ಮೆಸ್ಕಾಂಗೆ ಮಾನ್ಸೂನ್ ಶಾಕ್!
Team Udayavani, Aug 7, 2018, 9:43 AM IST
ದಕ್ಷಿಣ ಕನ್ನಡ 6.28 ಕೋ. ರೂ.
ಉಡುಪಿ 3.36 ಕೋ.ರೂ.
ಶಿವಮೊಗ್ಗ 2.56 ಕೋ. ರೂ.
ಚಿಕ್ಕಮಗಳೂರು 2.86 ಕೋ. ರೂ.
ಮಂಗಳೂರು: ವಿದ್ಯುತ್ ಪೂರೈಕೆ ಕಂಪೆನಿ ಮೆಸ್ಕಾಂಗೆ ಈ ಸಾಲಿನ ಮುಂಗಾರು ಭಾರೀ ಶಾಕ್ ನೀಡಿದೆ. ನಾಲ್ಕು ತಿಂಗಳಲ್ಲಿ ಗಾಳಿ-ಮಳೆಯ ಅಬ್ಬರ ದಿಂದ ಒಟ್ಟು 15 ಕೋಟಿ ರೂ.ಗೂ ಅಧಿಕ ನಷ್ಟವುಂಟಾಗಿದೆ. ಇದರಿಂದ ಇಲಾಖೆಯ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಹಿನ್ನಡೆ ಒದಗುವ ಸಾಧ್ಯತೆ ಇದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿವೆ. ಈ ಮಳೆಗಾಲದಲ್ಲಿ ದ. ಕನ್ನಡದಲ್ಲಿ 6.28 ಕೋ. ರೂ., ಉಡುಪಿಯಲ್ಲಿ 3.36 ಕೋ. ರೂ., ಶಿವಮೊಗ್ಗದಲ್ಲಿ 2.56 ಕೋ. ರೂ. ಹಾಗೂ ಚಿಕ್ಕಮಗಳೂರಿನಲ್ಲಿ 2.86 ಕೋ. ರೂ. ಮೊತ್ತದ ಮೆಸ್ಕಾಂ ಆಸ್ತಿಗಳಗೆ ಹಾನಿಯಾಗಿದೆ. ಎ. 1ರಿಂದ ಮೇ 29ರ ವರೆಗಿನ 2 ತಿಂಗಳ ಅವಧಿಯಲ್ಲಿ 5 ಕೋ. ರೂ. ನಷ್ಟವಾಗಿದ್ದರೆ, ಅನಂತರದ 2 ತಿಂಗಳಲ್ಲಿ ಅದಕ್ಕಿಂತ ಎರಡು ಪಟ್ಟು ನಷ್ಟವಾಗಿದೆ.
ವಿದ್ಯುತ್ ವ್ಯವಸ್ಥೆ ದುರಸ್ತಿಯನ್ನು ಮೆಸ್ಕಾಂ ತನ್ನ ಆರ್ಥಿಕ ನಿಧಿ ಹೊಂದಿಸಿ ಮಾಡಿದೆ. ಆದರೆ ಈ ಆರ್ಥಿಕ ಹೊರೆ ಮುಂದೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಪ್ರಾಕೃತಿಕ ವಿಕೋಪ ನಿಧಿಯಿಂದ ನೆರವು ಲಭ್ಯವಾದರೆ ಮಾತ್ರ ಮೆಸ್ಕಾಂ ನಿಟ್ಟುಸಿರು ಬಿಡಬಹುದು.
11 ಸಾವಿರ ಕಂಬಗಳು ಧರಾಶಾಯಿ
ನಾಲ್ಕು ಜಿಲ್ಲೆಗಳಲ್ಲಿ ನಾಲ್ಕು ತಿಂಗಳಲ್ಲಿ ಒಟ್ಟು 11,641 ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, 11,313 ಕಂಬಗಳನ್ನು ಬದಲಾಯಿಸಲಾಗಿದೆ. ದ. ಕನ್ನಡದಲ್ಲಿ ಅತಿಹೆಚ್ಚು 4,329 ಕಂಬಗಳಿಗೆ ಹಾನಿಯಾಗಿದ್ದು ಎಲ್ಲವನ್ನೂ ಬದಲಾಯಿಸಲಾಗಿದೆ. ಉಡುಪಿಯಲ್ಲಿ 2,898 ಕಂಬಗಳಿಗೆ ಹಾನಿಯಾಗಿದ್ದು, 2,895ನ್ನು ಬದಲಾಯಿಸಲಾಗಿದೆ. ಶಿವಮೊಗ್ಗದಲ್ಲಿ ಹಾನಿಗೊಳಗಾದ ಎಲ್ಲ 2,140 ಕಂಬಗಳ ಬದಲು ಹೊಸತು ಅಳವಡಿಸಲಾಗಿದೆ. ಚಿಕ್ಕಮಗಳೂರಿನಲ್ಲಿ 2,274 ಕಂಬಗಳಿಗೆ ಹಾನಿಯಾಗಿದ್ದು, ಇದರಲ್ಲಿ 1,949 ಕಂಬಗಳನ್ನು ಬದಲಾಯಿಸಲಾಗಿದೆ. 325 ಕಂಬಗಳನ್ನು ಬದಲಾಯಿಸಲು ಬಾಕಿಯಿದೆ.
ಒಟ್ಟು 990 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿದ್ದು, 858ನ್ನು ಬದಲಾಯಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಅತಿಹೆಚ್ಚು 477 ಹಾನಿಗೊಂಡಿದ್ದು, ಎಲ್ಲವನ್ನೂ ದುರಸ್ತಿ ಹಾಗೂ ಬದಲಾಯಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಹಾನಿಗೊಳಗಾದ 286ರಲ್ಲಿ 286 ಪರಿವರ್ತಕಗಳನ್ನು ಸರಿಪಡಿಸಲಾಗಿದ್ದು, 100 ಬಾಕಿ ಇವೆ. ಶಿವಮೊಗ್ಗದಲ್ಲಿ 66 ಪರಿವರ್ತಕಗಳಿಗೆ ಹಾನಿಯಾಗಿದ್ದು, 61ನ್ನು, ಚಿಕ್ಕಮಗಳೂರಿನಲ್ಲಿ 61ರಲ್ಲಿ 34ನ್ನು ದುರಸ್ತಿ ಮಾಡಲಾಗಿದೆ.
ಗಾಳಿ, ಮಳೆಯಿಂದ 710.91 ಕಿ.ಮೀ. ವಿದ್ಯುತ್ ಮಾರ್ಗ ಹಾನಿಗೊಂಡಿದ್ದು, ಇದರಲ್ಲಿ 691 ಕಿ.ಮೀ.ಯಲ್ಲಿ ತಂತಿಗಳನ್ನು ದುರಸ್ತಿಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 290.25 ಕಿ.ಮೀ. ಮಾರ್ಗ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 32.3 ಕಿ.ಮೀ. ಹಾನಿಗೊಳಗಾಗಿದ್ದು ಸರಿಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾನಿಗಿಡಾದ 168.11 ಕಿ.ಮೀ. ಮಾರ್ಗದಲ್ಲಿ 148.82 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 186.08 ಕಿ.ಮೀ. ಮಾರ್ಗದಲ್ಲಿ 185,85 ಕಿ.ಮೀ. ಸರಿಪಡಿಸಲಾಗಿದೆ.
*ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.