ಕೆರಿಬಿಯನ್ನರ ವಿರುದ್ಧ ಬಾಂಗ್ಲಾ ಪರಾಕ್ರಮ
Team Udayavani, Aug 7, 2018, 6:00 AM IST
ಲೌಡರ್‌ಹಿಲ್ (ಯುಎಸ್‌ಎ): ಮಳೆಯಿಂದ ಅಡಚಣೆಗೊಳಗಾದ ವೆಸ್ಟ್ ಇಂಡೀಸ್ ಎದುರಿನ ಅಂತಿಮ ಟಿ20 ಪಂದ್ಯವನ್ನು ಡಿ-ಎಲ್ ನಿಯಮದಂತೆ 19 ರನ್ನುಗಳಿಂದ ಗೆದ್ದ ಬಾಂಗ್ಲಾದೇಶ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದ ಬಾಂಗ್ಲಾದೇಶ 5 ವಿಕೆಟಿಗೆ 184 ರನ್ ಪೇರಿಸಿ ಸವಾಲೊಡ್ಡಿತು. ಆದರೆ ವೆಸ್ಟ್ ಇಂಡೀಸ್ ಚೇಸಿಂಗಿಗೆ ವೇಳೆ ಮಳೆ ಅಡ್ಡಿಯಾಯಿತು. 17.1ನೇ ಓವರ್ ವೇಳೆ ಸುರಿದ ಮಳೆ ಮತ್ತೆ ಆಟವನ್ನು ಮುಂದುವರಿಸಲು ಅವಕಾಶ ನೀಡಲಿಲ್ಲ. ಆಗ ವಿಂಡೀಸ್ 7 ವಿಕೆಟಿಗೆ 135 ರನ್ ಮಾಡಿತ್ತು. ಡಕ್‌ವರ್ತ್-ಲೂಯಿಸ್ ನಿಯದ ಪ್ರಕಾರ ಈ ಅವಧಿಯಲ್ಲಿ ಕೆರಿಬಿಯನ್ ಪಡೆ 155 ರನ್ ಗಳಿಸಬೇಕಿತ್ತು.
ದಾಸ್ ಜೀವನಶ್ರೇಷ್ಠ ಬ್ಯಾಟಿಂಗ್
ಬಾಂಗ್ಲಾದ ಬೃಹತ್ ಮೊತ್ತಕ್ಕೆ ಕಾರಣರಾದವರು ಆರಂಭಕಾರ ಲಿಟನ್ ದಾಸ್. ಅವರು ಜೀವನಶ್ರೇಷ್ಠ 61 ರನ್ ಬಾರಿಸಿದರು (32 ಎಸೆತ, 6 ಬೌಂಡರಿ, 3 ಸಿಕ್ಸರ್).
ದಾಸ್-ತಮಿಮ್ ಇಕ್ಬಾಲ್ 4.4 ಓವರ್‌ಗಳಿಂದ 61 ರನ್ ಪೇರಿಸಿ ಭರ್ಜರಿ ಆರಂಭ ಒದಗಿಸಿದರು. ಬಾಂಗ್ಲಾ ಟಿ20 ಇತಿಹಾಸದಲ್ಲಿ ಆರಂಭಿಕ ವಿಕೆಟಿಗೆ ಅತೀ ವೇಗದಲ್ಲಿ 50 ರನ್ ಪೇರಿಸಿದ ದಾಖಲೆಯನ್ನೂ ಇವರು ಬರೆದರು (21 ಎಸೆತ). ಕೊನೆಯ ಗಳಿಗೆಯಲ್ಲಿ ಸಿಡಿದ ಮಹಮದುಲ್ಲ ಅಜೇಯ 32 ರನ್ ಹೊಡೆದರು (20 ಎಸೆತ, 4 ಬೌಂಡರಿ, 1 ಸಿಕ್ಸರ್). ಮಹಮದುಲ್ಲ-ಅರೀಫ್ ಉಲ್ ಹಕ್ (ಔಟಾಗದೆ 18) ಅಂತಿಮ 4 ಓವರ್‌ಗಳಲ್ಲಿ 38 ರನ್ ಸೂರೆಗೈದುದರಿಂದ ಬಾಂಗ್ಲಾ ಬೊಂಬಾಟ್ ಸ್ಕೋರ್ ದಾಖಲಿಸಿತು.
ಸಿಡಿದು ನಿಂತ ರಸೆಲ್
ಚೇಸಿಂಗ್ ವೇಳೆ ವೆಸ್ಟ್ ಇಂಡೀಸ್ ಎಡಗೈ ಮಧ್ಯಮ ವೇಗಿ ಮುಸ್ತಫಿಜುರ್ ದಾಳಿಗೆ ಸಿಲುಕಿತು (31ಕ್ಕೆ 3). ಆ್ಯಂಡ್ರೆ ಫ್ಲೆಚರ್ (6), ಸಾಮ್ಯುಯೆಲ್ಸ್ (2) ಬೇಗನೇ ಔಟಾದದ್ದು ದೊಡ್ಡ ಹೊಡೆತ ನೀಡಿತು. ರಿಕಾರ್ಡೊ ಪೊವೆಲ್ (23), ದಿನೇಶ್ ರಾಮದಿನ್ (21), ಚಾಡ್ವಿಕ್ ವಾಲ್ಟನ್ (19) ಕೂಡ ಕ್ರೀಸ್ ಆಕ್ರಮಿಸಲು ವಿಫಲರಾದರು.
ಈ ಹಂತದಲ್ಲಿ ಸಿಡಿದು ನಿಂತ ಆ್ಯಂಡ್ರೆ ರಸೆಲ್ ಬಾಂಗ್ಲಾ ಬೌಲರ್‌ಗಳ ಮೇಲೆರಗಿ ಹೋದರು. ಕೇವಲ 21 ಎಸೆತಗಳಿಂದ 47 ರನ್ ಸಿಡಿಸಿನ ಭೀತಿಯೊಡ್ಡಿದರು (6 ಸಿಕ್ಸರ್, 1 ಬೌಂಡರಿ). ಆದರೆ 17.1ನೇ ಓವರಿನಲ್ಲಿ ರಸೆಲ್ ವಿಕೆಟ್ ಬಿದ್ದೊಡನೆಯೇ ಮಳೆ ಆರಂಭಗೊಂಡಿತು. ಪಂದ್ಯ ಇಲ್ಲಿಗೇ ನಿಂತಿತು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-5 ವಿಕೆಟಿಗೆ 184 (ಲಿಟನ್ ದಾಸ್ 61, ಮಹಮದುಲ್ಲ ಔಟಾಗದೆ 32, ಪೌಲ್ 26ಕ್ಕೆ 2, ಬ್ರಾತ್‌ವೇಟ್ 32ಕ್ಕೆ 2). ವೆಸ್ಟ್ ಇಂಡೀಸ್-17.1 ಓವರ್‌ಗಳಲ್ಲಿ 7 ವಿಕೆಟಿಗೆ 135 (ರಸೆಲ್ 47, ಪೊವೆಲ್ 23, ಮುಸ್ತಫಿಜುರ್ 31ಕ್ಕೆ 3). ಪಂದ್ಯಶ್ರೇಷ್ಠ: ಲಿಟನ್ ದಾಸ್. ಸರಣಿಶ್ರೇಷ್ಠ: ಶಕಿಬ್ ಅಲ್ ಹಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.