ಜಂಕ್ಷನ್ ಗಳಲ್ಲಿ ಭಿಕ್ಷುಕರ ಹಾವಳಿ ನಿಯಂತ್ರಣವಾಗಲಿ
Team Udayavani, Aug 5, 2018, 3:16 PM IST
ಮಂಗಳೂರು ನಗರದ ಜ್ಯೋತಿ, ಪಿವಿಎಸ್, ಲಾಲ್‌ಬಾಗ್ ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್ ಬಿದ್ದರೆ ಸಾಕು ವಾಹನ ಸವಾರರು ತಲೆಗೆ ಕೈ ಹಿಡಿದುಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಚಿಕ್ಕ ಮಗುವನ್ನು ಕಂಕುಳಲ್ಲಿ ಹಿಡಿದು ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಸಿಗ್ನಲ್‌ಗಳಲ್ಲಿ ಮಾತ್ರವಲ್ಲದೆ ನಗರದ ಪ್ರಮುಖ ಭಾಗಗಳಾದ ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ, ಕಂಕನಾಡಿಯಲ್ಲೂ ದಿನನಿತ್ಯ ಹಲವು ಮಂದಿ ಭಿಕ್ಷಾಟನೆಯ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಒಂದೆರಡು ಬಾರಿಯಾದರೆ ಜನ ಹಣ ಕೊಟ್ಟು ಕಳುಹಿಸುತ್ತಾರೆ. ಆದರೆ ನಿರಂತರವಾಗಿ ಭಿಕ್ಷಾಟನೆ ಮಾಡುತ್ತಿರುವುದು ಜನರಿಗೂ ಕಿರಿಕಿರಿ ಉಂಟು ಮಾಡುತ್ತಿದೆ. ಮಗುವನ್ನು ಹಿಡಿದು ಹಲವು ದಿನಗಳಿಂದ ಮಗು ಸರಿಯಾಗಿ ಆಹಾರ ಸೇವಿಸಿಲ್ಲ ಎಂದು ಹೇಳುತ್ತಾ ಭಾವನಾತ್ಮಕವಾಗಿ ಭಿಕ್ಷೆ ಬೇಡುವುದು ಒಂದೆಡೆಯಾದರೆ, ಅಂಗವೈಕಲ್ಯತೆಯನ್ನೇ ಬಳಸಿ ಆ ಮೂಲಕ ಭಿಕ್ಷಾಟನೆ ಮಾಡುವವರು ಇನ್ನೊಂದು ಕಡೆ. ಒಟ್ಟಾರೆ ನಗರದಲ್ಲಿ ಸಂಚರಿಸುವ ಜನರಲ್ಲಿ ಹಣ ಪೀಕಿಸಲು ಭಿಕ್ಷಾಟನೆಯನ್ನೇ ಅಸ್ತ್ರವಾಗಿಸಿಕೊಂಡು ಹಲವು ಮಂದಿ ಇದ್ದಾರೆ. ಇಂತಹ ದೃಶ್ಯಗಳು ಕಣ್ಣ ಮುಂದೆಯೇ ನಡೆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.
ಜಿಲ್ಲಾಡಳಿತದ ವತಿಯಿಂದ ಪಚ್ಚನಾಡಿ, ಮೂಡುಶೆಡ್ಡೆ ಭಾಗದಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರವನ್ನು ನಿರ್ಮಿಸಲಾಗಿದ್ದರೂ ಕೂಡ ನಗರದಲ್ಲಿ ಭಿಕ್ಷುಕರ ಸಂಖ್ಯೆ ಕಡಿಮೆಯಾಗಿಲ್ಲ. ಪುನರ್ವಸತಿ ಕೇಂದ್ರದಲ್ಲಿ ಭಿಕ್ಷಾಟನೆ ಮಾಡುವುದು ತಪ್ಪು ಎಂದು ತಿಳಿ ಹೇಳುತ್ತಿದ್ದಾರೆಯೇ ವಿನಾಃ ಭಿಕ್ಷುಕರ ಹಾವಳಿ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಂತೆ ಕಂಡುಬರುತ್ತಿಲ್ಲ.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.