ವೀರಯೋಧ ವಿಜಯಾನಂದ ಮನೆಗೆ ದೇಶಪಾಂಡೆ ಭೇಟಿ


Team Udayavani, Aug 6, 2018, 5:48 PM IST

6-agust-25.jpg

ಕಾರವಾರ: ವೀರಯೋಧ ವಿಜಯಾನಂದ ನಾಯ್ಕರ ಮನೆಗೆ ರಾಜ್ಯದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ರವಿವಾರ ಬೆಳಗ್ಗೆ 10:20ಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಬಿಎಸ್‌ಎಫ್‌ ಯೋಧರು ದೇಶದ ಒಳಗಿನ ಮತ್ತು ಗಡಿ ಭದ್ರತೆಗೆ ಹಗಲಿರುಳು ಜೀವ ಒತ್ತೆ ಇಟ್ಟು ಸೇವೆ ಮಾಡುತ್ತಾರೆ. ಅವರ ತ್ಯಾಗ ಬಲಿದಾನ ಸದಾ ಸ್ಮರಣೀಯ ಎಂದರು. ದೇಶಕ್ಕಾಗಿ ನಿಮ್ಮ ಮಗ ಪ್ರಾಣ ನೀಡಿದ್ದಾನೆ. ಇದನ್ನು ನಾವು ಮರೆಯುವುದಿಲ್ಲ ಎಂದರು. ಕುಟುಂಬ ವರ್ಗದಲ್ಲಿ ವಿಜಯಾನಂದ ಸಹೋದರ ಆದಿತ್ಯಾ ಬಿರ್ಲಾ ಕಂಪನಿಯಲ್ಲಿ ಗುತ್ತಿಗೆ ಆಧಾರದ ನೌಕರಿಯಲ್ಲಿದ್ದು, ಅದನ್ನು ಕಂಪನಿ ಮಾಲಕರ ಜೊತೆ ಮಾತನಾಡಿ ಕಾಯಂ ಮಾಡಿಸಲು ಪ್ರಯತ್ನಿಸುವುದಾಗಿ ಸಚಿವ ದೇಶಪಾಂಡೆ ಹೇಳಿದರು. ಕುಟುಂಬದವರಿಗೆ ದುಃಖ ಸಹಿಸುವಂತೆ ಸಚಿವರು ಸಾಂತ್ವನ ಹೇಳಿದರು. 

ಶಂಕಿತ ಮಾವೋವಾದಿಗಳು ಜು.9 ರಂದು ಸೋಮವಾರ ಬೆಳಗ್ಗೆ ಸ್ಫೋಟಿಸಿದ ಸುಧಾರಿತ ನೆಲ ಬಾಂಬ್‌ಗ ಇಬ್ಬರು ಬಿಎಸ್‌ಎಫ್‌ ಯೋಧರು ಹುತಾತ್ಮರಾಗಿದ್ದರು. ಕಾರವಾರದ ವಿಜಯಾನಂದ ಸುರೇಶ್‌ ನಾಯ್ಕ (28) ಇದೇ  ರ್ಘ‌ಟನೆಯಲ್ಲಿ ಹುತಾತ್ಮರಾದ ಬಿಎಸ್‌ಎಫ್‌ ಯೋಧರಾಗಿದ್ದರು. ಛತ್ತೀಸ್‌ಗಡದ ಬಸ್ತರ್‌ ವಿಭಾಗದ ಕಾಂಕೇರ್‌ ಎಂಬಲ್ಲಿ ಮಾವೋವಾದಿಗಳ ಹುಡುಕಾಟದ ಕಾರ್ಯಾಚರಣೆಯಲ್ಲಿ ವಿಜಯಾನಂದ ನಾಯ್ಕ ವೀರಮರಣ ಅಪ್ಪಿದ್ದರು.

15 ರಂದು ಭೂಮಿ ನೀಡುವ ಸಾಧ್ಯತೆ:ವೀರ ಮರಣ ಅಪ್ಪಿದ ಸೈನಿಕರ ಕುಟುಂಬಕ್ಕೆ ಭೂಮಿ ನೀಡುವ ಕುರಿತು ಕಾನೂನಿನಲ್ಲಿರುವ ಅವಕಾಶಗಳನ್ನು ಪರಿಶೀಲಿಸಿ, ಸಾಧ್ಯವಿದ್ದಲ್ಲಿ ಇದೇ ಆ.15 ರಂದು ವಿಜಯಾನಂದ ನಾಯ್ಕ ಕುಟುಂಬದವರಿಗೆ ಭೂಮಿಯ ಹಕ್ಕುಪತ್ರ ಹಸ್ತಾಂತರಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಜಿಲ್ಲಾಡಳಿತಕ್ಕೆ ಸಚಿವರು ಮೌಖೀಕ ಸೂಚನೆ ನೀಡಿದ್ದಾರೆಂದು ಕೋಮಾರಪಂಥ ಸಮಾಜದ ಗಣ್ಯರೊಬ್ಬರು ಸುಳಿವು ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಗಣ್ಯರಾದ ಮಾಧವ ನಾಯ್ಕ, ಪ್ರಭಾಕರ ಮಾಳ್ಸೇಕರ್‌, ಮೋಹನ್‌ ನಾಯ್ಕ, ಸುರೇಶ್‌ ನಾಯ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪುತ್ಥಳಿ ಸ್ಥಾಪಿಸಲು ಮನವಿ: ಯೋಧ ವಿಜಯಾನಂದ ನಾಯ್ಕ ಕುಟುಂಬದವರು ಕಾರವಾರದ ರಾಕ್‌ ಗಾರ್ಡನ್‌ನಲ್ಲಿ ವೀರಯೋಧ ವಿಜಯಾನಂದ ನಾಯ್ಕರ ಪುತ್ಥಳಿ ಸ್ಥಾಪಿಸುವಂತೆ ಜಿಲ್ಲಾಡಳಿತ ಹಾಗೂ ಮಾಧ್ಯಮದ ಬಳಿ ಬೇಡಿಕೆ ಇಟ್ಟಿದ್ದಾರೆ.

ಟಾಪ್ ನ್ಯೂಸ್

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

vidhana-soudha

CM office ನವೀಕರಣ: ಮತ್ತೊಂದು ವಿವಾದ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.