ಪೊಲೀಸ್ ಪೇದೆಗಳಿಗೂ ಇನ್ನು ಪೀಕ್ ಕ್ಯಾಪ್!
Team Udayavani, Aug 5, 2018, 6:00 AM IST
ಬೆಂಗಳೂರು: ರಾಜ್ಯ ಪೊಲೀಸ್ ಕ್ಯಾಪ್‌ನ ವಿನ್ಯಾಸ ಶೀಘ್ರದಲ್ಲಿಯೇ ಬದಲಾಗಲಿದೆ.ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪೇದೆಗಳಿಗೆ ದಶಕಗಳ ಹಳೆಯ ಕ್ಯಾಪ್ ಬದಲಾಗಿ ಪೀಕ್-ಕ್ಯಾಪ್ ಬಳಕೆ ಮಾಡುವ ಬಗ್ಗೆ ಸಿದ್ಧತೆ ನಡೆದಿದೆ. ಕ್ಯಾಪ್ ಬದಲಾವಣೆ ಆಕರ್ಷಣೆ ಹೆಚ್ಚಿಸುವುದಷ್ಟೇ ಅಲ್ಲದೆ, ಪೇದೆಗಳಿಗೂ ಅಧಿಕಾರಿ ಶ್ರೇಣಿಯ ಸ್ಥಾನ ಮಾನ ನೀಡುವುದು ಇಲಾಖೆಯ ಮುಖ್ಯ ಉದ್ದೇಶ ಎಂದು ಹೇಳಲಾಗಿದೆ.
ಶನಿವಾರ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೇದೆಗಳ ಕ್ಯಾಪ್ ಹಾಗೂ ಸಮವಸ್ತ್ರ ಬದಲಾವಣೆ ಕುರಿತು ಗಂಭೀರ ಚರ್ಚೆ ನಡೆದಿದೆ.
ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಧರಿಸುವ ಮಾದರಿಯಲ್ಲಿ ರಾಜ್ಯದ ಸಾವಿರಾರು ಮಂದಿ ಪೇದೆಗಳು ಇನ್ಮುಂದೆ ಪಿ-ಕ್ಯಾಪ್ ಧರಿಸಲಿದ್ದಾರೆ. ಸೌÉಚ್ ಕ್ಯಾಪ್‌ಧರಿಸುವುದರಿಂದ ಕಾನೂನು ಸುವ್ಯವಸ್ಥೆ ಪಾಲನೆ ಸಂದರ್ಭದಲ್ಲಿ ಮತ್ತು ಪೊಲೀಸ್ ಕಾರ್ಯಾಚರಣೆ ವೇಳೆ ಅಡಚಣೆ ಉಂಟಾಗುತ್ತದೆ. ಇನ್ನೊಂದೆಡೆ ಹಾಲಿ ಟೋಪಿ ವಿನ್ಯಾಸ ಪೊಲೀಸ್ ಸಿಬ್ಬಂದಿ ಆರೋಗ್ಯಕ್ಕೆ ಪೂರಕವಾಗಿಲ್ಲ, ಇದರ ಭಾರ ಕುತ್ತಿಗೆ ನೋವು, ತಲೆ ನೋವಿಗೆ ಕಾರಣವಾಗುತ್ತಿದೆ ಎನ್ನುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಇತ್ತೀಚೆಗೆ ರಾಜ್ಯ ಪೊಲೀಸ್ ಇಲಾಖೆಗೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿದ್ದರು.
ಈ ಸಂಬಂಧ ತಮಿಳುನಾಡು ಪೊಲೀಸ್ ಇಲಾಖೆ ಮಾದರಿಯಲ್ಲಿ ಪೀಕ್-ಕ್ಯಾಪ್ ಬಳಕೆ ಕುರಿತು ಚಿಂತನೆ ನಡೆಸಲಾಗಿತ್ತು. ಇದನ್ನು ಜಾರಿಗೆ ತರಲು ಪ್ರತ್ಯೇಕ ಸಮಿತಿ ಕೂಡ ರಚಿಸಲಾಗಿದೆ. ಜತೆಗೆ ಈಗಿರುವ ಸಮವಸ್ತ್ರಗಳಿಗಿಂತ ಗುಣಮಟ್ಟವುಳ್ಳ ಪೊಲೀಸ್ ಸಮವಸ್ತ್ರಗಳನ್ನು ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಜ್ಯ ಗೃಹ ಇಲಾಖೆಗೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಾಗುವುದು. ಎಲ್ಲ ಪ್ರಕ್ರಿಯೆಗಳೂ ಮುಗಿದ ಬಳಿಕ ಪೊಲೀಸರ ಕ್ಯಾಪ್ ಬದಲಾಗಲಿದೆ.
ಈ ರೀತಿಯ ಪ್ರಸ್ತಾವನೆ ಈ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎ.ಆರ್.ನಿಜಾಮುದ್ದೀನ್ ಅವರ ಕಾಲದಲ್ಲೇ ನಡೆದಿತ್ತು. ಆ ಕಾಲದಲ್ಲಿ ಪೇದೆಗಳು ಟರ್ಬನ್ ಎಂಬ ಹೆಸರಿನ ಕ್ಯಾಪ್ ಧರಿಸುತ್ತಿದ್ದರು. ನಂತರ ಬಾಬಿ ಕ್ಯಾಪ್, ಅನಂತರ ಎಲ್ ಮಾದರಿಯ (ಹೆಚ್ಚಾಗಿ ಬ್ರಿಟಿಷ್ ಅಧಿಕಾರಿಗಳು ಬಳಸುವ ಶೈಲಿಯ) ಸೌÉಚ್ ಕ್ಯಾಪ್ ಜಾರಿಗೆ ಬಂದಿತ್ತು.
“ಪೇದೆ’ ಎಂದು ಕರೆಯಬಾರದು
ಈ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಡಾ. ಅಜಯ್ ಕುಮಾರ್ ಸಿಂಗ್ ಅವರು ಪೊಲೀಸ್ ಪೇದೆಗಳನ್ನು “ಪೇದೆ’ ಎಂದು ಕರೆಯಬಾರದು. ಅದು ಸಾಮಾಜಿಕವಾಗಿ ಅವರ ಗೌರವಕ್ಕೆ ಚ್ಯುತಿ ಉಂಟು ಮಾಡುತ್ತದೆ ಎಂದು ಸುತ್ತೋಲೆ ಹೊರಡಿಸಿದ್ದರು. 80 ಸಾವಿರಕ್ಕೂ ಹೆಚ್ಚು ಪೊಲೀಸ್ ಕಾನ್‌ಸ್ಟೆàಬಲ್‌ಗಳನ್ನು ಗೌರವಯುತವಾಗಿ ಕಾಣಿಸುವುದು ಅವರ ಉದ್ದೇಶವಾಗಿತ್ತು. ಹಿಂದಿನ ಪೊಲೀಸ್ ಮಹಾ ನಿರೀಕ್ಷಕರಾಗಿದ್ದ ಯು. ನಿಸಾರ್ ಅಹಮದ್ ಅವರೂ ಪೊಲೀಸ್ ಪೇದೆಗಳ ಸಮವಸ್ತ್ರ ಮತ್ತು ಕ್ಯಾಪ್ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕೆಂದು ಆಗಿನ ಪೊಲೀಸ್ ಕಲ್ಯಾಣ ಘಟಕದ ಮುಖ್ಯಸ್ಥ ಕೆಂಪಯ್ಯ ಅವರಿಗೆ ಮನವಿ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.