ರೈತರ ಭೂಸ್ವಾಧೀನಕ್ಕೆ ಹೊಸ ನೀತಿ
Team Udayavani, Aug 7, 2018, 6:15 AM IST
ಬೆಂಗಳೂರು: ನೀರಾವರಿ ಯೋಜನೆಗಳಿಗೆ ಅಲ್ಪ ಕಾಲಾವಧಿಗೆ ಬೇಕಾದ ಭೂಮಿಯನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಬದಲು ಅವರಿಗೆ ಬೆಳೆ ಪರಿಹಾರ ನೀಡಿ ಬೇಕಾದಷ್ಟು ಅವಧಿಗೆ ಮಾತ್ರ ಪಡೆದುಕೊಳ್ಳುವ ಹೊಸ ಭೂಸ್ವಾಧೀನ ನೀತಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆದಿದೆ.
ನೀರಾವರಿ ಯೋಜನೆಗಳಿಗೆ ಭೂಸ್ವಾಧೀನವೇ ದೊಡ್ಡ ಅಡ್ಡಿಯಾಗಿದ್ದು, ಸರ್ಕಾರಕ್ಕೆ ಹೊರೆಯಾಗುವುದರ ಜತೆಗೆ ಭೂಸ್ವಾಧೀನ ವಿಳಂಬವಾಗಿ ಯೋಜನಾ ವೆಚ್ಚವೂ ಹೆಚ್ಚುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಾಧ್ಯವಾದ ಕಡೆ ಭೂಮಿಯ ಮಾಲಿಕತ್ವವನ್ನು ರೈತರಿಗೇ ನೀಡಿ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಅದನ್ನು ಬಳಸಿಕೊಳ್ಳುವುದು ಇದರ ಉದ್ದೇಶ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಹೊಸ ನೀತಿ ಜಾರಿಗೊಳಿಸುವ ಕುರಿತಂತೆ ರೈತರು, ಸಾರ್ವಜನಿಕರು ಮತ್ತು ತಜ್ಞರ ಸಲಹೆ ಕೇಳಲಾಗಿದೆ. ಅವರಿಂದ ಬರುವ ಸಲಹೆಗಳನ್ನು ಪರಿಗಣಿಸಿ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಪಾವಗಡದ ಸೋಲಾರ್ ವಿದ್ಯುತ್ ಯೋಜನೆಗೆ ಇದೇ ರೀತಿಯಲ್ಲಿ ರೈತರಿಂದ ಭೂಮಿ ಪಡೆದುಕೊಳ್ಳಲಾಗಿದೆ. ಅದರಲ್ಲಿ ಸ್ವಲ್ಪ ಮಾರ್ಪಾಟು ಮಾಡಿ ನೀರಾವರಿ ಯೋಜನೆಗಳಲ್ಲೂ ಭೂಸ್ವಾಧೀನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಹೊಸ ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ. ರೈತರ ಸಹಮತದಿಂದಲೇ ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಏನಿದು ಹೊಸ ಚಿಂತನೆ?:
ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆ ಮತ್ತು ದೇವನಹಳ್ಳಿ ತಾಲೂಕಿನ 5427 ಎಕರೆ ಪ್ರದೇಶದಲ್ಲಿ ಬೈರಗೊಂಡಲು ಜಲಾಶಯ ನಿರ್ಮಿಸಲಾಗುತ್ತದೆ. ಈ ಯೋಜನೆಯಡಾ ಮಳೆಗಾಲದ ಮೂರು ತಿಂಗಳು ಮಾತ್ರ ನೀರನ್ನು ಬಯಲು ಸೀಮೆ ಜಿಲ್ಲೆಯ ಕೆರೆಗಳಿಗೆ ಪೂರೈಸಲಾಗುತ್ತದೆ. ಅಂದರೆ ಜಲಾಶಯದಲ್ಲಿ ಮೂರು ತಿಂಗಳು ಮಾತ್ರ ನೀರು ಇರಲಿದ್ದು, ಉಳಿದ ಒಂಬತ್ತು ತಿಂಗಳು ಖಾಲಿ ಇರುತ್ತದೆ. ಅದೇರೀತಿ ಆಲಮಟ್ಟಿ ಎಣೆಕಟ್ಟೆ ಎತ್ತರವನ್ನು 524 .256 ಮೀಟರ್‌ಗೆ ಎತ್ತರಿಸಿದ ಬಳಿಕ ಶಾಶ್ವತ ಮುಳುಗಡೆ ಪ್ರದೇಶ ಮತ್ತು ತಾತ್ಕಾಲಿಕ ಮುಳುಗಡೆ ಪ್ರದೇಶ ಎಂದು ಎರಡು ಹಂತಗಳಿರುತ್ತವೆ.
ತಾತ್ಕಾಲಿಕ ಮುಳುಗಡೆ ಪ್ರದೇಶದಲ್ಲಿ ಮೂರು ಅಥವಾ ನಾಲ್ಕು ತಿಂಗಳು ಮಾತ್ರ ನೀರು ನಿಲ್ಲುತ್ತದೆ. ಉಳಿದ ಅವಧಿಯಲ್ಲಿ ಭೂಮಿ ಖಾಲಿ ಇರುತ್ತದೆ. ಈ ರೀತಿ ತಾತ್ಕಾಲಿಕವಾಗಿ ಮುಳುಗಡೆಯಾಗುವ ಭೂಮಿಯಲ್ಲಿ ಒಂಬತ್ತು ತಿಂಗಳು ರೈತರು ಕೃಷಿ ಚಟುವಟಿಕೆ ಹಮ್ಮಿಕೊಳ್ಳಬಹುದು ಎಂಬುದು ಸಚಿವ ಡಿ.ಕೆ.ಶಿವಕುಮಾರ್ ಅವರ ಅಭಿಪ್ರಾಯ.
