ನಕಲಿ ವೈದ್ಯರ ಹೊಡೆತಕ್ಕೆ ಜನಪದ ವಿವಿ ವೈದ್ಯ ಕೋರ್ಸ್ ರದ್ದು!
Team Udayavani, Aug 6, 2018, 6:40 AM IST
ಹಾವೇರಿ: ನಕಲಿ ವೈದ್ಯರ ಸೃಷ್ಟಿಗೆ ಇಂಬು ನೀಡುತ್ತಿದೆ ಎಂಬ ಆರೋಪ ಹೊತ್ತಿದ್ದ ಕರ್ನಾಟಕ ಜಾನಪದ ವಿವಿ “ಜನಪದ ವೈದ್ಯ’ ಸರ್ಟಿಫಿಕೇಟ್ ಕೋರ್ಸ್‌ನ್ನು ಪ್ರಸಕ್ತ ಸಾಲಿನಿಂದ ಸಂಪೂರ್ಣ ಕೈ ಬಿಟ್ಟಿದೆ.
ಈ ಮಹತ್ವದ ನಿರ್ಧಾರದಿಂದಾಗಿ “ಜನಪದ ವೈದ್ಯ’ ಕೋರ್ಸ್ ಪ್ರಮಾಣಪತ್ರ ದುರ್ಬಳಕೆ ಮಾಡಿಕೊಂಡು ವೈದ್ಯಕೀಯ ಸೇವೆ ನೀಡಲು ಮುಂದಾಗುವ ಭೀತಿ ದೂರವಾಗಿದೆ. ಜತೆಗೆ ಜನಪದ ವೈದ್ಯ ಕೋರ್ಸ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸೃಷ್ಟಿಸಿ, ವಿದ್ಯಾರ್ಥಿಗಳಿಂದ ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಅಧ್ಯಯನ ಕೇಂದ್ರಗಳು ಹಣ ವಸೂಲು ಮಾಡುವುದಕ್ಕೂ ಕಡಿವಾಣ ಬಿದ್ದಿದೆ.
ಈ ಕೋರ್ಸ್‌ನ ಪ್ರಮಾಣಪತ್ರ ದುರ್ಬಳಕೆ ಬಗ್ಗೆ ಆಯುಷ್ ಇಲಾಖೆ ಹಾಗೂ ಜನರಿಂದ ಕೋರ್ಸ್ ಬಗ್ಗೆ ವ್ಯಾಪಕವಾಗಿ ಆಪಾದನೆ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಜಾನಪದ ವಿಶ್ವವಿದ್ಯಾಲಯವು ಈ ಕೋರ್ಸ್‌ನ್ನು ಎಲ್ಲ ಅಧ್ಯಯನ ಕೇಂದ್ರಗಳಿಗೆ ಕೊಡದೆ, ವಿವಿಯ ಮುಖ್ಯ ಕ್ಯಾಂಪಸ್ ಹಾಗೂ ಬೀದರ್, ಜೋಯಿಡಾ ಹಾಗೂ ಮಂಡ್ಯದಲ್ಲಿರುವ ವಿವಿಯ ಅಧಿಕೃತ ಮೂರು ಅಧ್ಯಯನ ಕೇಂದ್ರಗಳಲ್ಲಿ ಮಾತ್ರ ಮುಂದುವರಿಸಿತ್ತು. ಆದರೆ, ಈ ವರ್ಷ ಈ ವಿವಾದಿತ ಕೋರ್ಸ್‌ನ್ನು ಸಂಪೂರ್ಣ ಕೈಬಿಟ್ಟಿದೆ.
ಏನು ವಿವಾದ?:
ಜಾನಪದ ವಿವಿಯಲ್ಲಿ ಒಂದು ವರ್ಷದ (9 ತಿಂಗಳು) “ಜನಪದ ವೈದ್ಯ’ ಎಂಬ ಸರ್ಟಿಫಿಕೇಟ್ ಕೋರ್ಸ್ ಇತ್ತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಮೇಲೆ ಈ ಕೋರ್ಸ್ ಮಾಡಬಹುದಾಗಿತ್ತು. ಈ ಕೋರ್ಸ್‌ನ್ನು ವಿವಿ ರಾಜ್ಯಾದ್ಯಂತ ಇರುವ ಮಾನ್ಯತೆ ಪಡೆದ ಅಧ್ಯಯನ ಕೇಂದ್ರಗಳ ಮೂಲಕವೂ ಕೊಡುತ್ತಿತ್ತು. ಜನಪದ ವೈದ್ಯ ಪ್ರಮಾಣಪತ್ರ ದುರ್ಬಳಕೆ ಮಾಡಿಕೊಂಡು ನಕಲಿ ವೈದ್ಯರಾಗುವವರ ಸಂಖ್ಯೆ ಹಾಗೂ ತಮ್ಮ ನಕಲಿ ವೈದ್ಯಕೀಯಕ್ಕೆ ಇದನ್ನು ಅ ಧಿಕೃತ ಪ್ರಮಾಣ ಪತ್ರದ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು.
