಿಕ ಸೋಂಕುಗಳ ಬಗ್ಗೆ ಅರಿವು, ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವ ವಿಧಾನಗಳು ಮಕ್ಕಳಾಗದೇ ಇರುವುದಕ್ಕೆ ಚಿಕಿತ್ಸೆ. ಗಂಡು ಮಗು ಮಾತ್ರ ಸಾಕು ಎನ್ನುವ  ಮನಃಸ್ಥಿತಿ ಬದಲಿಸುವ, ಮದುವೆ ಆಗದೇ ಇರುವ ತಾಯಂದಿರಿಗೆ ಇರುವ ಸೇವೆಗಳು ಸಹ ಒಳಗೊಂಡಿವೆ.

ಈಗ ನಮ್ಮ ಸಮಾಜದಲ್ಲಿ  ಕಂಡುಬರುವ ಪ್ರಮುಖ ವಿರೋಧಾವಾಸಗಳೆಂದರೆ – ಕೆಲವು ಸಮುದಾಯಗಳಲ್ಲಿ ಮಹಿಳೆ 18 ವರ್ಷಕ್ಕಿಂತ ಮೊದಲೇ ಮದುವೆ ಆಗುವುದು ಹಾಗೂ ಅತೀ ಕಡಿಮೆ ಅಂತರದಲ್ಲಿ ಸರಾಸರಿ 5-6 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವಂಥದು. ಇನ್ನೊಂದೆಡೆ ಹೆಚ್ಚು ವಿದ್ಯಾಭ್ಯಾಸ, ಕಚೆೇರಿ ಕೆಲಸ ಮಾಡುವ ಮಹಿಳೆಯರು 28-30 ವರ್ಷಗಳು ಕಳೆದರೂ ಕೆಲಸ, ಕುಟುಂಬ ಒತ್ತಡಗಳಿಂದ ಮದುವೆ – ಮಕ್ಕಳು ಆಗದೇ ಇರುವುದು ಹಾಗೂ 30 ವರ್ಷಗಳು ನಂತರ ಗರ್ಭಿಣಿ ಮತ್ತು ಮಕ್ಕಳಿಗೆ ಜನನ ನೀಡುವುದು, ಅಂತಹ ಗರ್ಭಿಣಿಯನ್ನು  ಹಾಗೂ ಮುಂದೆ ಹುಟ್ಟಿದ ಅಂತಹ ಮಕ್ಕಳಿಗೆ ಸಹ ಆರೋಗ್ಯ ಸಂಬಂಧ ತೊಂದರೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರಬಹುದು. ಮಹಿಳೆಗೆ ಮಕ್ಕಳನ್ನು ಪಡೆಯಲು 24ರಿಂದ 30 ವರ್ಷಗಳವರೆಗೆ ಸೂಕ್ತ ಕಾಲ ಹಾಗೂ 2 ಮಕ್ಕಳ ನಡುವೆ ಕನಿಷ್ಠ 3 ವರ್ಷಗಳ ಅಂತರ ನೀಡುವುದು ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಲ್ಲಿ ಅತೀ ಅಗತ್ಯವಾದುದು.

ಇತ್ತೀಚೆಗೆ ದಂಪತಿಗಳುಅಳವಡಿಸಿಕೊಳ್ಳುತ್ತಿರುವುದು ಸಹ ಆತಂಕದ ವಿಷಯ. ಗಂಡು ಮಗುವಾದರೂ ಹೆಣ್ಣು ಮಗು ಆದರೂ ಸಹ ಒಂದೇ ಮಗುವಿನ ನಂತರ ಸಂತಾನ ನಿಯಂತ್ರಣಕ್ಕೊಳಪಡುವುದು ಇದರಿಂದಾಗಿ ಸಮಾಜದಲ್ಲಿ  ಲಿಂಗಾನುಪಾತ ತಾರತಮ್ಯಗೊಳ್ಳಲಿದೆ.

