ಶ್ರೀ ಬಾರ್ಕೂರು ಮಹಾ ಸಂಸ್ಥಾನಮ್‌ ಮುಂಬಯಿ ಘಟಕದಿಂದ ಧಾರ್ಮಿಕ ಸಭೆ


Team Udayavani, Aug 7, 2018, 11:57 AM IST

0508mum09.jpg

ಮುಂಬಯಿ: ಶ್ರೀ ಬಾರ್ಕೂರು ಮಹಾ ಸಂಸ್ಥಾನದ ಅಭಿವೃದ್ಧಿಯ ಬಗೆಗಿನ ನಮ್ಮ ಚಿಂತನೆ ಹಾಗೂ ಹೋರಾಟ ಇಂದು ಸಾರ್ಥಕವಾದಂತಾಗಿದೆ ಎಂದು ಶ್ರೀ ಬಾಕೂìರು  ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ನುಡಿದರು.

ಆ. 4 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ  ಬಾಕೂìರು ಮಹಾ ಸಂಸ್ಥಾನವು ಆಯೋಜಿಸಿದ ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅಳಿಯಕಟ್ಟು ಪರಂಪರೆಯ ಬಾಕೂìರು ಸಂಸ್ಥಾನ ಎರಡು ಸಾವಿರ ವರ್ಷಗಳಿಗಿಂತಲೂ ಅತೀ ಪುರಾತನ ವಾದುದೆಂಬ ಉಲ್ಲೇಖ ಬಾಕೂìರು ಶಾಸನದಲ್ಲಿದೆ. ಐತಿಹಾಸಿಕ ಭೂಮಿಯಾದ ಬಾಕೂìರು ಸಂಸ್ಥಾನ ವನ್ನು ಇಡೀ ಭಾರತವೇ ಗುರುತಿಸುವಂಥ ಕಾರ್ಯ ಪ್ರಸ್ತುತ ನಡೆಯಬೇಕಿದೆ. ಸಂಸ್ಥಾನವು ಬಾಕೂìರಿನ ಎಲ್ಲ ಸಮಾಜ ಬಾಂಧವರನ್ನು ಒಗ್ಗೂಡಿಸಿ ಕರ್ನಾಟಕ ಸರಕಾರದ ಸೌಜನ್ಯದೊಂದಿಗೆ ಬಾಕೂìರು ಉತ್ಸವವನ್ನು ಆಯೋಜಿಸಲು ಯೋಜನೆ ಹಾಕಿ ಕೊಂಡಿದೆ. ಉದ್ಯಮಿ ಶಶಿಕಿರಣ್‌ ಶೆಟ್ಟಿ ಅವರಿಂದ ಸಮುದಾಯದ ಆಸ್ಪತ್ರೆಗಾಗಿ ಸಿಕ್ಕ ಭರವಸೆ ನಮಗೆ ಆಶಾಕಿರಣವಾಗಿ ಪರಿಣಮಿಸಿದೆ. ನನ್ನ ಸ್ವಾರ್ಥಕ್ಕಾಗಿ ನನಗೆ ಏನೂ ಬೇಡ. ಅದೆಲ್ಲವೂ ಸಮಾಜಕ್ಕಾಗಿ. ಸಮುದಾಯದ ಅಭಿವೃದ್ಧಿಯೇ ನನ್ನ ಮುಖ್ಯ ಧ್ಯೇಯವಾಗಿದೆ. ಗುಡಿ-ಗೋಪುರಗಳಿಗೆ ಚಿನ್ನ ಮುಚ್ಚಿಸುವುದರಿಂದ ಏನೂ ಪ್ರಯೋಜನವಿಲ್ಲ. ಇದರ ಬದಲಾಗಿ ಸಮಾಜ ಬಾಂಧವರನ್ನು ಸಂಕಷ್ಟಗಳಿಂದ, ಸಾವಿನ ದವಡೆಯಿಂದ ಪಾರು ಮಾಡಲು ದಾನಿಗಳು ನೆರವಾಗಬೇಕು. ಮೂಢನಂಬಿಕೆಯಿಂದ ದೂರವಿರಿ ಎಂದು ಅವರು ಹೇಳಿದರು.  