ಯಾವ ರೀತಿ ದುರ್ಬಳಕೆ?:
ಕರ್ನಾಟಕ ಜಾನಪದ ವಿವಿ “ಜನಪದ ವೈದ್ಯ’ ಸರ್ಟಿಫಿಕೇಟ್ ಕೋರ್ಸ್ ನಡೆಸಲು ಪರವಾನಗಿ ಪಡೆದ ಕೆಲ ಅಧ್ಯಯನ ಕೇಂದ್ರಗಳು ಈ ಕೋರ್ಸ್ ಮಾಡಿ ವೈದ್ಯಕೀಯ ವೃತ್ತಿ ಮಾಡಬಹುದೆಂದು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಹೆಚ್ಚಿನ ಶುಲ್ಕ ಆಕರಿಸುತ್ತಿದ್ದವು. ಇದರ ಜತೆಗೆ ಈ ಕೋರ್ಸ್‌ನ ಪ್ರಮಾಣಪತ್ರ ಪಡೆದ ಕೆಲವರು ಈ ಪ್ರಮಾಣ ಪತ್ರ ಇಟ್ಟುಕೊಂಡು ಹೊಸದಾಗಿ ವೈದ್ಯಕೀಯ ವೃತ್ತಿ ಆರಂಭಿಸಿದ್ದರೆ, ಇನ್ನು ಕೆಲ ನಕಲಿ ವೈದ್ಯರು ಈ ಪ್ರಮಾಣಪತ್ರವನ್ನು ತಮ್ಮ ಅ ಧಿಕೃತ ಅರ್ಹತಾ ಪತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು.
ಆರೋಪ ಸಾಬೀತು:
ಜನಪದ ವೈದ್ಯ ಪ್ರಮಾಣಪತ್ರ ದುರ್ಬಳಕೆ ಹಾಗೂ ಈ ಕುರಿತು ಅಧ್ಯಯನ ಕೇಂದ್ರಗಳ ಮೇಲೆ ನಿಗಾವಹಿಸಿ ವರದಿ ನೀಡಲು ಪೊÅ| ಸಣ್ಣರಾಮ ಅಧ್ಯಕ್ಷತೆಯಲ್ಲಿ ಶೋಧಕ ಸಮಿತಿಯೊಂದನ್ನು ಸಹ ರಚಿಸಿತ್ತು. ಈ ಸಮಿತಿ ಅಧ್ಯಯನ ನಡೆಸಿ, ಈ ಆರೋಪ ಸತ್ಯವಾಗಿದೆ ಎಂದು ವರದಿ ನೀಡಿತ್ತು.
ಮುಚ್ಚಳಿಕೆ ಪತ್ರ:
ಕೋರ್ಸ್ ದುರ್ಬಳಕೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿವಿ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಂದ “ಈ ಕೋರ್ಸ್‌ನ್ನು ಜ್ಞಾನಕ್ಕಾಗಿ ಪಡೆದುಕೊಂಡಿದ್ದೇನೆಯೇ ಹೊರತು ವೈದ್ಯಕೀಯ ವೃತ್ತಿಗಾಗಿ ಅಲ್ಲ’ ಎಂಬ ಮುಚ್ಚಳಿಕೆ ಪತ್ರ ಸಹ ಬರೆಸಿಕೊಳ್ಳುವ ನಿರ್ಧಾರ ಸಹ ಕೈಗೊಂಡಿತ್ತು. ಜತೆಗೆ ಪ್ರಮಾಣ ಪತ್ರದಲ್ಲಿಯೂ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖೀಸುವ ಬಗ್ಗೆ ತೀರ್ಮಾನ ಕೈಗೊಂಡಿತ್ತು. ಇಷ್ಟಾದರೂ ದುರ್ಬಳಕೆ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ವಿವಿ ಕೋರ್ಸ್ ಕೈಬಿಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ.
ಜನಪದ ವೈದ್ಯ ಕೋರ್ಸ್‌ನ್ನು ವೈದ್ಯಕೀಯ ವೃತ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸತ್ಯಶೋಧನಾ ಸಮಿತಿಯ ಅಧ್ಯಯನದಿಂದ ಸಾಬೀತಾಗಿದೆ. ಕೋರ್ಸ್ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದರಿಂದ ವಿವಿ ಜನಪದ ವೈದ್ಯ ಕೋರ್ಸ್‌ನ್ನು ಪ್ರಸಕ್ತ ಸಾಲಿನಿಂದ ಕೈಬಿಡಲಾಗಿದೆ.
– ಪ್ರೊ.ಡಿ.ಬಿ. ನಾಯಕ, ಕುಲಪತಿ, ಜಾನಪದ ವಿವಿ
– ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.