ಘಾಟ್‌ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿ ಮಹಿಳಾ ವಿಭಾಗ:ಆಟಿಡೊಂಜಿ ಕೂಟ
Team Udayavani, Aug 7, 2018, 3:32 PM IST
ಮುಂಬಯಿ: ಸಂಸ್ಥೆಯ ಮಹಿಳೆಯರು ಎಲ್ಲರನ್ನೂ ಒಗ್ಗೂಡಿಸಿ ಉತ್ತಮ ಕಾರ್ಯಕ್ರಮವನ್ನು ಆಯೋ ಜಿಸಿದ್ದಾರೆ. ನಮ್ಮ ಹಿರಿಯರು ನೀಡಿದ ಸಂಸ್ಕೃತಿ, ಸಂಸ್ಕಾರಗಳು ಇದರಿಂದ ಮನವರಿಕೆಯಾಗುತ್ತಿದೆ. ನಮ್ಮ ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಹಿಂದಿನ ಆಹಾರ ಪದ್ಧತಿ ಕಾಲ ಬದಲಾದಂತೆ ಬದಲಾಗಿರುವುದು ವಿಷಾದನೀಯ. ಮಕ್ಕಳಿಗೆ ಕೇವಲ ಉನ್ನತ ಶಿಕ್ಷಣವನ್ನು ನೀಡಿದರೆ ಸಾಲದು, ಅವರಿಗೆ ನಮ್ಮ ಮೂಲ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಲ್ಲೂ ನಾವು ಮುಂದಾಗಬೇಕು. ಅಂತಹ ವಿಭಿನ್ನ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯು ಆಯೋಜಿಸಿರುವುದು ಅಭಿನಂದನೀಯವಾಗಿದೆ ಎಂದು ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅವರು ನುಡಿದರು.
ಜು. 29 ರಂದು ಘಾಟ್‌ಕೋಪರ್ ಪೂರ್ವದ ಪಂತ್ ನಗರದಲ್ಲಿರುವ ಕನ್ನಡ ವೆಲ್ಫೆàರ್ ಸೊಸೈಟಿಯ ಶ್ರೀ ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್ ಆಫ್ ಕಂಪೆನಿ ಸಭಾಗೃಹದಲ್ಲಿ ನಡೆದ ಸಂಸ್ಥೆಯ ಮಹಿಳಾ ವಿಭಾಗದವರ ಆಟಿಡೊಂಜಿ ದಿನ ಮತ್ತು ಅಟಿಲ್ ಅರಗಣೆ ಪಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಂತಹ ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಪೀಳಿಗೆಗೆ ನಮ್ಮ ಮೂಲ ಸಂಸ್ಕೃತಿಯ ಅರಿವು ಮೂಡಿಸುತ್ತಿದ್ದೇವೆ. ಮುಂದಿನ ಡಿಸೆಂಬರ್‌ನಲ್ಲಿ ನಮ್ಮ ಸಂಸ್ಥೆಯ ಸುವರ್ಣ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದು ಮಹಿಳಾ ಸದಸ್ಯೆಯರನ್ನು ಅಭಿನಂದಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ನಗರ ಸೇವಕಿ ರಾಖೀ ಜಾಧವ್ ಅವರು, ಕಳೆದ ಹಲವಾರು ವರ್ಷಗಳಿಂದ ಕನ್ನಡ ವೆಲ್ಫೆàರ್ ಸೊಸೈಟಿಯು ಹಮ್ಮಿ ಕೊಳ್ಳುತ್ತಿರುಉವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ಪರಿವಾರದವರ ಕಾರ್ಯಕ್ರಮ ಎಂಬ ಭಾವನೆ ನನ್ನಲ್ಲಿ ಮೂಡುತ್ತಿದೆ. ತುಳು-ಕನ್ನಡಿಗರ ಪ್ರೀತಿ, ಮಾರ್ಗದರ್ಶನ, ಸಹಕಾರ ನನಗೆ ನಿರಂತರವಾಗಿ ದೊರಕಿದೆ. ಆ ಜವಾಬ್ದಾರಿ, ಕಾಳಜಿಯನ್ನು ಅರಿತು ನಾನು ನಿಮ್ಮೊಂದಿಗೆ ಇದ್ದು ಸಹಕರಿಸುತ್ತಿದ್ದೇನೆ. ಇಂತಹ ಕಾರ್ಯಕ್ರಮಗಳಿಂದ ನಾಡಿನ ಸಂಸ್ಕೃತಿ, ಸಂಸ್ಕಾರಗಳು ಉಳಿಯಲು ಸಾಧ್ಯವಿದೆ ಎಂದರು.