ಬಂಟ ದಾನಿಗಳಾದ ಸುಧಾಕರ ಎಸ್‌. ಹೆಗ್ಡೆ, ಕೆ. ಡಿ. ಶೆಟ್ಟಿ, ಕೆ. ಎಂ. ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಬಾಕೂìರು ಸುಧಾಕರ ಶೆಟ್ಟಿ ಅವರಂಥವರು ಬಂಟ ಸಮುದಾಯದ ಸಂಪತ್ತಾಗಿದ್ದಾರೆ. ಅವರನ್ನು ಸಂಸ್ಥಾನದ ವಿಶ್ವಸ್ತರನ್ನಾಗಿ ಸೇರಿಸಿಕೊಳ್ಳುವುದೆಂದು ನುಡಿದು ಎಲ್ಲರ ಸಹಕಾರ ಕೋರಿದರು.

ಪುಣೆ  ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರು ಮಾತನಾಡಿ, ಶ್ರೀಪಾದರ ಕನಸಿನ ಯೋಜನೆ ಆಸ್ಪತ್ರೆ ನಿರ್ಮಾಣಕ್ಕೆ ಪುಣೆ ಬಂಟರ ಸಂಘದ ಸಂಪೂರ್ಣ ಸಹಕಾರವಿದೆ. ಪುಣೆಯ ಬಂಟರ ಭವನ ನನ್ನೊಬ್ಬನಿಂದ ಆದದ್ದಲ್ಲ. ಅದರಲ್ಲಿ ಮುಂಬಯಿಯ ಸಮಸ್ತ ಬಂಟ ಮಹಾ ದಾನಿಗಳ ಕೊಡುಗೆಯಿದೆ. ಅದಕ್ಕಾಗಿ ಎಲ್ಲರಿಗೂ ಚಿರ ಋಣಿಯಾಗಿದ್ದೇನೆ. ಸಂಸ್ಥಾನ ಪುಣೆ ಘಟಕವನ್ನು ಸ್ಥಾಪಿಸಲು ಪ್ರಯತ್ನಿಸುತ್ತೇನೆ ಎಂದು ನುಡಿದರು.

ಬೋಂಬೆ ಬಂಟ್ಸ್‌ ಅಸೋ. ಅಧ್ಯಕ್ಷ ನ್ಯಾಯವಾದಿ ಸುಭಾಶ್‌ ಶೆಟ್ಟಿ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮ. ಬಂಟರ ಮೂಲಸ್ಥಾನ ಬಾಕೂìರು ಎಂಬುವುದನ್ನು ಬಂಟ ಸಮುದಾಯಕ್ಕೆ ತೋರಿಸಿ ಕೊಟ್ಟ ಶ್ರೀಪಾದರು ಅಭಿನಂದನಾರ್ಹರು ಎಂದರು.

ಬಾಕೂìರು ಮಹಾಸಂಸ್ಥಾನದ ಮುಂಬಯಿ ಘಟಕದ ಗೌರವಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ ಇವರು ಮಾತನಾಡಿ, ಸಂಸ್ಥಾನಕ್ಕೆ ಸದಾ ಪ್ರೋತ್ಸಾಹ, ಸಹಕಾರ ನೀಡುತ್ತಿರುವ ಬಂಟ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶ್ರೀಪಾದರ ಸಮಾಜೋದ್ಧಾರಕ್ಕೆ ನಾವು ಸದಾ ಬೆಂಬಲ ನೀಡಬೇಕು ಎಂದರು.

ವಿನೋದಾ ಚೌಟ ಅವರು ಪ್ರಾರ್ಥನೆಗೈದರು. ಬಾಕೂìರು ಮಹಾಸಂಸ್ಥಾನ ವಿಶ್ವಸ್ಥ ಹಾಗೂ ಮುಂಬಯಿ ಘಟಕದ ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಟರಲ್ಲಿ, ತುಳು-ಕನ್ನಡಿಗರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಸಂಸ್ಥಾನವು ಎರಡನೆ ಬಾರಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಭಕ್ತರ ಜನಸಂದಣಿಯನ್ನು ಕಂಡು ಶ್ರೀನಿವಾಸ-ಪದ್ಮಾವತಿ ದೇವರೇ ಪ್ರತ್ಯಕ್ಷರಾದಂತೆ ಭಾಸವಾಗುತ್ತಿದೆ. ಸಂಸ್ಥಾನವು ಮುಂದೆಯೂ ಕೂಡ ಈ ಕಾರ್ಯವನ್ನು ಮುಂದುವರಿಸಲಿದೆ. ಡಾ| ವಿಶ್ವ ಸಂತೋಷ ಭಾರತಿ ಶ್ರೀಗಳು ನಮ್ಮ ಜ್ಞಾನದ ಬೆಳಕಾಗಿದ್ದಾರೆ. ಬಾಕೂìರು ಸಂಸ್ಥಾನದ ಪರಿವರ್ತನೆಯಲ್ಲಿ ನಾವೆಲ್ಲರು ಸಹಕರಿಸೋಣ. ಬಂಟರು ಕುಲದೈವದ ಆರಾಧನೆಯನ್ನು ಎಂದಿಗೂ ಕೈಬಿಡಬಾರದು ಎಂದರು.

