ಸಿವಿಲ್‌ಗೆ ಪರಿಹಾರ ಅಧಿಕಾರ
Team Udayavani, Aug 5, 2018, 3:07 PM IST
ಮುಸ್ಲಿಂ ಮಹಿಳೆಯ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು
ತೀರ್ಪಿನ ವಿರುದ್ಧ ನಿವಾಸಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಉಚ್ಚ ನ್ಯಾಯಾಲಯ
|
ಹೊಸದಿಲ್ಲಿ: ತನ್ನ ಪತಿಯಿಂದ ವಿಚ್ಛೇದನ ಪಡೆಯಲಿಚ್ಛಿಸುವ ಯಾವುದೇ ಮುಸ್ಲಿಂ ಮಹಿಳೆಗೆ ಕಾನೂನು ಪ್ರಕಾರ ಸಲ್ಲಬೇಕಾದ ಜೀವನಾಂಶ ಹಾಗೂ ಇತರ ವೈವಾಹಿಕ ಪರಿಹಾರಗಳ ಬಗ್ಗೆ ತೀರ್ಪು ನೀಡುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೂ ಇರುತ್ತದೆ ಎಂಬ ಮಹತ್ವದ ಆದೇಶವನ್ನು ಬಾಂಬೈ ಹೈಕೋರ್ಟ್ ಶನಿವಾರ ನೀಡಿದೆ.
ನವಿ ಮುಂಬೈನ ಮಹಿಳೆಯೊಬ್ಬರು, ತಮಗೆ ಕಿರುಕುಳ ನೀಡುತ್ತಿರುವ ಪತಿಯಿಂದ ವಿಚ್ಛೇದನ ಬೇಕೆಂದು ಸಿವಿಲ್ ನ್ಯಾಯಾ ಲಯದ ಮೆಟ್ಟಿಲೇರಿದ್ದರು. ಪ್ರಕರಣದ ತೀರ್ಪಿನಲ್ಲಿ ವಿವಾಹದ ವೇಳೆ ಪತ್ನಿಯಿಂದ ಪತಿಗೆ ಸಂದಾಯವಾಗಿದ್ದ ಮೆಹರ್ ಮೊತ್ತ ಹಿಂದಿರುಗಿಸಬೇಕು, ಆಕೆಯ ಇಬ್ಬರು ಮಕ್ಕಳ ಪೋಷಣೆಗಾಗಿ ಮಾಸಿಕ ಜೀವನಾಂಶ ಕೊಡಬೇಕು ಹಾಗೂ ಪತಿ ಆಸ್ತಿಯಲ್ಲಿ ಶೇ.50ರ ಪಾಲನ್ನು ಪತ್ನಿಗೆ ನೀಡಬೇಕೆಂದು ನ್ಯಾಯಾಲಯ ತೀರ್ಪಿತ್ತಿತ್ತು.
ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ, ಸಿವಿಲ್ ನ್ಯಾಯಾಲಯವು, ಮಹಿಳೆಯ ಮೇಲಿನ ಗೃಹ ದೌರ್ಜನ್ಯ ತಡೆ ಕಾಯ್ದೆ ಹಾಗೂ ಮುಸ್ಲಿಂ ಮಹಿಳೆಯರ ಸುರûಾ ಕಾಯ್ದೆಯಡಿ ಈ ಪರಿಹಾರಕ್ಕೆ ಆದೇಶಿಸಿದ್ದು, ಈ ಕಾಯ್ದೆಗಳು 1939ರ ಮುಸ್ಲಿಂ ವಿವಾಹ ವಿಚ್ಛೇದನ ಕಾಯ್ದೆಯಲ್ಲಿ ಇಲ್ಲ. ಅಲ್ಲದೆ, ವಿಚ್ಛೇದನ ಪ್ರಕರಣಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಥವಾ ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಾತ್ರವೇ ನಿರ್ಧಾರವಾಗಬೇಕಿರುವುದರಿಂದ, ಸಿವಿಲ್ ನ್ಯಾಯಾಲಯ ತನ್ನ ವ್ಯಾಪ್ತಿ ಮೀರಿ ನ್ಯಾಯ ತೀರ್ಮಾನ ಮಾಡಿದೆ ಎಂದು ವಾದಿಸಿದ್ದ. ಆದರೆ, ಹೈಕೋರ್ಟ್ ವ್ಯಾಪ್ತಿ ಬಗೆಗಿನ ಆಕ್ಷೇಪ ಹಿಂದೆಯೇ ಎತ್ತಬೇಕಿತ್ತು ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.