ವಿಪಿಎಂ ಕನ್ನಡ ಪ್ರಾಥಮಿಕ  ಶಾಲೆಯಲ್ಲಿ  ಶಾಲಾ ಪರಿಕರ ವಿತರಣೆ

Team Udayavani, Aug 7, 2018, 3:02 PM IST

0608mum05.jpg

ಮುಂಬಯಿ: ಮುಂಬಯಿ  ವಲಯದ ಲಯನ್ಸ್‌ ಕ್ಲಬ್‌ ಬಳಗದ ವತಿಯಿಂದ ಮುಲುಂಡ್‌ ವಿಪಿಎಂ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಸಭಾಂ ಗಣದಲ್ಲಿ ನಡೆಯಿತು.

ಲಯನ್ಸ್‌ ಕ್ಲಬ್‌ನ ಮಕ್ಕಳ ತಜ್ಞರು ಮತ್ತು ವಿದ್ಯಾ ಪ್ರಸಾರಕ ಮಂಡಳದ ಉಪಾಧ್ಯಕ್ಷರಾದ ಡಾ|  ಮೋಹನ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ನಾನು ಸಹ ಬಡತನದಲ್ಲಿಯೇ ಶಿಕ್ಷಣ ಪಡೆದಿದ್ದೆ. ಮೂಲಭೂತ ವಸ್ತುಗಳ ಕೊರತೆಯಿಂದ ಚಪ್ಪಲಿ ಇಲ್ಲದೆ, ಶಾಲೆಯಲ್ಲಿ ಅಧ್ಯಯನ ಮಾಡಿ ಬಡತನದ ನೋವು, ನಲಿವಿನಿಂದ ಬೆಂದು, ನೊಂದು, ಸೋತು, ಸವೆದು ಇಂದು ಕೆಸರಿನಲ್ಲಿ ಬೆಳೆದ ಕಮಲದಂತೆ ಅರಳಿದ್ದು ಬಡತನದ ಅಮೃತದಿಂದ. ಇದ್ದವರು ಇಲ್ಲದವರಿಗೆ ಸದ್ವಿನಿಯೋಗವಾಗಲು ದಾನ, ಧರ್ಮ, ಸಹಾಯ, ಸಹಕಾರ ಮಾಡಿದರೆ ತಪ್ಪಲ್ಲ ಎಂದು ನುಡಿದರು.

ಮತ್ತೋರ್ವ ಗೌರವ ಅತಿಥಿ ತ್ರಿಲೋಕಿನಾಥ್‌ ಮಾತನಾಡಿ,  ಬಡತನದಲ್ಲಿ ಬೆಂದು, ನೊಂದು, ಸೋತು, ಬಳಲಿದ ಈ ಮಕ್ಕಳಿಗೆ ವಿದ್ಯಾ ವಿಕಾಸಕ್ಕಾಗಿ ದಾನ-ಧರ್ಮ ಮಾಡಲು ಅತ್ಯಂತ ಸಂತೋಷವಾಗುತ್ತದೆ. ಮನ

ದಾಳದಿಂದ, ಉದಾರ ಮನೋಭಾ ವನೆಯಿಂದ ಮಾಡಿದ ದಾನದಿಂದ  ಸಕಾರಾತ್ಮಕದ ವಿದ್ಯುತ್‌ ಸಂಚಾರ ವಾಗುತ್ತದೆ. ಈ ಸಮಾಜ ದಲ್ಲಿ ಇದ್ದವರು ಇಲ್ಲದವರಿಗೆ ಸಹಾಯ-ಸಹಕಾರ ಮಾಡಿದರೆ ಅದಕ್ಕಿಂತ ಮಿಗಿಲಾದ ಹೃದಯ ಶ್ರೀಮಂತಿಕೆ ಮತ್ತು ಹೃದಯ ವಿಶಾಲತೆ ಮತ್ತೂಂದಿಲ್ಲ. ನಾನು ಎನ್ನುವುದರ ಬದಲು ನಾವು ಎನ್ನುವ ಮನೋಭಾವನೆಯಿಂದ ಮಾನವೀಯತೆಯ ಮತ್ತು ಮನು ಷ್ಯತ್ವದ ದೃಷ್ಟಿಯಿಂದ ದೇಶದ ಭವ್ಯ ಭವಿಷ್ಯಕ್ಕಾಗಿ, ದಿವ್ಯಭರಿತವಾದ ಪ್ರಜೆ ಗಳನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಮರೆಯಬಾರದು ಎಂದರು.