ಶ್ರೀಗಳಿಗೆ ಗುರುಪೂರ್ಣಿಮೆಯ ಅಂಗವಾಗಿ ಗುರುವಂದನೆ ಸಲ್ಲಿಸಲಾಯಿತು. ಡಾ| ಸತ್ಯಪ್ರಕಾಶ್‌ ಶೆಟ್ಟಿ ಮತ್ತು ಡಾ| ಸಂಗೀತಾ ಶೆಟ್ಟಿ ದಂಪತಿ ಗುರುವಂದನೆ ಸಲ್ಲಿಸಿದರು. ಶೃತಿ ಎಸ್‌. ಶೆಟ್ಟಿ ಶ್ಲೋಕ ಪಠಿಸಿದರು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಹಾಗೂ ಪದಾಧಿಕಾರಿಗಳು ಶ್ರೀಗಳನ್ನು ತುಳಸಿಹಾರ ಹಾಕಿ ಗೌರವಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ಸತ್ಯಾ ಸೀತಾರಾಮ ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಗೌರವ ಅತಿಥಿಯಾಗಿ ಉದ್ಯಮಿ ರಘುರಾಮ ಶೆಟ್ಟಿ, ಬಾಕೂìರು ಮಹಾಸಂಸ್ಥಾನದ ಮುಂಬಯಿ ಘಟಕದ ವಿಶ್ವಸ್ಥ ಭಾಸ್ಕರ ಎಂ. ಶೆಟ್ಟಿ, ಉಪಾಧ್ಯಕ್ಷರುಗಳಾದ ಅಪ್ಪಣ್ಣ ಎಂ. ಶೆಟ್ಟಿ, ರಮೇಶ್‌ ಎಸ್‌. ಶೆಟ್ಟಿ ಉಪಸ್ಥಿತರಿದ್ದರು.

