![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Aug 5, 2018, 3:34 PM IST
ಅಹಮದಾಬಾದ್: ಪ್ರೇಯಸಿಯ ನಗುವಿಗೆ ಮನಸೋಲುವ ಪ್ರೇಮಿಗಳು ಎಲ್ಲೆಲ್ಲೂ ಕಾಣಸಿಗುತ್ತಾರೆ. ಆದರೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರೇಮಿ, ಪ್ರಿಯತಮೆಯ ಮೋಹಕ ನಗುವಿನಿಂದ ತಾನಲ್ಲದೆ ಮತ್ಯಾರೂ ಮರುಳಾಗಬಾರದು
ಎಂದು ಆಕೆಯ ಮುಂದಿನ ಹಲ್ಲುಗಳನ್ನೇ ಕೀಳಿಸಿ ವಿಕೃತಿ ಮೆರೆದಿದ್ದಾನೆ.
ಪ್ರಿಯಕರನಿಂದ ಹಿಂಸೆಗೊಳಗಾದಾಕೆಯ ಹೆಸರು ಗೀತಾ ಬೆನ್ (55). ಮನೆಗೆಲಸ ವೃತ್ತಿ ಮಾಡಿಕೊಂಡಿದ್ದ ಈಕೆ 15 ವರ್ಷಗಳಿಂದ ಆಟೋ ಚಾಲಕನೊಬ್ಬನ ಜತೆಗೆ ಲಿವಿಂಗ್-ಟು-ಗೆದರ್ ಬಾಂಧವ್ಯದಲ್ಲಿದ್ದಳು. ಇತ್ತೀಚೆಗೆ, ಗೀತಾ ಬೆನ್ ತನ್ನ ನಗುವಿನಿಂದಲೇ ಇತರ ಪುರುಷರನ್ನು ಸೆಳೆಯಬಹುದೆಂಬ ಯೋಚನೆಯಿಂದ ಇತ್ತೀಚೆಗೆ ಬಲವಂತವಾಗಿ ಆಕೆಯ ಮುಂದಿನ ಹಲ್ಲುಗಳನ್ನು ಕೀಳಿಸಿದ್ದಾನೆ. ಮನೆಗೆಲಸಕ್ಕೆ ಹೋಗದಂತೆ ನಿರ್ಬಂಧಿಸಿದ್ದಾನೆ. ಆಕೆ ಮನೆಯ ಒಳಗಿದ್ದರೂ ತನ್ನಾಕೆಯನ್ನು ಯಾರಾದರೂ ಇಣುಕಿ ನೋಡಿಯಾರು ಎಂಬ ಭಯದಿಂದ ಮನೆ, ಕಿಟಕಿಗಳಿಗೆಲ್ಲಾ ಪ್ಲಾಸ್ಟಿಕ್ ಶೀಟ್ ಹೊಡೆಸಿದ್ದಾನೆ. ಮಹಿಳಾ ಸಹಾಯವಾಣಿಗೆ ಕರೆ ಮಾಡಿ ಆತನ ನರಕ ಸಾಮ್ರಾಜ್ಯದಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಆಕೆ.
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.