ಆಟಿ ತಿಂಗಳಲ್ಲಿ ಕಷ್ಟ ಇತ್ತು ಎಂಬ ಪರಿಕಲ್ಪನೆ ನಮ್ಮಲಿದೆ. ಈಗ ಆ ಕಷ್ಟದ ಜೀವನ ಮರೆಯಾಗಿದೆ. ಬದುಕು ವೈಭವೀಕರಣಗೊಂಡಿದೆ. ಅಂದಿನ ಖಾದ್ಯ ಪದಾರ್ಥಗಳು ಇಂದಿನ ಮಕ್ಕಳಿಗೆ ತಿಳಿದಿಲ್ಲ. ಅದನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸುತ್ಯರ್ಹ. ನಮ್ಮ ಭಾಷೆ, ಸಂಸ್ಕೃತಿ, ಕಲೆ, ಆಚರಣೆಯ ಬಗ್ಗೆ ಅರಿವುಮೂಡಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಾಹಿತಿ, ನಿವೃತ್ತ ಶಿಕ್ಷಕಿ ಡಾ| ವಾಣಿ ಉಚ್ಚಿಲ್ಕರ್ ಹೇಳಿದರು.
ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ತುಳುವರಾದ ನಾವು ಎಲ್ಲಿ ಹೋದರೂ ನಮ್ಮ ಸಂಸ್ಕೃತಿ, ಕಲೆ, ಆಚರಣೆಯನ್ನು ಮರೆತವರಲ್ಲ. ತುಳುನಾಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ನಿರಂತರವಾಗಿ ಸಂಘಟನೆಗಳಿಂದ ನಡೆಯುತ್ತಿರಲಿ. ಕೆಲವೊಂದು ನಂಬಿಕೆಗಳ ಮೂಲಕ ನಮ್ಮ ಹಿರಿಯರು ಆಚರಣೆಗಳನ್ನು ನಡೆಸುತ್ತಿದ್ದರು. ನಮ್ಮ ಹಿರಿಯರು ಶ್ರಮಜೀವಿಗಳು. ಇದ್ದುದರಲ್ಲಿ ತೃಪ್ತಿ ಪಡೆದವರು. ಆದರೆ ಇಂದು ನಮ್ಮಲ್ಲಿ ಎಲ್ಲವೂ ಇದೆ. ಆದರೆ ತೃಪ್ತಿ ಎಂಬುವುದಿಲ್ಲ. ಆಧುನಿಕತೆ ನಮಗೆ ಬೇಕೇ ಹೊರತು ಆಧುನಿಕತೆಯ ಜೀವನದಲ್ಲಿ ನಾವು ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ಮರೆಯಬಾರದು ಎಂದು ಸಾಫಲ್ಯ ತ್ತೈಮಾಸಿಕ ಪತ್ರಿಕೆಯ ಸಂಪಾದಕಿ ಡಾ| ಜಿ. ಪಿ. ಕುಸುಮಾ ಹೇಳಿದರು.