ಬಾಕೂìರು ಸಂಸ್ಥಾನದ ಮುಂಬಯಿ ಘಟಕದ ಉಪಾಧ್ಯಕ್ಷರುಗಳಾದ ಎಸ್‌. ಬಿ. ಶೆಟ್ಟಿ, ಮಹೇಶ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಶಾಂತಾರಾಮ ಬಿ. ಶೆಟ್ಟಿ,   ಜತೆ ಕಾರ್ಯದರ್ಶಿ ಕಾಡೂರು ಸದಾಶಿವ ಶೆಟ್ಟಿ, ಜೊತೆ ಕೋಶಾಧಿಕಾರಿ ವೇಣುಗೋಪಾಲ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆಯರುಗಳಾದ ಲತಾ ಜೆ. ಶೆಟ್ಟಿ, ಸುಲೋಚನಾ ಶೆಟ್ಟಿ, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಭಾಸ್ಕರ್‌ ಎಂ. ಶೆಟ್ಟಿ ಥಾಣೆ, ಎಸ್‌. ಬಿ. ಶೆಟ್ಟಿ ಮುಲುಂಡ್‌, ಸುಬ್ಬಯ್ಯ ಶೆಟ್ಟಿ  ಕಲ್ಯಾಣ್‌-ಭಿವಂಡಿ, ದಿವಾಕರ ಶೆಟ್ಟಿ ಇಂದ್ರಾಳಿ ಡೊಂಬಿವಲಿ, ರಮೇಶ್‌ ಶೆಟ್ಟಿ ಸಿಬಿಡಿ ನವಿಮುಂಬಯಿ, ಅಪ್ಪಣ್ಣ ಎಂ. ಶೆಟ್ಟಿ ಪೊವಾಯಿ, ನ್ಯಾಯವಾದಿ ಡಿ. ಕೆ. ಶೆಟ್ಟಿ ಅಂಧೇರಿ, ಶ್ರೀಧರ ಶೆಟ್ಟಿ ಚೆಂಬೂರು, ಕೃಷ್ಣ ವಿ. ಶೆಟ್ಟಿ ಸಿಟಿ ರೀಜನ್‌, ಭಾಸ್ಕರ ಕೆ. ಶೆಟ್ಟಿ ಮೀರಾರೋಡ್‌, ಮುಂಡಪ್ಪ ಪಯ್ಯಡೆ ಜೋಗೇಶ್ವರಿ, ಹರೀಶ್‌ ಶೆಟ್ಟಿ ಗುರ್ಮೆ ನಲಸೋಪರ, ಭುಜಂಗ ಶೆಟ್ಟಿ ಬೊಯಿಸರ್‌ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಿಶೇಷ ಆಹ್ವಾನಿತರುಗಳಾಗಿ ಎಂ. ಡಿ. ಶೆಟ್ಟಿ, ನ್ಯಾಯವಾದಿ ಆರ್‌. ಸಿ. ಶೆಟ್ಟಿ, ಬಿ. ವಿವೇಕ್‌ ಶೆಟ್ಟಿ, ಸುಧಾಕರ ಎಸ್‌. ಹೆಗ್ಡೆ, ಡಾ| ಪಿ. ವಿ. ಶೆಟ್ಟಿ, ಜಯರಾಮ ಎಸ್‌. ಮಲ್ಲಿ,  ಶಿವರಾಮ ಜಿ. ಶೆಟ್ಟಿ, ವಿರಾರ್‌ ಶಂಕರ್‌ ಶೆಟ್ಟಿ, ಕುಶಲ್‌ ಸಿ. ಭಂಡಾರಿ, ಎಚ್‌. ಪ್ರಕಾಶ್ಚಂದ್ರ ಶೆಟ್ಟಿ, ಜಯಪ್ರಕಾಶ್‌ ಶೆಟ್ಟಿ, ಜಯರಾಮ್‌ ಎನ್‌. ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಕೆ. ಸಿ. ಶೆಟ್ಟಿ, ಸದಾನಂದ ಶೆಟ್ಟಿ, ಚಿತ್ತರಂಜನ್‌ ಶೆಟ್ಟಿ, ಶಾಂತಾರಾಮ ಶೆಟ್ಟಿ, ಸಂಜೀವ ಎನ್‌. ಶೆಟ್ಟಿ, ಬಿ. ಬಾಲಕೃಷ್ಣ ಶೆಟ್ಟಿ, ನ್ಯಾಯವಾದಿ ರತ್ನಾಕರ ಶೆಟ್ಟಿ, ಪ್ರಭಾಕರ ಎಲ್‌. ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಸಲಹಾ ಸಮಿತಿಯ ಜಯಪ್ರಕಾಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಾಜೀವ್‌ ಬಿಜಾಡಿ ಬಳಗ ಬೆಂಗಳೂರು ಇವರಿಂದ ಗಾನ ಲಹರಿ, ಶ್ರೀಪಾದರಿಂದ ಗಾನ ವಿಶ್ಲೇಷಣೆ ನಡೆಯಿತು. ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ಶ್ರೀ ಬಾಕೂìರು ಮಹಾಸಂಸ್ಥಾನ ಮುಂಬಯಿ ಘಟಕವು ಕಳೆದೆರಡು ವರ್ಷ ಗಳಿಂದ ಬಂಟರ ಭವನದಲ್ಲಿ ಆಯೋಜಿ ಸುತ್ತಿರುವ ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮ ಈ ಬಾರಿ ನಿರೀಕ್ಷೆಗೂ ಮೀರಿ ಯಶಸ್ಸುಗೊಂಡಿದೆ. ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರ ಯೋಚನೆಗಳಿಗೆ ಇನ್ನಷ್ಟು ಗರಿ ಬಂದಿದೆ.  ಘಟಕದ ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ, ಗೌರವಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿಯವರ ಜತೆ ಸಂಸ್ಥಾನದ ಯೋಜನೆಗಳ ಸಾಕಾರಕ್ಕೆ ಸಮಿತಿಯ ಪದಾಧಿಕಾರಿಗಳು, ಸದಸ್ಯರೆಲ್ಲರೂ ಉತ್ಸಾಹದಿಂದ ಸೇವೆ ಸಲ್ಲಿಸುತ್ತಿದ್ದಾರೆ. 
-ಐಕಳ ಹರೀಶ್‌ ಶೆಟ್ಟಿ, ಅಧ್ಯಕ್ಷರು, 
ಜಾಗತಿಕ ಬಂಟರ ಸಂಘಗಳ ಒಕ್ಕೂಟ

