ಬ್ಲೂವೇಲ್ ಬಳಿಕ ಮೊಮೊ
Team Udayavani, Aug 8, 2018, 8:20 AM IST
ಆರ್ಜೆಂಟೀನಾ: ‘ಬ್ಲೂವೇಲ್ ಚಾಲೆಂಜ್’ ಆನ್ ಲೈನ್ ಗೇಮ್ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಈ ಅಪಾಯಕಾರಿ ಆಟಕ್ಕೆ ಇಡೀ ವಿಶ್ವವೇ ತತ್ತರಿಸಿಹೋಗಿತ್ತು. ಮೊನ್ನೆ ಮೊನ್ನೆಯಷ್ಟೇ ಕೀಕಿ ಡಾನ್ಸ್ ಕೂಡ ಇದೇ ರೀತಿಯ ಆತಂಕ ಸೃಷ್ಟಿಸಿತ್ತು. ಇವೆಲ್ಲದರ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಇಂಥ ಗೇಮ್ ಗಳಿಗೆ ಬಲಿಯಾಗುವವರ ಸಂಖ್ಯೆ ನಿಂತಿಲ್ಲ. ಈ ಬೆನ್ನಿಗೇ ಇದೀಗ ಇಂಥದ್ದೇ ಮತ್ತೂಂದು ಪ್ರಳಯಾಂತಕ ಆನ್ ಲೈನ್ ಗೇಮ್ ‘ಮೊಮೊ’ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಇದೂ ಬ್ಲೂವೇಲ್ ರೀತಿ ಸವಾಲೊಡ್ಡುವ ಆಟವಾಗಿದೆ.
ಲ್ಯಾಟಿನ್ ಅಮೆರಿಕದಲ್ಲಿ ‘ಮೊಮೊ’ ಸವಾಲಿಗೆ 12ರ ಬಾಲಕಿ ಬಲಿಯಾದ ಘಟನೆಯ ಬೆನ್ನಲ್ಲೇ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಪೊಲೀಸರು ಈ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಭಾರತಕ್ಕೆ ಕಾಲಿಟ್ಟ ಉದಾಹರಣೆಗಳೇನು ವರದಿಯಾಗಿಲ್ಲ. ಆದರೆ ಸಾಮಾಜಿಕ ಜಾಲತಾಣ ಮುಕ್ತವಾಗಿರುವ ಕಾರಣ ಇಂಥ ಸವಾಲು ಫೇಸ್ ಬುಕ್, ಟ್ವಿಟರ್ ನಂಥ ಮಾಧ್ಯಮದ ಮೂಲಕ ಎದುರಾಗಿದ್ದರೆ ಅಚ್ಚರಿಯಿಲ್ಲ.
ಏನಿದು ಮೊಮೊ? ಬ್ಲೂವೇಲ್ ಗೂ ಇದಕ್ಕೂ ಬಹಳ ವ್ಯತ್ಯಾಸವೇನೂ ಇಲ್ಲ. ಆದರೆ ಮೊಮೊಗೆ ವೇದಿಕೆಯಾಗಿದ್ದು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್. ಬ್ಲೂವೇಲ್ ರೀತಿಯಲ್ಲೇ ಮೊಮೊದಲ್ಲಿಯೂ ಅಂತಿಮವಾಗಿ ಆತ್ಮಹತ್ಯೆಗೆ ಶರಣಾಗುವಂತೆ ಸವಾಲೊಡ್ಡಲಾಗುತ್ತದೆ. ಇದಕ್ಕೂ ಮೊದಲು ಸ್ಪರ್ಧಿ ಬೇರೆ ಬೇರೆ ಹಂತದಲ್ಲಿ ಪ್ರತಿಯೊಂದು ಸವಾಲುಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವಂತೆ ಮನಸ್ಥಿತಿಯನ್ನೇ ಬದಲಾಯಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.