ನಾಯಕ ಫಾ ಡು ಪ್ಲೆಸಿಸ್ಗೆ ಗಾಯ
Team Udayavani, Aug 8, 2018, 6:00 AM IST
ಕೊಲಂಬೊ: ಬಲ ಭುಜದ ಗಾಯದಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಅವರು ಶ್ರೀಲಂಕಾ ವಿರುದ್ಧದ ಇನ್ನುಳಿದ ಎರಡು ಏಕದಿನ ಮತ್ತು ಏಕೈಕ ಟ್ವೆಂಟಿ20 ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ರವಿವಾರ ನಡೆದ ಮೂರನೇ ಏಕದಿನ ಪಂದ್ಯದ 10ನೇ ಓವರ್ ವೇಳೆ ಕ್ಯಾಚ್ ಪಡೆಯುವ ವೇಳೆ ಪ್ಲೆಸಿಸ್ ತಿರುಗಿ ನೆಲಕ್ಕೆ ಬಿದ್ದಿದ್ದರು. ಚಿಕಿತ್ಸೆಗಾಗಿ ಅವರು ತತ್ಕ್ಷಣ ಮೈದಾನ ತೊರೆದಿದ್ದರು. ಗಾಯದಿಂದಾಗಿ ಅವರು ಮತ್ತೆ ಆ ಪಂದ್ಯದಲ್ಲಿ ಆಡಿಲ್ಲ. ಪೂರ್ಣವಾಗಿ ಚೇತರಿಸಿಕೊಳ್ಳಲು ಅವರಿಗೆ ಆರು ವಾರಗಳ ಅಗತ್ಯವಿದೆ ಎನ್ನಲಾಗಿದೆ.
ಫಾ ಡು ಅವರು ದುರದೃಷ್ಟವಶಾತ್ ಗಾಯದ ಸಮಸ್ಯೆಗೆ ಸಿಲುಕಿದ್ದು ಪ್ರವಾಸದ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಆರು ವಾರ ವಿಶ್ರಾಂತಿ ಪಡೆಯಬೇಕಾಗಿದೆ. ಅವರು ಮರಳುವ ದಿನಾಂಕವನ್ನು ಆಬಳಿಕ ಪ್ರಕಟಿಸಲಾಗುವುದು ಎಂದು ದಕ್ಷಿಣ ಆಫ್ರಿಕಾದ ತಂಡ ವ್ಯವಸ್ಥಾಪಕ ಮೊಹಮ್ಮದ್ ಮೂಸಾಜೀ ಅವರು ಹೇಳಿದ್ದಾರೆ. ಅವರು ತಂಡದ ವೈದ್ಯಕೀಯ ವೈದ್ಯರೂ ಆಗಿದ್ದಾರೆ. ಪ್ಲೆಸಿಸ್ ಬದಲಿಗೆ ಯಾರನ್ನು ಆಡಿಸುವ ಕುರಿತು ಸದ್ಯವೇ ಪ್ರಕಟಿಸ ಲಾಗುವುದು. ಇನ್ನುಳಿದ ಮೂರು ಪಂದ್ಯಗಳಿಗೆ ಹೆಚ್ಚುವರಿ ಆಟಗಾರರ ಸೇರ್ಪಡೆ ಮಾಡಲಾಗುವುದಿಲ್ಲ.
ರವಿವಾರ ಪ್ಲೆಸಿಸ್ ಮೈದಾನ ತೊರೆದ ಬಳಿಕ ಕ್ವಿಂಟನ್ ಡಿ ಕಾಕ್ ತಂಡದ ನೇತೃತ್ವ ವಹಿಸಿದ್ದರು. ಎರಡು ಬಾರಿ ತೀರ್ಪು ಪ್ರಶ್ನಿಸಿ ಯಶಸ್ವಿಯಾಗಿದ್ದರು. ಅವರಿಗೆ ಮತ್ತೆ ನಾಯಕತ್ವ ವಹಿಸುವ ಸಾಧ್ಯತೆಯಿದೆ. ಮಾಜಿ ನಾಯಕ ಹಾಶಿಮ್ ಆಮ್ಲ ಅವರಿಗೆ ನಾಯಕತ್ವ ವಹಿಸಲು ಕೇಳಿಕೊಳ್ಳುವ ನಿರೀಕ್ಷೆಯಿದೆ ಇಲ್ಲದಿದ್ದರೆ ಐಡೆನ್ ಮಾರ್ಕ್ರಾಮ್ ಮತ್ತೆ ತಂಡವನ್ನು ಮುನ್ನಡೆಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.