ಶ್ರೀನಿವಾಸ-ಪದ್ಮವಾತಿ ದೇವರ ಆಶೀರ್ವಾದ ಪಡೆಯಲು ಮತ್ತು ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಲು ಭಕ್ತ ಜನಸಾಗರವೇ ಸೇರಿದೆ. ತುಳು-ಕನ್ನಡಿಗರೆಲ್ಲರು ದೇವರ ಬಗ್ಗೆ, ಗುರುವಿನ ಬಗ್ಗೆ ಇಟ್ಟಿರುವ ನಂಬಿಕೆ ಅನನ್ಯ. ಸಂಸ್ಥಾನದ ಮುಂದಿನ ಯೋಜನೆಗಳು ಯಶಸ್ವಿಯಾಗಲಿ.
-ಪದ್ಮನಾಭ ಎಸ್‌. ಪಯ್ಯಡೆ,
ಅಧ್ಯಕ್ಷರು, ಬಂಟರ ಸಂಘ ಮುಂಬಯಿ

ಬಂಟ ಸಮುದಾಯದ ಒಳಿತಿಗಾಗಿ ಶ್ರೀ ಬಾಕೂìರು ಮಹಾ ಸಂಸ್ಥಾನದ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಸಮಾಜಕ್ಕೆ ಜ್ಞಾನದ ಬೆಳಕನ್ನು ನೀಡುವುದರ ಜೊತೆಗೆ ವಿದ್ಯಾಭಾರತಿ ಮತ್ತು ಆರೋಗ್ಯ ಭಾರತಿ ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ. ಶಿಕ್ಷಣದ ಬಗ್ಗೆ ಬಂಟರಲ್ಲಿ ಈಗೀಗ ವಿಶೇಷ ಕಾಳಜಿ ಕಂಡು ಬರುತ್ತಿದೆ. ಆದರೆ ನಮ್ಮ ಸಮಾಜ ಬಾಂಧವರ ಅದರಲ್ಲೂ ತೀರಾ ಸಂಕಷ್ಟದಲ್ಲಿರುವ ಬಂಟರ ಆರೋಗ್ಯಕ್ಕಾಗಿ ಆಸ್ಪತ್ರೆಯೊಂದನ್ನು ತೆರೆಯುವ ಸ್ವಾಮೀಜಿ ಅವರ ಕನಸು ನನಸಾಗಲಿ. ಈ ಯೋಜನೆಗೆ ನನ್ನ ಸಂಪೂರ್ಣ ಸಹಕಾರವಿದೆ. ಮುಂಬಯಿ ಘಟಕದ  ಸಹಕಾರವಿದ್ದು,  ಸಂಸ್ಥಾನವು ಎತ್ತರಕ್ಕೆ ಬೆಳೆಯುವುದರಲ್ಲಿ  ಸಂಶಯವಿಲ್ಲ.
ಕೆ. ಡಿ. ಶೆಟ್ಟಿ, ಕಾರ್ಯಾಧ್ಯಕ್ಷರು, 
ಭವಾನಿ ಗ್ರೂಪ್‌ ಆಫ್ಕಂಪೆನೀಸ್‌

ಹಲವಾರು ವರ್ಷಗಳಿಂದ ಸಮಾಜಪರ ಕಾರ್ಯಗಳಿಗಾಗಿ ಸ್ಪಂದಿಸುತ್ತಾ ಬಂದಿರುವ ನಾನು ಈ ಹಿಂದೆ ಸಮಾಜಕ್ಕೆ ಏನು ನೀಡಿದ್ದೇನೆ ಎಂಬುವುದನ್ನು ಮರೆತು ಭವಿಷ್ಯದಲ್ಲಿ ಏನು ಮಾಡಬೇಕು ಎಂಬುವುದರ ಬಗ್ಗೆ ಚಿಂತನೆ ಮಾಡುತ್ತೇನೆ.  ಶ್ರೀಗಳ ಕಾರ್ಯದ ಬಗ್ಗೆ ಸ್ವಯಂ ಸ್ಫೂರ್ತಿ ಪಡೆದಿರುವ ನಾನು ಆತ್ಮಸಾಕ್ಷಿಯಾಗಿ ಸಮಾಜ ಸೇವೆ ಮಾಡುತ್ತೇನೆ.
-ಕರುಣಾಕರ ಎಂ. ಶೆಟ್ಟಿ, ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕರು, ವಿ. ಕೆ. ಗ್ರೂಪ್‌ ಆಫ್‌ ಕಂಪೆನೀಸ್‌

ಚಿತ್ರ-ವರದಿ:ಪ್ರೇಮನಾಥ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.