ಅತ್ಯಾಧುನಿಕ ಹೊಸಎಕ್ಸ್ರೇ ಕಾರ್ಯಾರಂಭ
Team Udayavani, Aug 5, 2018, 11:31 AM IST
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಕಂಪ್ಯೂಟರ್ ಎಕ್ಸ್ರೇ ಯಂತ್ರ ಬಂದಿದ್ದರೂ ಫಿಲ್ಮ್ ಶೀಟ್ ಇಲ್ಲದೆ ಹಳೆ ಮೆಷಿನ್ನಲ್ಲೇ ಎಕ್ಸ್ರೇ ಮಾಡಲಾ ಗುತ್ತಿತ್ತು. ಆದರೆ ಇದೀಗ ಫಿಲ್ಮ್ ಶೀಟ್ ಆಸ್ಪತ್ರೆಗೆ ಬಂದಿದ್ದು, ಶನಿವಾರದಿಂದ ಹೊಸ ಮೆಷಿನ್ನಲ್ಲಿ ಎಕ್ಸ್ರೇ ಆರಂಭಗೊಂಡಿದೆ.
ಹಳೆ ಮೆಷಿನ್ನಲ್ಲೇ ಎಕ್ಸ್ರೇ ಮಾಡಲಾಗುತ್ತಿದೆ ಎಂಬ ರೋಗಿಗಳ ದೂರಿನ ಕುರಿತು ಜು. 23ರ ಉದಯವಾಣಿ ಸುದಿನದಲ್ಲಿ `ಫಿಲ್ಮ್ ಶೀಟ್ ನೆಪ: ಹೊಸತಿದ್ದರೂ ಇನ್ನೂ ಹಳೆ ಯಂತ್ರದಲ್ಲೇ ಎಕ್ಸ್ರೇ’ ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ಜತೆಗೆ ಶಾಸಕ ಹರೀಶ್ ಪೂಂಜ ಅವರು ಈ ವಿಚಾರದಲ್ಲಿ ಕೆಡಿಪಿ ಸಭೆಯಲ್ಲೂ ತಾಲೂಕು ವೈದ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಹಳೆ ಮೆಷಿನ್ನಲ್ಲಿ ಎಕ್ಸ್ರೇ ತೆಗೆಯುವುದು ವಿಳಂಬವಾಗುವ ಜತೆಗೆ ಎಕ್ಸ್ರೇ ಶೀಟಿನ ಗುಣಮಟ್ಟವೂ ಉತ್ತಮವಾಗಿರಲಿಲ್ಲ. . ಜತೆಗೆ ರೋಗಿಗಳು ಎಕ್ಸ್ರೇಗೆ ಕಾದು, ವೈದ್ಯರೂ ಸಿಗದಂತಾಗುತಿತ್ತು. ಈ ಕುರಿತು ರೋಗಿಗಳು ಶಾಸಕರು ಸೇರಿದಂತೆ ಸಂಬಂಧ ಪಟ್ಟವರಿಗೆ ದೂರು ನೀಡಿದ್ದರು. ಹೀಗಾಗಿ ಶಾಸಕರು ವೈದ್ಯಾಧಿಕಾರಿ ಅವರನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದ್ದರು.
ಆಸ್ಪತ್ರೆಯ ವೈದ್ಯಾಧಿಕಾರಿಯವರು ಹೊಸ ಮೆಷಿನ್ನ ಫಿಲ್ಮ್ ಶೀಟ್ಗೆ ಅನುದಾನ ಹೆಚ್ಚು ಬೇಕಾಗುತ್ತದೆ ಎಂಬ ನೆಪವೊಡ್ಡಿ ಹಳೆ ಮೆಷಿನನ್ನೇ ಉಪಯೋಗಿಸುವಂತೆ ಸೂಚಿಸಿದ್ದರು. ಆದರೆ ಶನಿವಾರ ಹೊಸ ಮೆಷಿನ್ನ ಫಿಲ್ಮ್ ಶೀಟ್ ಬಂದಿದ್ದು, ಇನ್ನು ಮೂರು ತಿಂಗಳು ಹೊಸ ಮೆಷಿನ್ನಲ್ಲೇ ಎಕ್ಸ್ರೇ ತೆಗೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.