ವಿದ್ಯಾ ಪ್ರಸಾರಕ ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಡಾ| ಪಿ. ಎಂ. ಕಾಮತ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,  ಈ ಶೈಕ್ಷಣಿಕ ವರ್ಷದಲ್ಲಿ ಮಂಡಳವು ಹಮ್ಮಿಕೊಳ್ಳುವ ಮೊದಲೇ, ಪ್ರಥಮ ಬಾರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿ, ನಮ್ಮ ವಿದ್ಯಾರ್ಥಿಗಳ ಮೇಲಿನ ಅಪಾರವಾದ ಪ್ರೀತಿ ಮತ್ತು ಕರುಣೆಯಿಂದ, ಬೃಹತ್‌ ಬಳಗ ಆಗಮಿಸಿ ವಿತರಿಸುತ್ತಿರುವುದನ್ನು ನೋಡಿ ಮಹಾದಾನಂದವಾಗುತ್ತಿದೆ. ಮುಂಬಯಿ ವಲಯದ ಲಯನ್ಸ್‌ ಬಳಗಕ್ಕೆ ವಿದ್ಯಾ ಪ್ರಸಾರಕ ಮಂಡಳವು ಕೃತಜ್ಞತೆಯನ್ನು ಅರ್ಪಿಸುತ್ತಿದೆ ಎಂದರು.

ಮುಂಬಯಿ ವಲಯದ ಲಯನ್ಸ್‌  ಕ್ಲಬ್‌ನ ಅಧ್ಯಕ್ಷ ವಿನೂ ಭಗತ್‌ ಅವರು ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಿ ಮಾತನಾಡಿ,  ಈ ಶೈಕ್ಷಣಿಕ ವರ್ಷದ ನಮ್ಮ ಈ ಕಾರ್ಯಕ್ರಮವನ್ನು ವಿಪಿಎಂ ವಿದ್ಯಾ ದೇಗುಲದಲ್ಲಿ ಹಮ್ಮಿಕೊಳ್ಳಲು  ಅವಕಾಶ ಮಾಡಿಕೊಟ್ಟ ವಿದ್ಯಾ ಪ್ರಸಾರಕ ಮಂಡಳಕ್ಕೆ ಮನದಾಳದ ನಮನಗಳು. ಕಳೆದ ಬಾರಿ  ಮುಖ್ಯ ಶಿಕ್ಷಕಿ ಅರುಣಾ ಭಟ್‌ ಅವರು ನನಗೆ ತಿಳಿಸಿದ ಹಾಗೆ ವಿದ್ಯಾರ್ಥಿಗಳು ಕೊಳಚೆ ಪ್ರದೇಶದಿಂದ ಆರ್ಥಿಕ ಅಸ್ಥಿರತೆಯಿಂದ ಬರುತ್ತಿದ್ದು ಬಡತನದಿಂದ ಬಳಲುತ್ತಿರುವ ಅವರಿಗೆ ಶಾಲೆಯಲ್ಲಿಯ ಮೂಲಭೂತ ಅವಶ್ಯಕತೆಗಳನ್ನು ಮಂಡಳವು ಪೂರೈಸುತ್ತದೆ.

ವೇದಿಕೆಯ ಮೇಲೆ ಮಂಡಳದ ಕೋಶಾಧಿಕಾರಿ ಪ್ರೊ| ಸಿ. ಜೆ. ಪೈ ಮತ್ತು ಮುಂಬಯಿ ವಲಯದ ಲಯನ್ಸ್‌  ಕ್ಲಬ್‌ನ ಪದಾಧಿಕಾರಿಗಳಾದ ಕಾರ್ಯದರ್ಶಿ ಸಂದೀಪ್‌ ಡೊಂಗ್ರೆ, ಕೋಶಾಧಿಕಾರಿ ಬಾಸ್ಕರ್‌ ಲೊಹಕರೆ, ಪ್ರಕಾಶ್‌ ಚರತ್ಕರ್‌, ಆಲೆøಡ್‌, ಮೋಹನ್‌ ಸಲಿತ್ರಿ ಉಪಸ್ಥಿತರಿದ್ದರು. 

ಅಥಿತಿ ಗಣ್ಯರ ಪರಿಚಯವನ್ನು ಶಿಕ್ಷಕಿ ಲಕ್ಷ್ಮೀ ಕೆಂಗನಾಳ ಮಾಡಿಕೊಟ್ಟರು. ವಿದ್ಯಾರ್ಥಿಗಳ ಯಾದಿಯನ್ನು ಶಿಕ್ಷಕಿ ರೇಖಾ ರಾವ್‌ ಓದಿದರು. ಶಾಲಾ ಪರಿವೀಕ್ಷಕಿ   ಶೋಭಾ ದೇಶಪಾಂಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಟಾಪ್ ನ್ಯೂಸ್

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.