ಇಂತಹ ಭೂಮಿಯನ್ನು ರೈತರಿಂದ ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು ಭೂಮಿಯ ಹಕ್ಕನ್ನು ಅವರಿಗೇ ಬಿಟ್ಟುಕೊಟ್ಟು ಮೂರು ತಿಂಗಳು ಮಾತ್ರ ಅವರಿಂದ ಭೂಮಿ ಪಡೆದು ಆ ಅವಧಿಗೆ ಬೆಳೆ ಪರಿಹಾರ ನೀಡುವುದು ಹೊಸ ನೀತಿಯ ಅಂಶ. ಇದರಿಂದ ಭೂಮಿ ರೈತರಿಗೇ ಉಳಿಯುವಂತಾಗುತ್ತದೆ. ಸರ್ಕಾರ ಭೂಸ್ವಾಧೀನಕ್ಕೆ ಮಾಡಬೇಕಾದ ಹೊರೆಯೂ ಕಡಿಮೆಯಾಗುತ್ತದೆ. ಅಲ್ಲದೆ, ಅಗತ್ಯ ಭೂಮಿಯನ್ನು ತ್ವರಿತವಾಗಿ ಬಳಸಿಕೊಂಡು ಯೋಜನೆ ಜಾರಿಗೊಳಿಸಲು ಅನುಕೂಲವಾಗುತ್ತದೆ. ನೀರಾವರಿಗೆ ಸಂಬಂಧಿಸಿದಂತೆ ಸಾಧ್ಯವಿರುವ ಎಲ್ಲಾ ಕಡೆ ಈ ನೀತಿ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸ್ಥಳೀಯ ರೈತರ ಅಭಿಪ್ರಾಯ ಪಡೆದು ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಹಾಗೆಂದು ರೈತರು ಇದಕ್ಕೆ ಒಪ್ಪಲೇ ಬೇಕು ಎಂದೇನಿಲ್ಲ. ಭೂಸ್ವಾಧೀನ ಮತ್ತು ತಾತ್ಕಾಲಿಕವಾಗಿ ಭೂಮಿ ಪಡೆಯುವ ಎರಡೂ ಆಯ್ಕೆಗಳನ್ನು ಅವರ ಮುಂದಿಡಲಾಗುವುದು. ರೈತರು ತಮಗೆ ಯಾವುದು ಅನುಕೂಲವೋ ಅದಕ್ಕೆ ಸಮ್ಮತಿಸಬಹುದು. ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಖಂಡಿತ ಎಂಬುದು ಮನವರಿಕೆಯಾಗುವಾಗ ರೈತರು ಭೂಮಿಯ ಹಕ್ಕು ತಮಗೆ ಬೇಕು ಎಂಬ ಭಾವನಾತ್ಮಕ ಕಾರಣಗಳಿಗಾಗಿ ಹೊಸ ನೀತಿಗೆ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದರು.
ಕುಡಿವ ನೀರಿನ ನಾಲೆಗಳಿಗೆ ಮೋಟರ್ ಪಂಪ್ ಹಾಕಿ ನೀರು ತೆಗೆಯುವಂತಿಲ್ಲ
ಕುಡಿಯುವ ನೀರಿನ ಉದ್ದೇಶದಿಂದ ನೀರು ಪೂರೈಕೆಯಾಗುತ್ತಿರುವ ನಾಲೆಗಳಿಗೆ ರೈತರು ಮೋಟರ್ ಪಂಪ್ ಹಾಕಿ ನೀರು ಮೇಲೆತ್ತದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗುವುದು. ಜಲ ಸಂಪನ್ಮೂಲ ಮತ್ತು ಇಂಧನ ಇಲಾಖೆ ಸೇರಿ ಅಂತಹ ನಾಲೆಗಳ ಪಕ್ಕ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ನೋಡಿಕೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನೀರು ಹರಿಸುವ ನಾಲೆಗಳಿಗೆ ನೇರವಾಗಿ ಮೋಟರ್ ಪಂಪ್ ಹಾಕಿ ನೀರು ತೆಗೆಯಬಾರದು ಎಂಬ ನಿಯಮ ಇದ್ದರೂ ಅದು ಜಾರಿಯಾಗುತ್ತಿಲ್ಲ. ಆದರೆ, ಕುಡಿಯುವ ನೀರು ಪೂರೈಸುವ ನಾಲೆಗಳ ವಿಚಾರದಲ್ಲಿ ಈ ರೀತಿಯ ಮೃದು ಧೋರಣೆ ಸಾಧ್ಯವಿಲ್ಲ. ಹೀಗಾಗಿ ಅಂತಹ ನಾಲೆಗಳಿರುವ ಪ್ರದೇಶದಲ್ಲಿ ಮೋಟರ್ ಪಂಪ್‌ಗ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಇಂಧನ ಇಲಾಖೆ ಜತೆ ಚರ್ಚಿಸಲಾಗುವುದು. ಜತೆಗೆ ಜಲ ಸಂಪನ್ಮೂಲ ಇಲಾಖೆ ಮೂಲಕವೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಎತ್ತಿನಹೊಳೆ ಯೋಜನೆಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.