ಇದೇ ಸಂದರ್ಭದಲ್ಲಿ ಆಟಿಡೊಂಜಿ ದಿನ ಹಾಗೂ ಅಟಿಲ್ ಅರಗಣೆ ಪಂತ ಎಂಬ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಜಯಂತಿ ಆರ್. ಮೊಲಿ, ಕೋಶಾಧಿಕಾರಿ ಪ್ರಮೀಳಾ ಆರ್. ಶೆಟ್ಟಿ, ಜತೆ ಕೋಶಾಧಿಕಾರಿ ಮಲ್ಲಿಕಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ, ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಸದಸ್ಯೆ ಪಲ್ಲವಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವೆಲ್ಫೆàರ್ ಸೊಸೈಟಿಯ ಕಾರ್ಯದರ್ಶಿ ಸುಧಾಕರ ಎಲ್ಲೂರು, ಉಪಾಧ್ಯಕ್ಷ ಜಯರಾಜ್ ಜೈನ್, ಕೋಶಾಧಿಕಾರಿ ಹರೀಶ್ ಶೆಟ್ಟಿ, ಜತೆ ಕೋಶಾಧಿಕಾರಿ ಪೀಟರ್ ರೊಡ್ರಿಗಸ್, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಸದಸ್ಯರಾದ ರಾಧಾಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ತಿಮ್ಮ ದೇವಾಡಿಗ, ಹಿರಿಯಣ್ಣ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯೆಯರಾದ ವೈಶಾಲಿ ಶೆಟ್ಟಿ, ಶಕುಂತಳಾ, ಚಂದ್ರಾವತಿ, ಉಷಾ ಶೆಟ್ಟಿ, ಮಮತಾ ಶೆಟ್ಟಿ, ಇಂದಿರಾ ಪೂಜಾರಿ,
ರಮಾ ಶೆಟ್ಟಿ, ವಿಮಲಾ, ಆಶಾ, ವಿದ್ಯಾ ಶೇಟ್ ಮೊದಲಾದವರು ಸಹಕರಿಸಿದರು. ಮಕ್ಕಳಿಂದ ನೃತ್ಯ ವೈವಿಧ್ಯ, ಆಡಿ ಕಡೆಂಜ ಪ್ರಾತ್ಯಕ್ಷಿಕೆ ನಡೆಯಿತು. ಬಂಟರ ವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಮತ್ತು ಸಂಘದ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಹಾಗೂ ಅನೇಕ ಗಣ್ಯರು, ಸಂಸ್ಥೆಯ ಸದಸ್ಯರು, ಸದಸ್ಯೆಯರು ಉಪಸ್ಥಿತರಿದ್ದರು.
ಹಿಂದಿನ ಕಾಲದಲ್ಲಿ ಆಟಿ ತಿಂಗಳು ತುಂಬಾ ಕಷ್ಟದ ದಿನವಾಗಿತ್ತು. ಆದರೆ ನಮ್ಮ ಹಿರಿಯರು ತುಂಬಾ ಬುದ್ಧಿವಂತರಾಗಿದ್ದರು. ಆಟಿ ತಿಂಗಳಲ್ಲಿ ಹೆಚ್ಚಾಗಿ ಔಷಧಿಯ ಗುಣವುಳ್ಳ ವಿಭಿನ್ನ ಸೊಪ್ಪುಗಳನ್ನು ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಅಂದಿನ ಜೀವನ ಪದ್ಧತಿ, ಆಚಾರ, ವಿಚಾರಗಳನ್ನು ಇಂದಿನ ಯುವ ಜನಾಂಗಕ್ಕೆ ಅದರ ಅರಿವು ಮೂಡಿಸುತ್ತಿರುವ ಸೊಸೈಟಿಯ ಕಾರ್ಯ ಅಭಿನಂದನೀಯವಾಗಿದೆ.
-ಶಾರದಾ ಶ್ಯಾಮ್ ಶೆಟ್ಟಿ, ಕಾರ್ಯಾಧ್ಯಕ್ಷೆ, ಬೋಂಬೆ ಬಂಟ್ಸ್ ಅಸೋ. ಮಹಿಳಾ ವಿಭಾಗ
ಚಿತ್ರ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ
ಮನಮುಟ್ಟಿದ ನೃತ್ಯ; ಇಂದಿನ ಜಗತ್ತಿನಲ್ಲಿ ಅರ್ಧನಾರೀಶ್ವರನ ಪ್ರಸ್ತುತಿ
Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ
Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು
ಬ್ರಿಟನ್‌ನ “ಅನಿವಾಸಿ.ಕಾಂ’ ಸಾಹಿತ್ಯ ಜಾಲಜಗುಲಿಗೆ ದಶಮಾನೋತ್ಸವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.