ಈಗಾಗಲೇ ದೇಶದಲ್ಲಿ    ಜನಿಸುವ ಪ್ರತಿ ಸಾವಿರ ಗಂಡು ಮಗುವಿಗೆ ಕೇವಲ 919 ಹೆಣ್ಣು ಮಗು ಹುಟ್ಟುತ್ತಿವೆ. ಕರ್ನಾಟಕದಲ್ಲಿ ಇದು ಕೇವಲ 910 ಇದೆ. ಇದು ಮುಂದೆ ಸಮಾಜದಲ್ಲಿ  ಅರಾಜಕತೆಗೆ ಕಾರಣವಾಗಬಹುದು. ನಮ್ಮ ದೇಶದಲ್ಲಿ  ಪ್ರತಿ ವರ್ಷ ಸರಿಸುಮಾರು 3 ಕೋಟಿ ಮಹಿಳೆಯರು ಗರ್ಭಿಣಿಯಾಗುತ್ತಿದ್ದು ಸಮೀಕ್ಷೆಗಳ ಪ್ರಕಾರ 10-20% ಗರ್ಭಧಾರಣೆ. ಅವರಿಗೆ ಕುಟುಂಬ ನಿಯಂತ್ರಣ ಸಾಧನಗಳ ಮಾಹಿತಿ ಇಲ್ಲದೇ ಇರುವುದು ಅಥವಾ ಅಂತಹ ಸಾಧನಗಳು ಕೈಗೆ ಸಿಗದೇ ಇರುವುದರಿಂದಾಗಿಯೋ ಅಥವಾ ಅಂತಹ ಸಾಧನೆಗಳ ವಿಫ‌ಲತೆಯಿಂದ ಆಗಿರುವುದು. ಪ್ರತೀ ದಿನ ನಮ್ಮ ದೇಶದಲ್ಲಿ 10 ಅಂತಹ ಮಹಿಳೆಯರು ಬೇಡವಾದ ಗರ್ಭವನ್ನು ಅವೈಜ್ಞಾನಿಕ ವಿಧವಾದ ಗರ್ಭಪಾತ ಮಾಡಿಸಿಕೊಳ್ಳುವಾಗ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಪ್ರತೀ ಮಹಿಳೆಗೆ ಕುಟುಂಬ ನಿಯಂತ್ರಣ ಸಾಧನಗಳ ಬಗ್ಗೆ ಅರಿವಿರುವುದು ಅತೀ ಆವಶ್ಯಕ. ಈ ಎಲ್ಲ ಕುಟುಂಬ ನಿಯಂತ್ರಣ ಸಾಧನಗಳು ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಉಪಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ.
 
ಇವುಗಳಲ್ಲಿ ಮುಖ್ಯವಾದುದು 
ಕೆಳಗಿನಂತಿವೆ.
1. Urine prognancy test-
ಇದು ಅತೀ ಶೀಘ್ರವಾಗಿ ಆಶಾ ಕಾರ್ಯಕರ್ತರು ಜನರ ಮನೆ ಬಾಗಿಲಿನಲ್ಲಿ ಮಾಡುವ ಗರ್ಭಿಣಿ ಪರೀಕ್ಷೆ . ಮಹಿಳೆಗೆ ತಿಂಗಳ ಪಿರಿಯಡ್ಸ್‌  ನಿಂತ ಕೇವಲ 1 ವಾರದೊಳಗೆ ಈ ಮೂತ್ರ ಪರೀಕ್ಷೆಯ ಮೂಲಕ ಮಹಿಳೆ ಗರ್ಭಿಣಿಯಾಗಿರುವುದನ್ನು ಖಚಿತ ಪಡಿಸಿಕೊಳ್ಳಬಹುದು.

2.E-Pills – ಈ ತುರ್ತು ಗರ್ಭ ತಡೆ ಮಾತ್ರೆಗಳನ್ನು ಸಹ ಆಶಾ ಕಾರ್ಯಕರ್ತರು ಅಗತ್ಯ ಬಿದ್ದ ದಂಪತಿಗಳಿಗೆ ಸರಬರಾಜು ಮಾಡುತ್ತಾರೆ. ಅಸುರಕ್ಷಿತ ಲೈಂಗಿಕ ಕ್ರಿಯೆ (Unprotected sex) ಆದ 72 ಗಂಟೆ ಒಳಗೆ ಈ ಮಾತ್ರೆಗಳನ್ನು  ವೈದ್ಯರ ಸಲಹೆಯಂತೆ ಸೇವಿಸಿದರೆ ಗರ್ಭಧಾರಣೆ ತಡೆಯಬಹುದು.

3. Condoms-ಈ ಸಾಧನಗಳು ಆಶಾ ಕಾರ್ಯಕರ್ತರಲ್ಲಿ ಹಾಗೂ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಜನನ ನಿಯಂತ್ರಣ ಹಾಗೂ ಲೈಂಗಿಕ  ರೋಗಗಳ ತಡೆಗಟ್ಟುವುದಕ್ಕಾಗಿ ಉಚಿತವಾಗಿ ದೊರೆಯುತ್ತವೆ.

4. Oral Pills- ದಿನಕ್ಕೊಮ್ಮೆ  (mala – D) ಅಥವಾ ವಾರಕ್ಕೊಮ್ಮೆ  (Chaya) ಸಂತಾನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಈ ಮಾತ್ರೆಗಳನ್ನು ವೈದ್ಯರಿಂದ ಪರೀಕ್ಷಿಸಿ ಪ್ರಾರಂಭಿಸಬೇಕು. ಮುಂದೆ ಈ ಮಾತ್ರೆಗಳನ್ನು  ಪ್ರತೀ ತಿಂಗಳು ಗರ್ಭಧಾರಣೆ ಬೇಡದೆ ಇರುವವರಿಗೆ ಆಶಾ ಕಾರ್ಯಕರ್ತರಿಂದ ಪಡೆದು ತೆಗೆದುಕೊಳ್ಳಬಹುದು.

