ಅಲ್ಪ ಮಳೆಗೂ ಶಹಾಬಾದ ರಾಡಿ: ಕೇಳ್ಳೋರೆ ಇಲ್ಲ
Team Udayavani, Aug 6, 2018, 9:48 AM IST
ಶಹಾಬಾದ: ನಗರದಲ್ಲಿ ಸುರಿದ ಅಲ್ಪ ಮಳೆಗೂ ವಾರ್ಡ್ ಸಂಖ್ಯೆ 17ರ ಸಾರಡಾ ಅಂಗಡಿ ಮುಂಭಾಗದ ಬಡಾವಣೆಯಲ್ಲಿ ಚರಂಡಿ ತುಂಬಿ ನೀರು ಮನೆ ಒಳಗೆ ಬಂದಿದ್ದರಿಂದ ಇಲ್ಲಿನ ನಿವಾಸಿಗಳು ಪರದಾಡುವಂತೆ ಆಗಿತ್ತು.
ಕೇವಲ 15 ನಿಮಿಷ ಸುರಿದ ಮಳೆಯಿಂದ ಇಲ್ಲಿನ ಚರಂಡಿ ನೀರು ಮನೆಯೊಳಗೆ ಹಾಗೂ ಮನೆ ಮುಂಭಾಗದಲ್ಲಿ ಸಂಗ್ರಹವಾಗಿ ಗಬ್ಬೆದ್ದು ನಾರುತ್ತಿತ್ತು. ನಗರಸಭೆ ಅಧಿಕಾರಿಗಳು ಟೆಂಡರ್ ಕರೆಯಲಾಗಿದೆ. ಕೆಲಸ ಪ್ರಾರಂಭವಾಗುತ್ತದೆ ಎಂದು ಒಂದು ವರ್ಷದಿಂದ ಹೇಳುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಸಮಸ್ಯೆ ಮಾತ್ರ ಹಾಗೆ ಇದೆ.
ನಗರದಲ್ಲಿ ಮಳೆ ಬಂದರೆ ಸಾಕು ಬಡಾವಣೆಯಲ್ಲಿ ಚರಂಡಿ ನೀರು ಮನೆಗೆ ಹಾಗೂ ಅಂಗಡಿಗಳಿಗೆ ನುಗ್ಗಿ ಅಪಾರ ಹಾನಿ ಉಂಟಾಗುತ್ತದೆ. ಕಳೆದ ವರ್ಷ ಚರಂಡಿ ನೀರು ಅಂಗಡಿಗೆ ನುಗ್ಗಿ ಲಕ್ಷಾಂತರ ರೂ. ಹಾನಿಗೀಡಾಗಿತ್ತು. ಈ ಬಗ್ಗೆ ಅನೇಕ ಬಾರಿ ವಾರ್ಡ್ ಸದಸ್ಯರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ದೂರು ಸಲ್ಲಿಸದರೂ ಕ್ಯಾರೆ ಎನ್ನುತ್ತಿಲ್ಲ ಎಂದು
ಸಾರ್ವಜನಿಕರು ಆರೋಪಿಸಿದ್ದಾರೆ.
15 ದಿನಗಳ ಹಿಂದೆ ಶಾಸಕ ಬಸವರಾಜ ಮತ್ತಿಮೂಡ ಸ್ಥಳಕ್ಕೆ ಬೇಟಿ ನೀಡಿದಾಗ, ಸ್ಥಳೀಯ ನಿವಾಸಿಗಳು ಅವರೆದು ಮಳೆ ಬಂದಾಗೊಮ್ಮೆ ಚರಂಡಿ ನೀರು ಮನೆಯೊಳಗೆ ನುಗ್ಗುತ್ತಿದೆ ಎಂದು ತೊಂದರೆಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದರು. ಆಗ ಸ್ಥಳದಲ್ಲಿಯೇ ಇದ್ದ ಪೌರಾಯುಕ್ತ ಬಿ.ಬಸಪ್ಪ ಹಾಗೂ ಎಇಇ ರಿಯಾಜ್ ಮಹ್ಮದ್ ಅವರಿಗೆ ಮೂರು ದಿನಗೊಳಗಾಗಿ ಚರಂಡಿ ಕಾಮಗಾರಿ ಕೈಗೆತ್ತಿಕೊಂಡು ಇಲ್ಲಿನ ನಿವಾಸಿಗಳ ಸಮಸ್ಯೆಯನ್ನು ಬಗೆಹರಿಸಿ ಎಂದು ತಾಕೀತು ಮಾಡಿದ್ದರು. ಆದರೆ ಒಂದು ಕಡೆ ತೆಗ್ಗು ಹೊಡೆದಿದ್ದು ಬಿಟ್ಟರೆ, 15 ದಿನಗಳಾದರೂ ಚರಂಡಿ ಕಾಮಗಾರಿ ಕೈಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.