5. ANTHRA- ಈ ಒಂದು ಗರ್ಭಧಾರಣೆ ತಡೆಯುವ ಸೂಜಿ ಮದ್ದು  (injection) 3 ತಿಂಗಳವರೆಗೆ ಗರ್ಭಧಾರಣೆಯಿಂದ ರಕ್ಷಣೆ ನೀಡುವುದು. ಪ್ರತೀ 3 ತಿಂಗಳಿಗೊಮ್ಮೆ ವೈದ್ಯರ ಸಲಹೆಯಂತೆ ತೆಗೆದುಕೊಳ್ಳುವುದು ಉತ್ತಮ.

6.PPIUCD-ಪ್ರಸವ ಅನಂತರ ಎರಡು ಗಂಟೆ ಒಳಗೆ ಅಳವಡಿಸುವ ವಂಕಿಧಾರಣೆ. ಇದು 5 ವರ್ಷಗಳಿಂದ 10 ವರ್ಷಗಳವರೆಗೂ ವೈದ್ಯರ ನಿಗದಿತ ತಪಾಸಣೆಯೊಂದಿಗೆ ಗರ್ಭತಡೆಗೆ ಬಳಸಬಹುದು.

7. IUCD- ವಂಕಿಧಾರಣೆ ಯಾವುದೇ ತಿಂಗಳು ಮಹಿಳೆಯ ಪೀರೇಡ್ಸ್‌ನ 5ನೇ ದಿನದಿಂದ ವೈದ್ಯರ ಸಲಹೆಯಂತೆ ಅಳವಡಿಸುವಂಥದ್ದು. ಇದು 3ರಿಂದ 5 ವರ್ಷಗಳ ವರೆಗೆ ಗರ್ಭಧಾರಣೆ ತಡೆಯಬಹುದು.

8. ಶಾಶ್ವತ ವ್ಯವಸ್ಥೆಗಳಾದ ಸ್ತ್ರೀಯರಿಗೆ 
ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮತ್ತು ಟ್ಯುಬೆಕ್ಟಮಿ, ಪುರುಷರಿಗೆ ವ್ಯಾಸೆಕ್ಟಮಿ.ಈ ಎಲ್ಲ ಜನಸಂಖ್ಯಾ ನಿಯಂತ್ರಣ 
ಸಲಹೆ ಸಲಕರಣೆಗಳನ್ನು ಪ್ರತಿಯೊಬ್ಬರು ಅರಿತು ಜನಸಂಖ್ಯಾ ನಿಯಂತ್ರಣದ ಸೂತ್ರಗಳಂತೆ ಕೇವಲ 2 ಮಕ್ಕಳು 3 ವರ್ಷಗಳ ಅಂತರದಲ್ಲಿ 30 ವರ್ಷಗಳ ಒಳಗೆ ಪಡೆದು ಹೆಚ್ಚು ಜನಸಂಖ್ಯೆಯಿಂದ ಸಮಾಜಕ್ಕೆ , ದೇಶಕ್ಕೆ ಆಗುವ ಆಹಾರ, ವಸತಿ, ಶಿಕ್ಷಣ, ನಿರುದ್ಯೋಗ ಸಮಸ್ಯೆಗಳನ್ನು ಸಂಪನ್ಮೂಲಗಳ ಕೊರತೆಗಳನ್ನು ನೀಗಿಸಬಹುದು. 

ಸುರಕ್ಷಿತ ಹಾಗೂ ಪರಿಣಾಮಕಾರಿ ಗರ್ಭ ನಿರೋಧಕಗಳ ಬಳಕೆಯಿಂದ ಆಗುವ ಲಾಭಗಳು ಅನೇಕ. ಕಡಿಮೆ ಮರಣದರ (Death rate) ಹೊಂದುವುದು ದೇಶದ ಆರೋಗ್ಯ ಸ್ಥಿತಿಯನ್ನು ಬಿಂಬಿಸಿದರೆ ಜನನ ದರ (Birth rate) ಕಡಿಮೆ ಕ್ರಮಬದ್ಧ ಮಾಡುವುದು ಪ್ರತೀ ನಾಗರಿಕರ ಪ್ರತೀ ಸರಕಾರದ ಗುರಿಯಾಗಿರಬೇಕು.

– ಡಾ| ಅಶ್ವಿ‌ನಿ ಕುಮಾರ ಗೋಪಾಡಿ, 
ಅಡಿಶನಲ್‌ ಪ್ರೊಫೆಸರ್‌
ಕಮ್ಯುನಿಟಿ ಮೆಡಿಸಿನ್‌ ಕೆ.ಎಂ.ಸಿ. ಮಣಿಪಾಲ

ಟಾಪ್ ನ್ಯೂಸ್

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.